ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಾಜಿ ಐಎಎಸ್ ಅಧಿಕಾರಿ ಮನೆ ದರೋಡೆ : ಇಬ್ಬರು ಕೊಲಂಬಿಯಾ ಪ್ರಜೆಗಳ ಬಂಧನ

ರಾಜ್ಯಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಹೆಚ್ ಎಸ್ ಆರ್ ಲೇಜೌಟ್ ನಲ್ಲಿನ ನಿವಾಸದಲ್ಲಿ ಜೂ. 16 ರಂದು ನಡೆದಿದ್ದ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಇಬ್ಬರು ಕೊಲಂಬಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.
ಬೆಂಗಳೂರು: ರಾಜ್ಯಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಹೆಚ್ ಎಸ್ ಆರ್ ಲೇಜೌಟ್ ನಲ್ಲಿನ ನಿವಾಸದಲ್ಲಿ ಜೂ.  16 ರಂದು ನಡೆದಿದ್ದ  25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಇಬ್ಬರು ಕೊಲಂಬಿಯಾ ಪ್ರಜೆಗಳನ್ನು ಬಂಧಿಸಿದ್ದಾರೆ.
ಮನೆ ಮುಂಭಾಗದಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ  ಅವರ ಅನುಮಾನಾಸ್ಪದ ಚಟುವಟಿಕೆಗಳು ಸಿಕ್ಕಿಬಿದ್ದವು ಮತ್ತು ನಿವಾಸಿಗಳು ತಕ್ಷಣವೇ  ಸುದ್ದಿ ಮುಟ್ಟಿಸಿದ್ದು,  ಸ್ಥಳಕ್ಕೆ ಧಾವಿಸಿದ ಪೊಲೀಸರು  ಆರೋಪಿಸಿಗಳನ್ನು ಬಂಧಿಸಿದ್ದಾರೆ.
ಕೊಲಂಬಿಯಾದ ಇವರು  ಮಾರಾಟಗಾರ ನೆಪದಲ್ಲಿ ಒಂಟಿ ಮನೆಗಳನ್ನು ಗುರಿಯಾಗಿಟ್ಟುಕೊಂಡು  ದರೋಡೆ ಮಾಡುತ್ತಿದ್ದರು., ಜೂನ್ 16 ರಂದು ಹೆಚ್ ಎಸ್ ಎಸ್ ಆರ್ ಲೇಔಟ್ ನಲ್ಲಿಯೂ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಅಂದೇ  ಕೌಶಿಕ್ ಮುಖರ್ಜಿ ಅವರ ಮನೆಯಲ್ಲೂ ದರೋಡೆ ಮಾಡಲಾಗಿದೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು  ಪೊಲೀಸರು ತಿಳಿಸಿದ್ದಾರೆ.
 ಕೌಶಿಕ್ ಮುಖರ್ಜಿ ಹಾಗೂ ಅವರ ಹೆಂಡತಿ ಸ್ನೇಹಿತ ಮನೆಗೆ ಹೋಗಿ ರಾತ್ರಿ ಸುಮಾರು 11 ಗಂಟೆ ವೇಳೆಗೆ ಬಂದಾಗ ಆಘಾತ ಕಾದಿತ್ತು. ಆರು ಚಿನ್ನದ ಬಳೆ, ಮೂರು ಡೈಮಂಡ್ ರಿಂಗ್ಸ್ ಸೇರಿದಂತೆ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ , ನಗದು ಕಳ್ಳತನ ವಾಗಿತ್ತು.
ಕೊಲಂಬಿಯಾದ ಇಬ್ಬರು ಆರೋಪಿಗಳ ಬಂಧನದ ನಂತರ ಪೊಲೀಸರು ಅವರ ಗ್ಯಾಂಗಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ತಂಡದಲ್ಲಿ ಏಳು ಮಂದಿ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ,
ಉಳಿದವರ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನಿತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com