ಬೆಳ್ಳಂದೂರು ಕೆರೆ ಮಾಲಿನ್ಯ: ಸಮಸ್ಯೆ ಬಗೆಹರಿಸುವ ಯೋಜನೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಎನ್ ಜಿಟಿ ಸೂಚನೆ

ಬೆಳಂದೂರು ಕೆರೆ ಸಮಸ್ಯೆ ಬಗೆಹರಿಸಲು ಕೈಗೊಂಡಿರುವ ಯೋಜನೆಯನ್ನು ತನ್ನ ಮುಂದೆ ಮಂಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.
ಕಲುಷಿತ ಬೆಳಂದೂರು ಕೆರೆಯ ಚಿತ್ರ
ಕಲುಷಿತ ಬೆಳಂದೂರು ಕೆರೆಯ ಚಿತ್ರ

ಬೆಂಗಳೂರು: ಬೆಳ್ಳಂದೂರು ಕೆರೆ ಸಮಸ್ಯೆ ಬಗೆಹರಿಸಲು ಕೈಗೊಂಡಿರುವ  ಯೋಜನೆಯನ್ನು ತನ್ನ ಮುಂದೆ ಮಂಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ.

ಕೆರೆ ಸ್ವಚ್ಛತೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಮೇಲ್ದರ್ಜೇಗೇರಿಸುವಿಕೆ, ಒಳಚರಂಡಿ ನೀರು ಕೆರೆ ಸೇರುವುದು ತಡೆಯುವಿಕೆ ಮತ್ತಿತರ ಸಂಬಂಧ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಜ.29ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಎನ್ ಜಿಟಿ ಸೂಚಿಸಿದೆ  ಎಂದು ಶರಣ್ಸ್  ಜೈನ್ ಸಂಸ್ಥೆ ಪರ ವಕೀಲರು ತಿಳಿಸಿದ್ದಾರೆ.

ಮಾಲಿನ್ಯದಿಂದ ಬೆಂಕಿ ಹೊತ್ತಿಕೊಳ್ಳುತ್ತಿಲ್ಲ , ಕೆಲ ದುಷ್ಕರ್ಮಿಗಳು ಬೆಂಕಿ ಹೊತ್ತಿಸುತ್ತಿದ್ದಾರೆ ಎಂದು ರಾಜ್ಯಸರ್ಕಾರ ಪರ ವಕೀಲರು ವಾದಿಸಿದ್ದಾರೆ . ಕಳೆದ ವಾರ ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ತಗ್ಗಿಸುವಂತೆ ಎನ್ ಬಿಎಫ್  ಸಂಸ್ಥೆ ಸಿಇಓ ಶ್ರೀಧರ್ ಪಬ್ಬಿಶೆಟ್ಟಿಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ವೈಜ್ಞಾನಿಕ ವಿಧಾನಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ, ಸರ್ಕಾರ ವಿಳಂಬ ಧೋರಣೆ ಕೈ ಬಿಟ್ಟು, ತಜ್ಞರ ಸಮಿತಿ ವರದಿ ಆಧಾರದ ಮೇಲೆ ಕ್ರಮ ಕೈಗೊಂಡು ಬೆಳಂದೂರು ಕೆರೆಗೆ ಪುನರ್ ಜೀವನ ನೀಡಬೇಕಾಗಿದೆ ಎಂದು ಶ್ರೀಧರ್ ಪಬ್ಬಿಶೆಟ್ಟಿ  ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com