ನಗರದ ಕ್ಯಾತಸಂದ್ರದಲ್ಲಿ ಮನೆಯಲ್ಲಿ ರಾಘವೇಂದ್ರ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅನ್ಯಜಾತಿಯ ಯುವತಿಯನ್ನು ರಾಘವೇಂದ್ರ ಪ್ರೀತಿಸುತ್ತಿದ್ದ, ಆದರೆ ಇವರ ಪ್ರೀತಿಗೆ ಯುವತಿಯ ಮನೆಯವರ ತೀವ್ರ ವಿರೋಧವಿತ್ತು ಹಾಗಾಗಿ ಮನನೊಂದ ಯುವಕ ಸಾವಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೂ ಮುನ್ನ ಜಾತಿ ಜಾತಿ ಎಂದು ಯಾಕೆ ಸಾಯ್ತೀರಾ? ಸತ್ತ ಮೇಲೆ ಜಾತಿ ಹೊತ್ತುಕೊಂಡು ಹೋಗ್ತೀರಾ? ನಾನಿನ್ನು ನಿನ್ನ ಮಗಳ ಸಹವಾಸಕ್ಕೆ ಬರಲ್ಲ ಅವಳು ಚೆನ್ನಾಗಿರಲಿ ಎಂದು ಹೇಳಿರುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿ ಸಾವಿಗೆ ಶರಣಾಗಿದ್ದಾನೆ.
ತುರುವೇಕೆರೆ ಮೂಲದ ಯುವತಿಯನ್ನು ಕಳೆದ ಐದು ವರ್ಷಗಳಿಂದ ರಾಘವೇಂದ್ರ ಪ್ರೀತಿಸುತಿದ್ದ. ಇಬ್ಬರು ಜಾತಿಯು ಬೇರೆ ಬೇರೆಯಾಗಿದ್ದರಿಂದ ಯುವತಿಯ ತಂದೆ ಮದುವೆಗೆ ನಿರಾಕರಿಸಿದ್ದರು.