ಕಾಂಗ್ರೆಸ್'ಗೆ ಬೆಂಗಳೂರಿಗರು ನೀಡಿರುವ ಬೆಂಬಲಕ್ಕೆ ಸಂತಸವಿದೆ; ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ

ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ನಗರ ವಾಸಿಗರು ನೀಡಿರುವ ಬೆಂಬಲಕ್ಕೆ ಸಂಸತವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ...
Rural development minister Krishna Byregowda
Rural development minister Krishna Byregowda
ಬೆಂಗಳೂರು; ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ನಗರ ವಾಸಿಗರು ನೀಡಿರುವ ಬೆಂಬಲಕ್ಕೆ ಸಂಸತವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ. 
ನ್ಯೂ ಇಂಡಿಯನ್ ಎಕ್ಸೆಪ್ರೆಸ್ ನಡೆಸಿರುವ ಸಂದರ್ಶನದಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಮನಬಿಚ್ಚಿ ಮಾತನಾಡಿದ್ದಾರೆ. 
ಆಡಳಿತಾರೂಢ ಮೈತ್ರಿ ಸರ್ಕಾರ ನಿಮ್ಮ ಸಚಿವ ಸ್ಥಾನದ ಸ್ವತಂತ್ರ್ಯವನ್ನು ನಿಯಂತ್ರಿಸುವುದೇ? 
ಇದನ್ನು ನಿರಾಕರಿಸುವುದಿಲ್ಲ. ಮೈತ್ರಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುವಾಗ ಪ್ರತೀಯೊಂದನ್ನು ನಾವು ನಿಯಂತ್ರಿಸಬೇಕಾಗುತ್ತದೆ. ಜನರು ಅತಂತ್ರ ಫಲಿತಾಂಶವನ್ನು ನೀಡಿದಾಗ ನಾವೇನನ್ನು ಮಾಡಲು ಸಾಧ್ಯ. ಎಲ್ಲದಕ್ಕೂ ಹೊಂದಿಕೊಂಡು ಕೆಲಸ ಮಾಡಬೇಕಾಗುತ್ತದೆ. ವೈಯಕ್ತಿಕ ಸಚಿವರಾಗಿ ಅಷ್ಟೇ ಅಲ್ಲದೆ ಪಕ್ಷದ ಪರವಾಗಿ ಕೂಡ ಎಲ್ಲದಕ್ಕೂ ಹೊಂದಿಕೊಂಡು ಕಾರ್ಯನಿರ್ವಹಿಸಬೇಕು. ಇಂತಹ ಅನುಭವಗಳಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ತಿಳಿದುಕೊಳ್ಳುತ್ತಿದ್ದೇವೆ. 
ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳ ಅನುಷ್ಠಾನ ಸಮಿತಿ (ಸಿಎಂಪಿ) ಮತ್ತು ಸಹಕಾರ ಸಮಿತಿಯ ರೂಪದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಯಾಂತ್ರಿಕ ವ್ಯವಸ್ಥೆಯನ್ನು ತೊಡಗಿಸಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಹಿರಿಯ ಹಾಗೂ ಸಂವೇದನಾ ಶೀಲ ನಾಯಕರುಗಳಿದ್ದು, ಸಮಸ್ಯೆಗಳನ್ನು ಎದುರಿಸಲು ಹಾಗೂ ಕಾರ್ಯಗಳನ್ನು ನಿರ್ವಹಿಸುವ ಅವರಲ್ಲಿದೆ. ಜನಾದೇಶವನ್ನು ನಾವು ಗೌರವಿಸಬೇಕಿದೆ. ಯಾವುದೇ ರೀತಿಯ ಪರಿಸ್ಥಿತಿಯಲ್ಲಿಯೇ ಆದರೂ ನಾವು ಕಾರ್ಯನಿರ್ವಹಿಸಬೇಕಿದೆ. ಇಲ್ಲದೇ ಹೋದರೆ, ಮತ್ತೆ ಚುನಾವಣೆ ಎದುರಿಸಬೇಕಾಗುತ್ತದೆ. ಇದರಿಂದ ಯಾರಿಗೂ ಲಾಭವಿಲ್ಲ ಎಂದು ಹೇಳಿದ್ದಾರೆ. 
