ಮೃತ ಕಾರ್ಮಿಕನ ಪತ್ನಿಗೆ ಸಾಂತ್ವನ ಹೇಳುವ ಬದಲು ಫೋಟೋಗೆ ಪೋಸ್ ನೀಡುವಂತೆ ಕೇಳಿದ ಮೇಯರ್!

ಏಳು ತಿಂಗಳಿನಿಂದ ವೇತನ ಸಿಕ್ಕದೆ ಸಂಸಾರ ನಡೆಸಲು ಕಷ್ಟವಾಗಿ ಆತ್ಮಹತ್ಯೆಗೆ ಶರಣಾಗಿದ್ದ ಪೌರ ಕಾರ್ಮಿಕ ಸುಬ್ರಮಣಿ ಅವರ ಪತ್ನಿಗೆ ಮೇಯರ್ ಸಂಪತ್ ರಾಜ್.....
ಮೃತ ಕಾರ್ಮಿಕನ ಪತ್ನಿಗೆ ಸಾಂತ್ವನ ಹೇಳುವ ಬದಲು ಫೋಟೋಗೆ ಪೋಸ್ ನೀಡುವಂತೆ ಕೇಳಿದ ಮೇಯರ್!
ಮೃತ ಕಾರ್ಮಿಕನ ಪತ್ನಿಗೆ ಸಾಂತ್ವನ ಹೇಳುವ ಬದಲು ಫೋಟೋಗೆ ಪೋಸ್ ನೀಡುವಂತೆ ಕೇಳಿದ ಮೇಯರ್!
ಬೆಂಗಳೂರು: ಏಳು ತಿಂಗಳಿನಿಂದ ವೇತನ ಸಿಕ್ಕದೆ ಸಂಸಾರ ನಡೆಸಲು ಕಷ್ಟವಾಗಿ ಆತ್ಮಹತ್ಯೆಗೆ ಶರಣಾಗಿದ್ದ ಪೌರ ಕಾರ್ಮಿಕ ಸುಬ್ರಮಣಿ ಅವರ ಪತ್ನಿಗೆ ಮೇಯರ್ ಸಂಪತ್ ರಾಜ್  ಪರಿಹಾರ ನಿಡಲು ಆಗಮಿಸಿದ್ದಾರೆ. ಕವಿತಾ ಹಣ ಪಡೆಯದೆ ಅದನ್ನು ಹಿಂತಿರುಗಿಸಿದ್ದಾರೆ.
ಏಳು ತಿಂಗಳು ವೇತನ ಸಿಕ್ಕದ ಕಾರಣ ನೇಣಿಗೆ ಶರಣಾದ ಬಿಬಿಎಂಪಿ ಗುತ್ತಿಗೆ ಕಾರ್ಮಿಕ ಸುಬ್ರಮಣಿ ಅವರ ಪತ್ನಿ ಕವಿತಾ ಕೆಸಿ ಜನರಲ್ ಆಸ್ಪತ್ರೆ ಸಮೀಪ ದುಃಖತಪ್ತರಾಗಿದ್ದು ತನ್ನ ಮಕ್ಕಳು, ಸಂಬಂಧಿಕರೊಂದಿಗೆ ಪತಿಯ ಮೃಅತದೇಹಕ್ಕಾಗಿ ಕಾಯುತ್ತಿದ್ದರು.  ಇನ್ನೊಂದೆಡೆ ನೌಕರನ ಆತ್ಮಹತ್ಯೆಯನ್ನೇ ನೆಪ ಮಾಡಿಕೊಂಡು ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ನೇರವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಬಳಿಗೆ ತೆರಳಿ ಅವರ ಬೇಡಿಕೆ ಕುರಿತಂತೆ ಚರ್ಚಿಸಿದ್ದಾರೆ. 
ಸುಮಾರು ಹದಿನೈದು ನಿಮಿಷಗಳ ಬಳಿಕ ಅಲ್ಲಿಂದ ತೆರಳಲಿಕ್ಕೆ ಸಿದ್ದವಾದ ಮೇಯರ್ ತೆರ:ಳುವ ಮುನ್ನ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಿದ್ದ ಮೃತ ಕಾರ್ಮಿಕನ ಪತ್ನಿ ಕವಿತಾಳನ್ನು ಗುರುತಿಸಿದ್ದು ಆಕೆಯ ಬಳಿ ತೆರಳಿದ್ದಾರೆ. ಆ ವೇಳೆ ಅವರ್ ಜತೆಯಲ್ಲಿದ್ದವರೊಬ್ಬರು ಐದು ಲಕ್ಷ ರು. ಮೌಲ್ಯದ ಸಿಂಡಿಕೇಟ್ ಬ್ಯಾಂಕಿನ ಚೆಕ್ ಅನ್ನು ನೀಡಿದ್ದಾರೆ. ಆದರೆ ಮೇಯರ್ ತಾವು ಚೆಕ್ ಹಸ್ತಾಂತರ ಮಾಡುವುದನ್ನು ಮಾದ್ಯಮಗಳು ಹೈಲೈಟ್ ಮಾಡಬೇಕೆಂದು ಬಯಸಿದ್ದು ಕವಿತಾ ಅಲ್ಲಿ ಪ್ರತಿಭಟನೆಯಲ್ಲಿ ತೊಡಗಿದವರ ನಡುವೆ ನಿಲ್ಲುವಂತೆ ಕೇಳಿದ್ದಾರೆ.
ಇದರಿಂದ ಕುಪಿತಳಾದ ಕವಿತಾ ನಾನು ಪ್ರತಿಭಟನೆ ನಡೆಸುವುದಿಲ್ಲ ಎಂದಿದ್ದಾರೆ. ಅದೇ ವೇಳೆ ಆಕೆಯ ಸಂಬಂಧಿಯೊಬ್ಬರು ಮುಂದೆ ಬಂದು ಚೆಕ್ ಅನ್ನು ಮತ್ತೆ ಮೇಯರ್ ಜೇಬಿಗೆ ಹಾಕುವ ಮೂಲಕ ಹಣ ಪಡೆಯುವುದಕ್ಕೆ ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com