ಎನ್ಐಎ ಮನೆಗೆ ಭೇಟಿ ನೀಡಿದ್ದು ನಿಜ, ಲವ್ ಜಿಹಾದ್ ನಂತಹ ಹೀನಾಯ ಕೆಲಸ ಮಾಡಿಲ್ಲ: ಇರ್ಷಾದ್ ಖಾನ್ ಸ್ಪಷ್ಟನೆ

ಮನೆಯ ಮೇಲೆ ಎನ್ಐಎ ಬೇಟಿ ನೀಡಿದ್ದು ನಿಜ. ಆದರೆ, ಲವ್ ಜಿಹಾದ್ ನಂತಹ ಹೀನಾಯ ಕೆಲಸ ಮಾಡಿಲ್ಲ ಎಂದು ಕಲಬುರಗಿ ವಿಭಾಗದ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್ ಖಾನ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು; ಮನೆಯ ಮೇಲೆ ಎನ್ಐಎ ಬೇಟಿ ನೀಡಿದ್ದು ನಿಜ. ಆದರೆ, ಲವ್ ಜಿಹಾದ್ ನಂತಹ ಹೀನಾಯ ಕೆಲಸ ಮಾಡಿಲ್ಲ ಎಂದು  ಕಲಬುರಗಿ ವಿಭಾಗದ ವಾಣಿಜ್ಯ ತೆರಿಗೆ ಉಪ ಆಯುಕ್ತ ಇರ್ಷಾದ್ ಖಾನ್ ಅವರು ಶನಿವಾರ ಸ್ಪಷ್ಟನೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಉದ್ಯಮಿ ಪುತ್ನನ ಕೇರಳ ಲವ್ ಜಿಹಾದ್ ವಿವಾದದಲ್ಲಿ ತಮ್ಮ ಪತ್ನಿ ಹೆಸರು ಕೇಳಿ ಬಂದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ಒಂದೂವರೆ ತಿಂಗಳ ಹಿಂದೆ ಎನ್ಐಎ ತಂಡ ನಮ್ಮ ಮನೆಗೆ ಭೇಟಿ ನೀಡಿತ್ತು. ಲವ್ ಜಿಹಾದ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಯುವತಿಯ ಬಗ್ಗೆ ಮಾಹಿತಿ ಇದೆಯಾ ಎಂದು ನನ್ನ ಪತ್ನಿಯನ್ನು ಕೇಳಿತ್ತು. ಅದಕ್ಕೆ ಪತ್ನಿ ಸೂಕ್ತ ಉತ್ತರ ನೀಡಿದ್ದಾರೆ. ಪ್ರಕರಣದಲ್ಲಿ ನನ್ನ ಹಾಗೂ ನನ್ನ ಪತ್ನಿಯ ಪಾತ್ರವಿಲ್ಲ. ಲವ್ ಜಿಹಾದ್ ನಂತಹ ಹೀನಾಯ ಕೆಲಸವನ್ನು ಯಾರೂ ಮಾಡಬಾರದು. ಎನ್ಐಎ ಎಲ್ಲಾ ರೀತಿಯಿಂದ ತನಿಖೆ ಮಾಡಲಿ ಎಂದು ಹೇಳಿದ್ದಾರೆ. 

ಎನ್ಐಎ ತನಿಖೆಗೆ ಸಹಕಾರ ನೀಡಲು ಸಿದ್ಧರಿದ್ದೇವೆ. ಸೌದಿ ಅರೇಬಿಯಾ ಹಾಗೂ ಸಿರಿಯಾಗೆ ಹೋಗುವುದಕ್ಕೂ ಮುನ್ನ ಯುವತಿ ನನ್ನ ಪತ್ನಿಯ ಫ್ಲಾಟ್ ನಲ್ಲಿದ್ದಳು ಎಂಬ ಮಾಹಿತಿ ಸುಳ್ಳು ಎಂದು ತಿಳಿಸಿದದಾರೆ. 

ಬೆಂಗಳೂರಿನ ಉದ್ಯಮಿ ಪುತ್ರ ರಿಯಾಜ್, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕೇರಳ ಮೂಲದ ಅನ್ಯ ಧರ್ಮೀಯ ಯುವತಿಯನ್ನು ಪ್ರೀತಿಸಿದ್ದ. ಈ ಪ್ರೇಮದ ವಿಚಾರ ತಿಳಿದ ಯುವತಿಯ ಪೋಷಕರು, ಮುಸ್ಲಿಂ ಯುವಕನ ಜೊತೆಗಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. 

