ಬೆಂಗಳೂರು: ಐಟಿ ಉದ್ಯೋಗ ಸಿಕ್ಕಿದೆಯೆಂದು ನಕಲಿ ಫೋನ್ ಕರೆ ನಂಬಿ 50 ಸಾವಿರ ರೂ. ಕಳೆದುಕೊಂಡ ಯುವತಿ

ಶಂಕಾಸ್ಪದ ಹ್ಯಾಕಿಂಗ್ ಪ್ರಕರಣವೊಂದರಲ್ಲಿ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿ ಆಕ್ಸೆಂಚರ್ ಹೆಸರಿನಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಂಕಾಸ್ಪದ ಹ್ಯಾಕಿಂಗ್ ಪ್ರಕರಣವೊಂದರಲ್ಲಿ ಬಹುರಾಷ್ಟ್ರೀಯ ಸಾಫ್ಟ್ ವೇರ್ ಕಂಪೆನಿ ಆಕ್ಸೆಂಚರ್  ಹೆಸರಿನಲ್ಲಿ ಕಳುಹಿಸಲಾದ ಉದ್ಯೋಗ ಪತ್ರವನ್ನು ನಂಬಿ ಯುವತಿಯೊಬ್ಬರು 50,000 ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. 
ನಂಬಿಕಸ್ಛ ಐಡಿ ಸಂಖ್ಯೆಯಿಂದ ಯುವತಿಗೆ ಉದ್ಯೋಗ ನೀಡಿಕೆಯ ಪತ್ರ ಇಮೇಲ್ ನಲ್ಲಿ ಬಂದಿದ್ದನ್ನು ನಂಬಿದ ಯುವತಿ ಮೋಸ ಹೋಗಿದ್ದಾರೆ.
22 ವರ್ಷದ ಯುವತಿ ರೂಪಾ ಬಿ(ಹೆಸರು ಬದಲಿಸಲಾಗಿದೆ) ಎಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗ ಹುಡುಕುತ್ತಿದ್ದರು. ಅನೇಕ ಉದ್ಯೋಗದ ಪೋರ್ಟಲ್ ನಲ್ಲಿ ತಮ್ಮ ಬಯೋಡಾಟಾವನ್ನು ಕಳುಹಿಸುತ್ತಿದ್ದರು. ಒಂದು ದಿನ ಆಕ್ಸೆಂಚರ್ ನಲ್ಲಿ ಸಂದರ್ಶನವಿದೆಯೆಂದು ರೂಪಾಗೆ ಇಮೇಲ್ ಬಂತು. 
ಕಳೆದ ಜನವರಿ 10ರಂದು ಸಾಯಂಕಾಲ ಸುಮಾರು 4.30ರ ಸುಮಾರಿಗೆ ದೂರವಾಣಿಯಲ್ಲಿ ತಾಂತ್ರಿಕ ಮತ್ತು ಹೆಚ್ ಆರ್ ಸುತ್ತಿನ ಸಂದರ್ಶನವನ್ನು ಸುಮಾರು 15ರಿಂದ 20 ನಿಮಿಷಗಳ ಕಾಲ ನಡೆಸಲಾಯಿತು. ಎರಡು ದಿನ ಕಳೆದ ನಂತರ ಇಮೇಲ್ ವಿಳಾಸವೊಂದರಿಂದ ಉದ್ಯೋಗ ನೇಮಕಾತಿ ಪತ್ರ ಬಂದಿತು ಎಂದು ರೂಪಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.
ಉದ್ಯೋಗಕ್ಕೆ ಹೊಸಬರಾಗಿರುವುದರಿಂದ ತರಬೇತಿಗೆ 50,000 ರೂಪಾಯಿ ನೀಡಬೇಕೆಂದು ರೂಪಾಗೆ ಇಮೇಲ್ ನಲ್ಲಿ ತಿಳಿಸಲಾಯಿತು. ಅದರಂತೆ ರೂಪಾ ಹಣವನ್ನು ವರ್ಗಾಯಿಸಿದರು. ನಂತರ ರೂಪಾಗೆ ಉದ್ಯೋಗದ ಐಡಿ ಸಂಖ್ಯೆ ಕೊಟ್ಟು ಕಂಪೆನಿಗೆ ವರದಿ ಮಾಡಿಕೊಳ್ಳುವಂತೆ ಹೇಳಲಾಯಿತು. ಈ ಸಂದರ್ಭದಲ್ಲಿ hr@accenture.com ಎಂಬ ಅಕೌಂಟ್ ನಿಂದ ಇಮೇಲ್ ಬಂದಿತ್ತು.
ಜನವರಿ 19ರಂದು ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್ ವಿಲೇಜ್ ಕಂಪೆನಿಗೆ ರೂಪಾ ಹೋದರು. ಅಲ್ಲಿಗೆ ಹೋದಾಗ ತಾವು ಯಾವುದೇ ಇಮೇಲ್ ಕಳುಹಿಸಲಿಲ್ಲ ಎಂದು ಗೊತ್ತಾಗಿ ಆಘಾತವಾಯಿತು. ರೂಪಾಳನ್ನು ಆ ಕಂಪೆನಿ ಕೆಲಸಕ್ಕೆ ತೆಗೆದುಕೊಂಡಿರಲಿಲ್ಲ ಮತ್ತು ಯಾವುದೇ ಹಣವನ್ನು ಕೂಡ ಪಡೆದಿರಲಿಲ್ಲ.
ತಾವು ಮೋಸ ಹೋಗಿರುವುದು ಗೊತ್ತಾಗಿ ರೂಪಾ ನಗರ ಸೈಬರ್ ಕ್ರೈಮ್ ಪೊಲೀಸ್ ನಿಲ್ದಾಣದಲ್ಲಿ ದೂರು ದಾಖಲಿಸಿದರು. ಎಫ್ಐಆರ್ ದಾಖಲಿಸಿದ್ದು ಅದರ ಒಂದು ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿದೆ.
ಪೊಲೀಸ್ ತನಿಖೆಯಿಂದ ಜೆಪಿ ನಗರ ವಿಭಾಗದ ಆಕ್ಸಿಸ್ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ತನಿಖೆಯಲ್ಲಿ ಆಕ್ಸೆಂಚರ್ ನ ಸ್ಥಿರ ದೂರವಾಣಿಯಿಂದ ಕಂಪೆನಿಗೆ ದೂರವಾಣಿ ಕರೆ ಬಂದಿರುವುದು ಎಂದು ಗೊತ್ತಾಗಿದೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆಕ್ಸೆಂಚರ್, ಇಂತಹ ದುರದೃಷ್ಟಕರ ನೇಮಕಾತಿ ಹಗರಣ ಆಗಾಗ ನಡೆಯುತ್ತಿರುವುದು ಗೊತ್ತಾಗಿದೆ. ಆಕ್ಸೆಂಚರ್ ನಲ್ಲಿ ನೇಮಕಾತಿಯಾದವರು ಯಾವುದೇ ಹಣ ನೀಡಬೇಕಾಗಿಲ್ಲ ಎಂದು ನಾವು ಈ ಮೂಲಕ ಮತ್ತೊಮ್ಮೆ ಹೇಳುತ್ತೇವೆ ಎನ್ನುತ್ತದೆ ಆಕ್ಸೆಂಚರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com