ರೈತರ ಸಾಲ ಮನ್ನಾದಿಂದ ನಿಮ್ಮ ಸಚಿವಾಲಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ನಿರೀಕ್ಷಿಸುತ್ತೀರಾ? 
ನಮ್ಮ ಸಚಿವಾಲಯದ ಹಿತಾಸಕ್ತಿಯನ್ನು ಕಾಪಾಡಲು ನಾವು ಯತ್ನ ನಡೆಸುತ್ತೇವೆ. ಪ್ರತೀಯೊಬ್ಬರೂ ಹೊಂದಾಣಿಗೆ ಮಾಡಿಕೊಳ್ಳಲೇಬೇಕಿದೆ. ಸಾಲ ಮನ್ನಾಗೆ ಆದ್ಯತೆ ನೀಡಬೇಕು. ಆದರೆ, ಇಲಾಖೆಗಳ ಅನುದಾನಗಳನ್ನು ಕಡಿತ ಮಾಡುವುದರಿಂದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಇದು ಪರಿಣಾಮ ಬೀರುತ್ತದೆ. ಸಮತೋಲನವನ್ನು ಕಾಪಾಡಲು ಹೊಂದಾಣಿಕೆಯ ಅಗತ್ಯವಿದೆ. ಹಿಂದಿನ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮಗಳು ಹಾಗೂ ಘೋಷಣೆಗಳನ್ನು ಕಾಪಾಡಲು ನಮ್ಮ ಪಕ್ಷ ನಿಲುವು ಕೈಗೊಂಡಿದೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಹೆಚ್.ಕೆ. ಪಾಟೀಲ್ ಅವರು ಹಲವು ಯೋಜನೆ ಹಾಗೂ ಘೋಷಣೆಗಳನ್ನು ಮಾಡಿದ್ದರು. ಇದನ್ನು ಹೊರತುಪಡಿಸಿ ನಾನು ಯಾವುದೇ ರೀತಿಯ ನೂತನ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಘೋಷಣೆ ಮಾಡಿಲ್ಲ. 
ಹೆಚ್.ಕೆ ಪಾಟೀಲ್ ಅವರು ಗದಗ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದರಿಂದ ಪ್ರತೀಯೊಬ್ಬರಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿದೆ. ಹೊಸ ಯೋಜನೆಗಳನ್ನು ಘೋಷಣೆ ಮಾಡುವುದರ ಬದಲು ಇರುವ ಯೋಜನೆಗಳನ್ನು ವಿಸ್ತರಿಸಲು ನಾವು ಪ್ರಯತ್ನಿಸುತ್ತೇವೆ. ಯೋಜನೆಗಳು ಇಡೀ ರಾಜ್ಯಕ್ಕೆ ತಲುಪಿಸುವುದೇ ದೊಡ್ಡ ಸಾಧನೆಯಾಗಲಿದೆ. 
ಸಚಿವ ಸಂಪುಟ ಕುರಿತಂತೆ ದಕ್ಷಿಣ ಕರ್ನಾಟಕದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? 
ಸಚಿವ ಸಂಪುಟ ಪೂರ್ಣವಾಗಿ ಇನ್ನೂ ರಚನೆಯಾಗಿಲ್ಲ. ಇಂತಹ ನಿರ್ಧಾರಗಳಿಗೆ ಬರುವುದಕ್ಕೂ ಮುನ್ನ ಕಾಯಬೇಕು. ಜೆಡಿಎಸ್'ನ ಬಹುತೇಕ ಶಾಸಕರು ದಕ್ಷಿಣ ಜಿಲ್ಲೆಗಳಿಂದ ಬಂದವರಾಗಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಶಾಸಕರು ಬಿಜೆಪಿ ಪರವಾಗಿದ್ದಾರೆ. ಸಮತೋಲವನ್ನು ಕಾಪಾಡಲು ನಾವು ಯತ್ನ ನಡೆಸುತ್ತಿದ್ದೇವೆ. ಇದನ್ನು ಸಂಪುಟ ವಿಸ್ತರಣೆಯಲ್ಲಿಯೇ ನಾವು ನೋಡಬಹುದು. ನಾನು ದಕ್ಷಿಣ ಭಾಗದಿಂದ ಬಂದ ಮಾತ್ರಕ್ಕೆ ಉತ್ತರ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ತೋರಿತ್ತೇನೆಂಬ ಅರ್ಥ ಬರುವುದಿಲ್ಲ. 
