ಬೆಂಗಳೂರು: ಬೆಂಗಳೂರು ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಮಂಗಳವಾರ ವಿಶೇಷ ಅಭಿಯಾನ ಆರಂಭಸಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಸ್ವತಃ ಯಮಧರ್ಮರಾಯನಿಂದ ವಾರ್ನಿಂಗ್ ಕೊಡಿಸುತ್ತಿದ್ದಾರೆ.
ಹಲಸೂರು ಗೇಟ್ ಸಂಚಾರಿ ಪೊಲೀಸರು ಹೆಲ್ಮೆಟ್ ಹಾಕದೆ ಬೈಕ್ ಚಾಲನೆ ಮಾಡೊರಿಗೆ ಯಮನಿಂದ ವಾರ್ನಿಂಗ್ ಎಂಬ ಅಭಿಯಾನ ಕೈಗೊಂಡಿದ್ದು, ಯಮನಂತೆ ವೇಷ ಧರಿಸಿದ್ದ ರಂಗ ಕಲಾವಿದ ವೀರೇಶ್ ಮುತ್ತಿನಮಠ ಅವರು ವಾಹನ ಸವಾರರಿಗೆ ಕೆಂಪು ಗುಲಾಬಿ ಹೂ ನೀಡಿ ಸಂಚಾರಿ ನಿಯಮ ಪಾಲಿಸುವಂತೆ ಹೇಳಿದರು.
ನಾನು ಯಮಧರ್ಮರಾಯ ಸಂಚಾರಿ ನಿಯಮ ಉಲ್ಲಂಘಿಸಿದರೆ ನಿಮ್ಮ ಮನೆಗೆ ಬರುತ್ತೇನೆ ಎಂದು ಎಚ್ಚರಿಕೆ ಸಹ ನೀಡಿದರು.
ಪ್ರಾಣ ಉಳೀಬೇಕು ಅಂದ್ರೆ ಹೆಲ್ಮೆಟ್ ಹಾಕ್ಬೇಕು. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಯಮನೇ ಬೆನ್ನ ಹಿಂದೆ ಕೂತಿರ್ತಾನೆ. ಆ ಮರಣ ದೇವ ರೋಡ್‍ನಲ್ಲಿ ಹೋಗೋರನ್ನು ತಡೆದು ಅವರ ಬೈಕ್, ಸ್ಕೂಟರ್ ಹತ್ತುತ್ತಾನೆ ಅಂತ ಹೆಲ್ಮೆಟ್ ಹಾಕದೆ ಇರೋ ಬೈಕ್ ಸವಾರರಿಗೆ ಮುತ್ತಿನಮಠ ಅವರು ಎಚ್ಚರಿಕೆ ಕೊಡುತ್ತಿದ್ದಾರೆ.