ಪತ್ನಿ, ಪುತ್ರಿ ಮೇಲೆ ಅತ್ಯಾಚಾರ: ಮಾನಸಿಕ ಅಸ್ವಸ್ಥನ ಕರೆ ನಂಬಿ ಮನೆಗೆ ಹೋಗಿ ಬೇಸ್ತುಬಿದ್ದ ಪೊಲೀಸರು

ಮನೆಗೆ ನುಗ್ಗಿರುವ ದುಷ್ಕರ್ಮಿಗಳು ತಮ್ಮ ಪತ್ನಿ ಹಾಗೂ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ವ್ಯಕ್ತಿ ಮಾಡಿದ ಕರೆಯನ್ನು ನಂಬಿ ಮನೆಗೆ ಭೇಟಿ ನೀಡಿದ್ದ ಯಲಹಂಕ ಪೊಲೀಸರು ನಂತರ ಮನೆಯ ಪರಿಸ್ಥಿತಿಯನ್ನು ನೋಡಿ ಬೇಸ್ತುಬಿದ್ದಿರುವ ಘಟನೆ ಭಾನುವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆಗೆ ನುಗ್ಗಿರುವ ದುಷ್ಕರ್ಮಿಗಳು ತಮ್ಮ ಪತ್ನಿ ಹಾಗೂ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದಾರೆಂದು ವ್ಯಕ್ತಿ ಮಾಡಿದ ಕರೆಯನ್ನು ನಂಬಿ ಮನೆಗೆ ಭೇಟಿ ನೀಡಿದ್ದ ಯಲಹಂಕ ಪೊಲೀಸರು ನಂತರ ಮನೆಯ ಪರಿಸ್ಥಿತಿಯನ್ನು ನೋಡಿ ಬೇಸ್ತುಬಿದ್ದಿರುವ ಘಟನೆ ಭಾನುವಾರ ನಡೆದಿದೆ. 
ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ಪೊಲೀಸರ ನಮ್ಮ 100ಕ್ಕೆ ದೂರವಾಣಿ ಕರೆ ಮಾಡಿರುವ ವ್ಯಕ್ತಿಯೊಬ್ಬ ನನ್ನ ಪತ್ನಿ ಹಾಗೂ ಪುತ್ರಿ ಮೇಲೆ ಯಾರೋ ಅಪರಿಚಿತರು ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾರೆಂದು ಹೇಳಿದ್ದಾರೆ. ಈ ಮಾಹಿತಿ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು 2 ತಂಡಗಳಾಗಿ ಅಪರಾಧ ಪತ್ತೆಗಾಗಿ ಮನೆ ಮನೆ ಹುಡುಕಾಟ ನಡೆಸುತ್ತಾರೆ. ಬಳಿಕ ಕರೆ ಬಂದ ಮನೆಯನ್ನು ಪತ್ತೆ ಮಾಡಿ, ಮನೆಯೊಳಗೆ ಪ್ರವೇಶಿಸಿದ ಪೊಲೀಸರು ಕರೆ ಮಾಡಿದ ವ್ಯಕ್ತಿಯ ಪತ್ನಿ ಹಾಗೂ ಪುತ್ರಿ ಟಿವಿ ನೋಡುತ್ತಾ ಕುಳಿತಿರುವುದನ್ನು ಕಂಡು ಬೇಸ್ತುಬಿದ್ದಿದ್ದಾರೆ. 
ಬಳಿಕ ಅಚ್ಚರಿಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕರೆ ಮಾಡಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಮತ್ತು ಆತನಿಗೆ ಇಂತಹು ಸುಳ್ಳು ಸುದ್ದಿ ಹಬ್ಬಿಸಿ ಜನರಿಗೆ ಗಾಬರಿ ಹುಟ್ಟಿಸುವ ಚಟವಿದೆ ಎಂಬುದು ತಿಳಿದಿದೆ.
ಅತ್ಯಾಚಾರ, ಕೊಲೆ ಬಗ್ಗೆ ರಾಮಕೃಷ್ಣ ಅವರ ಪತ್ನಿಯನ್ನು ಪ್ರಶ್ನಿಸಿದಾಗ, ತಮ್ಮ ಪತಿ ಮಾನಸಿಕ ಅಸ್ವಸ್ಥರಾಗಿದ್ದು, ಇದೇ ರೀತಿ ಸಂಬಂಧಿಕರು ಮತ್ತು ಸ್ನೇಹಿತರಿಕೆ ಕರೆ ಮಾಡಿ ಆತಂಕ ಉಂಟು ಮಾಡುತ್ತಿರುತ್ತಾರೆ. ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗಿಲ್ಲ. ಪತಿಯ ತಪ್ಪಿಗೆ ಕ್ಷಮೆಯಾಚಿಸುವುದಾಗಿ ಮಹಿಳೆ ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಮನೆ ಬಳಿ ಬಂದ ಕೂಡಲೇ ರಾಮಕೃಷಅಣ ಯಲಹಂಕದಲ್ಲಿರುವ ತನ್ನ ತೋಟದ ಬಳಿ ತೆರಳಿದ್ದಾನೆ. ಹುಸಿ ಕರೆಯಿಂದಾ ಆತಂಕಗೊಂಡಿದ್ದ ಯಲಹಂಕ ಪೊಲೀಸರು ನಿಜ ಸಂಗತಿ ತಿಳಿದು ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com