ಎಂಜಿನಿಯರ್ ಆಗಿರುವ ಅಧಿಕಾರಿ ಇರ್ಷಾದ್ ಖಾನ್ ಪತ್ನಿಗೆ ಹಲವು ದಿನಗಳಿಂದ ರಿಯಾಜ್ ಕುಟುಂಬದ ಪರಿಚಯವಿದ್ದು. ಈ ಹಿನ್ನಲೆಯಲ್ಲಿ ತಮ್ಮ ಪ್ರೇಮಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದಾಗ ರಿಯಾಜ್, ಅಧಿಕಾರಿ ಪತ್ನಿಯ ನೆರವು ಪಡೆದಿದ್ದ ಎಂಬ ಮಾತುಗಳು ಕೇಳಿ ಬಂದಿದ್ದವು. 

ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ ಬಳಿಕ ರಿಯಾಜ್ ಉಪ ಆಯುಕ್ತರ ಮನೆಯಲ್ಲಿ 15 ದಿನಗಳ ಕಾಲ ಪ್ರಿಯತಮೆಯನ್ನು ಗೌಪ್ಯವಾಗಿಟ್ಟಿದ್ದ. ಬಳಿಕ ಸೌದಿ ಅರೇಬಿಯಾಗೆ ಕರೆದೊಯ್ದು ಆಕೆಯನ್ನು ಮತಾಂತರಿಸಿದ್ದ ಎಂದು ಹೇಳಲಾಗುತ್ತಿದೆ. 

ತನ್ನ ಧರ್ಮಕ್ಕೆ ಮತಾಂತರ ಮಾಡಿದ ಬಳಿಕ ಪ್ರಿಯತಮೆ ಜೊತೆ ವಿವಾಹವಾದ ರಿಯಾಜ್, ವಿದೇಶದಲ್ಲಿದ್ದಾಗಲೇ ಆಕೆಯ ಮೇಲೆ ಅತ್ಯಾಚಾರ ಎಸಗಿ ಪೈಶಾಚಿಕವಾಗಿ ನಡೆಸಿಕೊಂಡಿದ್ದ. ಈ ವಿಚಾರ ತಿಳಿದ ಯುವತಿ ಪೋಷಕರು ಪ್ರಸಕ್ತ ವರ್ಷ ಜನವರಿಯಲ್ಲಿ ಕೇರಳದ ಕೊಚ್ಚಿಯ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಪ್ರಕರಣವು ಎನ್ಐಎಗೆ ವರ್ಗವಾಯಿತು. ತನಿಖೆ ಕೈಗೆತ್ತಿಕೊಂಡ ಎನ್ಐಎ, ಕೆಲ ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಕೇರಳಕ್ಕೆ ಮರಳುವಾಗ ಮಾಹಿತಿ ಪಡೆದು ರಿಯಾಜ್'ನನ್ನು ಬಂಧಿಸಿದ್ದು ಎಂದು ತಿಳಿದುಬಂದಿದೆ. 

ಬಳಿಕ ಸಂತ್ರಸ್ತೆ ಮತ್ತು ಆರೋಪಿಯ ಮೊಬೈಲ್ ಗಳನ್ನು ಪರಿಶೀಲನೆ ನಡೆಸಿದಾಗ, ಆ ಇಬ್ಬರ ಮೊಬೈಲ್ ನಲ್ಲಿ ವಾಣಿಜ್ಯ ತೆರಿಕೆ ಅಧಿಕಾರಿ ಇರ್ಷಾದ್ ಖಾನ್ ಪತ್ನಿಯ ನಂಬರ್ ಪತ್ತೆಯಾಗಿದೆ. ಅಲ್ಲದೆ, ಸಂತ್ರಸ್ತೆಯ ಮತಾಂತರಕ್ಕೂ ಮುನ್ನ ದೊಮ್ಮಲೂರಿನ ಇರ್ಷಾದ್ ಖಾನ್ ಅವರ ಮನೆಯಲ್ಲಿ ನೆಲೆಸಿದ್ದ ಸಂಗತಿ ತಿಳಿದುಬಂದಿದೆ. ಈ ವಿಷಯ ತಿಳಿದ ಕೂಡಲೇ ಅಧಿಕಾರಿಗಳು, ಇರ್ಷಾದ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಯ ಪತ್ನಿಯನ್ನು ತೀವ್ರವಾಗಿ ವಿಚಾರಣೆಗೊಳಿಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com