ಬೆಂಗಳೂರು: ರೈಲ್ವೆ ಉದ್ಯೋಗಿಗಳ ಹೆಸರಲ್ಲಿ ನಕಲಿ ಬಿಲ್ ತಯಾರಿಸಿ 42 ಲಕ್ಷ ವಂಚನೆ

ನೈಋತ್ಯ ರೈಲ್ವೆ ನೌಕರರು ನಕಲಿ ದಾಖಲೆಗಳನ್ನು ಸೃಷ್ಟಿಸಿ 59 ಉದ್ಯೋಗಿಗಳ ಬಿಲ್ ಗಳನ್ನು ಪಡೆದು ವಂಚಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ.
ಸಿಬಿಐ
ಸಿಬಿಐ
Updated on
ಬೆಂಗಳೂರು: ನೈಋತ್ಯ ರೈಲ್ವೆ ನೌಕರರು ನಕಲಿ ದಾಖಲೆಗಳನ್ನು ಸೃಷ್ಟಿಸಿ 59 ಉದ್ಯೋಗಿಗಳ  ಬಿಲ್ ಗಳನ್ನು ಪಡೆದು ವಂಚಿಸಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಹೇಳಿದೆ. ಇದರಿಂದಾಗಿ ನೈಋತ್ಯ ರೈಲ್ವೆಗೆ 42.24 ನಷ್ಟವಾಗಿರುವುದಾಗಿ ಅದು ತಿಳಿಸಿದೆ 
ಈ ವಂಚನೆ ಪ್ರಕರಣವು 2013-2016ರ ನಡುವೆ ನಡೆದಿದ್ದು ಗೋವಿಂದರಾಜು, ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಕ್ಲರ್ಕ್ ಆಗಿದ್ದ ಗೋವಿಂದರಾಜು ಮತ್ತು ಚೀಫ್ ಯಾರ್ಡ್ ಮಾಸ್ಟರ್, ಎಸ್ ಜಿಟಿ, ವೈಟ್ ಫೀಲ್ಡ್ ನಲ್ಲಿ ತಾತ್ಕಾಲಿಕವಾಗಿ ಸರಕು ಸಾಗಣೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ.ಬಸವರಾಜು ಎನ್ನುವವರು ಆರೋಪಿಗಳಾಗಿದ್ದು ಅದರಲ್ಲಿ  ಬಸವರಾಜು ಪಿಯೋನ್ ಟ್ರಾಫಿಕ್ ಇನ್ಸ್ ಪೆಚ್ಟರ್ ಆಗಿ , ಧರ್ಮಪುರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಸಿಬಿಐ ಹೇಳಿದೆ.
"ಗೋವಿಂದರಾಜು ಮತ್ತು ಬಸವರಾಜು ಬೆಂಗಳೂರು-ಸೇಲಂ ವಿಭಾಗದಲ್ಲಿ ನೈಋತ್ಯ ರೈಲ್ವೇಯ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 59 ಉದ್ಯೋಗಿಗಳ ಶೈಕ್ಷಣಿಕ ಸಹಾತಧನ, ಬೋಧನಾ ಶುಲ್ಕಗಳು ಮತ್ತು ಹಾಸ್ಟೆಲ್ ಸಬ್ಸಿಡಿ ಸಂಬಂಧ ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಂಚಿಸಿದ್ದರು. ಅವರು 42.24 ಲಕ್ಷ ರೂ ರೈಲ್ವೆ ನಿಧಿಯನ್ನು  ದುರುಪಯೋಗ ಪಡಿಸಿಕೊಂಡಿದ್ದಾರೆ" ಸಿಬಿಐನ ಅಧಿಕೃತ ಮೂಲಗಳು ತಿಳಿಸಿದೆ
ಬಿಲ್ ಗಳಲ್ಲಿ ನಮೂದಾಗಿರುವ ಕೆಲವು ಶೈಕ್ಷಣಿಕ ಸಂಸ್ಥೆಗಳು ಅಸ್ತಿತ್ವದಲ್ಲಿಲ್ಲ ಎಂದು ಸಿಬಿಐ ತನಿಖೆ ವೇಳೆ ಬಯಲಾಗಿದ್ದು ಇನ್ನು ಕೆಲವಉ ಬಿಲ್ ಗಳಲ್ಲಿ ನಮೂದಾದ ವಿದ್ಯಾರ್ಥಿಗಳು ಆಯಾ ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿಲ್ಲದಿರುವುದು ತಿಳಿದು ಬಂದಿದೆ. ಆರೋಪಿಗಳು ಈ 59 ಉದ್ಯೋಗಿಗಳ ಖಾತೆಗಳಿಂದ ಸಹಾಯಧನದ ಮಂಜೂರಾತಿ ಪಡೆದುಕೊಂಡಿದ್ದಾರೆ. ನಂತರ ಅಕ್ರಮವಾಗಿ ಹಣ ಸಂದಾಯಆಗಿದೆ ಎಂದು ನೌಕರರಿಗೆ ತಿಳಿಸಿದ ಆರೋಪಿಗಳು ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾರೆ. ಇದೀಗ ಸಿಬಿಐ ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ ನ ನಾನಾ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com