ಉತ್ತರ ಕರ್ನಾಟಕದ ಕೃಷಿ ಸಚಿವನಾಗಿ ನಾನು ಹೆಚ್ಚಿನ ಕಾಲವನ್ನು ಇಂಧನ ಹಾಗೂ ಸಂಪನ್ಮೂಲ ಇಲಾಖೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತೇನೆ. ಜನರು ನೀಡಿರುವ ಅಸಮತೋಲನದ ಆದೇಶದ ಮೇಲೆ ನಮ್ಮ ಕಾರ್ಯಗಳು ಪರಿಣಾಮ ಬೀರುವುದಿಲ್ಲ. 
ನಿಮ್ಮ ಸಚಿವಾಲಯದ ಮೇಲೆ ನಿಮ್ಮ ಮುಂದಿನ ದೃಷ್ಟಿಕೋನವೇನು? 
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು, ಗ್ರಾಮೀಣ ಪ್ರದೇಶ, ನೈರ್ಮಲ್ಯ, ವಿಕೇಂದ್ರೀಕರಣ, ರಸ್ತೆಗಳು, ನೀರು, ಗ್ರಾಮದ ಮೂಲಭೂತ ಸೌಕರ್ಯ ಮತ್ತು ಆಸ್ತಿಯ ನೋಂದಣಿ ಹೊಂದಿರುವ ದೊಡ್ಡ ಜವಾಬ್ದಾರಿಯಾಗಿದ್ದು, ಅಧಿಕಾರಿಗಳೊಂದಿನ ಸಭೆಗಳ ಬಳಿಕ ಎರಡು ಕ್ಷೇತ್ರಗಳ ಮೇಲೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಗ್ರಾಮಗಳಿಗೆ ಸೂಕ್ತ ರೀತಿಯ ನೀರಿನ ವ್ಯವಸ್ಥೆ, ರಸ್ತೆ ಸಂಪರ್ಕಗಳತ್ತ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ಈ ಹಿಂದೆ ಇದ್ದ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್.ಕೆ ಪಾಟೀಲ್ ಅವರು ತೆಗೆದುಕೊಂಡಿದ್ದ ನಿರ್ಧಾರಗಳನ್ನು ಕ್ರೋಢೀಕರಿಸಲು ಕಾರ್ಯನಿರ್ವಹಿಸಲಾಗುತ್ತಿದೆ. 
ನಾಗರೀಕ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಹೊರತಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ಬೆಂಗಳೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಇದರಲ್ಲಿ ನಿಮಗಾದ ಲಾಭ? 
ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿನ ಪ್ರತಿಕ್ರಿಯೆಗಳಿಗೆ ಬಹಳ ಬೇಸರವುಂಟಾಗಿತ್ತು. ಆಧರೆ, ಬೆಂಗಳೂರು ನಗರ ಜನತೆ ನೀಡಿದ ಬೆಂಬಲ ನಮಗೆ ಸಾಕಷ್ಟು ಸಂಸತವನ್ನುಂಟು ಮಾಡಿತ್ತು. ಬೆಂಗಳೂರಿನಲ್ಲಿ ನಮ್ಮ ನಿರೀಕ್ಷೆಗಳು ಹೆಚ್ಚಾಗಿವೆ. ನಾಗರೀಕ ಹಾಗೂ ಮೂಲಭೂತ ಸೌಕರ್ಯ ಸಮಸ್ಯೆಗಳ ಕುರಿತಂತೆ ಟೀಕೆಗಳು ವ್ಯಕ್ತವಾದರೂ ನಾವು ಮಾಡಿದ್ದ ಕೆಲ ಕಾರ್ಯಗಳು ಯಶಸ್ಸು ತಂದಿತ್ತು. ಮೆಟ್ರೋ, ಉಪನಗರಗಳ ರೈಲು, ಟೆಂಡರ್ಶೂರ್ ರಸ್ತೆಗಳ ಕುರಿತಂತೆ ಹಿಂದಿನ ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಗಳು ಜನರ ಬೆಂಬಲಕ್ಕೆ ಕಾರಣವಾಯಿತು. 
