ಸಂಗ್ರಹ ಚಿತ್ರ
ರಾಜ್ಯ
ಹುಚ್ಚು ಸಾಹಸ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ, ಭೀಕರ ದೃಶ್ಯ!
ಅಪಾಯಕಾರಿ ಅಂತ ತಿಳಿದಿದ್ದರೂ ಇಂದಿನ ಯುವಕರು ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ...
ಬೆಂಗಳೂರು: ಅಪಾಯಕಾರಿ ಅಂತ ತಿಳಿದಿದ್ದರೂ ಇಂದಿನ ಯುವಕರು ವಿಚಿತ್ರ ಸಾಹಸಗಳನ್ನು ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.
ಚಲಿಸುತ್ತಿದ್ದ ರೈಲಿನ ಕಂಬಿಯನ್ನು ಹಿಡಿದುಕೊಂಡು ನೇತಾಡುತ್ತಿದ್ದ ಯುವಕ ಕೈಬಿಟ್ಟಿದ್ದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು, ಇದನ್ನು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅರಿಬಿಟ್ಟಿದ್ದು ವಿಡಿಯೋ ಇದೀಗ ವೈರಲ್ ಆಗಿದೆ. ನಾಂದೇಡ್ ಬೆಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.
ಯಾವ ಕಾರಣಕ್ಕೆ ಈ ಯುವಕ ಬೋಗಿಯ ಕಂಬಿಯನ್ನು ಹಿಡಿದುಕೊಂಡು ಬರುತ್ತಿದ್ದ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಅಪಾಯ ಸ್ಥಿತಿಯಲ್ಲಿದ್ದ ಯುವಕನನ್ನು ರೈಲಿನ ಚೈನನ್ನು ಎಳೆದು ಒಳಗೆ ಕರೆದುಕೊಳ್ಳಬಹುದಿತ್ತು ಆದರೆ ಇದನ್ನು ಮಾಡದೇ ರೈಲಿನಲ್ಲಿದ್ದ ಕೆಲವರು ವಿಡಿಯೋ ಮಾಡುವುದರಲ್ಲಿ ಮಗ್ನರಾಗಿದ್ದಾರೆ.
ತುಂಬಾ ಹೊತ್ತಿನ ತನಕ ಆ ಯುವಕ ಬೋಗಿಯ ಕಂಬಿಯನ್ನು ಹಿಡಿದುಕೊಂಡು ನೇತಾಡಿಕೊಂಡು ಬರುತ್ತಿದ್ದ. ಮಧ್ಯದಲ್ಲಿ ಆತನ ಕೈ ಸೋತಿದ್ದರಿಂದ ಹಿಡಿದುಕೊಂಡಿದ್ದನ್ನು ಬಿಟ್ಟಿದ್ದಾನೆ. ಇದರಿಂದ ಕೆಳಗೆ ಬಿದ್ದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಬಳಿಕ ಆತನಿಗೆ ಏನಾಗಿದೆ ಎಂಬುದು ತಿಳಿದುಬಂದಿಲ್ಲ. ಸದ್ಯಕ್ಕೆ ನೇಟಿಗರು ಯುವಕನಿಗೆ ಸಹಾಯ ಮಾಡದೇ ವಿಡಿಯೋ ಮಾಡಿದವರ ಕೃತ್ಯವನ್ನು ಟೀಕಿಸಿದ್ದಾರೆ.