ಸಂಚಿವ ಸಂಪುಟ ಆಯ್ಕೆ ಸಂದರ್ಭದಲ್ಲಿ ಕಾಂಗ್ರೆಸ್ ನಲ್ಲಿಯೇ ವ್ಯಕ್ತವಾಗಿದ್ದ ಅಸಮಾಧಾನವನ್ನು ಹೇಗೆ ನಿಭಾಯಿಸಿದಿರಿ? 
ಸಂಪುಟಕ್ಕೆ ಆಯ್ಕೆಯಾಗಲು ಕೆಲ ಹಿರಿಯ ಅರ್ಹ ನಾಯಕರಿದ್ದರು. ಆದರೂ, ನಿಯಂತ್ರಣಗಳಿದ್ದರಿಂದಾಗಿ ಪಕ್ಷ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂತು. ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಾಗ ಜನರು ಬೇಸರಗೊಳ್ಳುವುದು ಸಹಜ. ಸಚಿವನಾಗುವುದು ದೊಡ್ಡ ಆಕಾಂಕ್ಷೆ ಆದರೆ, ನಾವು ಯಾವುದೇ ರೀತಿಯ ನಿರ್ಧಾರ ಕೈಗೊಂಡಲೂ ಜನರು ಅಸಮಾಧಾನಗೊಳ್ಳುತ್ತಲೇ ಇರುತ್ತಾರೆ. ಅಂತಹವರನ್ನು ತಲುಪಲು ನಾವು ಯತ್ನ ನಡೆಸುತ್ತಿದ್ದೇವೆ. ಕಠಿಣ ನಿರ್ಧಾರಕ್ಕೆ ಕಾರಣಗಳನ್ನು ತಿಳಿಸುತ್ತೇವೆ. ಇದು ನನ್ನ ವೈಯಕ್ತಿಕ ಹೇಳಿಕೆಯಲ್ಲ, ಪಕ್ಷದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ. ಇತರರಿಗೂ ಅವಕಾಶ ನೀಡುವ ಅಗತ್ಯವಿದೆ. ಸಂಪುಟ ರಚನೆ ದೊಡ್ಡ ಸವಾಲಿನ ಪರಿಸ್ಥಿತಿಯಾಗಿತ್ತು. ಆದರೂ, ನಾವು ಜವಾಬ್ದಾರಿಯುತವಾಗಿ ನಿಭಾಯಿಸಿದೆವು. ಅತೃಪ್ತರನ್ನು ಪಕ್ಷ ನೋಡಿಕೊಳ್ಳಲಿದೆ. 
2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರ್ಕಾರದಿಂದ ಹೆಚ್ಚು ಲಾಭವಾಗುವುದು ಯಾರಿಗೆ? 
ಪ್ರತೀಯೊಂದು ನಿರ್ಧಾರದಲ್ಲು ಲಾಭ ಹಾಗೂ ನಷ್ಟಗಳು ಇಧ್ದೇ ಇರುತ್ತವೆ. ನಮ್ಮದು ರಾಜಕೀಯ ಪಕ್ಷವಾಗಿದೆ. ಸೇವಾ ಸಂಸ್ಥೆಯಲ್ಲ. ಸ್ಪರ್ಧೆಗಳಿಗೂ ಕೆಲ ಗಡಿಗಳಿರುತ್ತವೆ. ಎರಡೂ ಪಕ್ಷಗಳಿಗೂ ಲಾಭವಾಗುವ ನಿರ್ಧಾರಗಳನ್ನು ಕೈಗೊಳ್ಳಲು ಯತ್ನ ನಡೆಸುತ್ತೇವೆ. ಜೆಡಿಎಸ್ ತ್ಯಾಗ ಮಾಡಬೇಕೆಂಬುದನ್ನು ನಿರೀಕ್ಷಿಸುವುದನ್ನು ಬಿಟ್ಟು, ನಾವೇ ತ್ಯಾಗ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com