ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕ್ರಮ ಕೈಗೊಳ್ಳಬೇಕು- ಎಂ.ಎಸ್. ಸ್ವಾಮಿನಾಥನ್

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುವಂತೆ ಹೆಸರಾಂತ ಕೃಷಿ ತಜ್ಞ ಎಂ.ಎಸ್. ಸ್ವಾಮಿನಾಥನ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಎಂ.ಎಸ್. ಸ್ವಾಮಿನಾಥನ್
ಎಂ.ಎಸ್. ಸ್ವಾಮಿನಾಥನ್
ಬೆಂಗಳೂರು: ರೈತರ ಆರ್ಥಿಕ ಸಂಕಷ್ಟ ಪರಿಹರಿಸುವ ನಿಟ್ಟಿನಲ್ಲಿ ಜೆಡಿಎಸ್- ಕಾಂಗ್ರೆಸ್ ಸರ್ಕಾರ ರೈತರ 44 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಆದಾಗ್ಯೂ,  ಹೆಸರಾಂತ ಕೃಷಿ ತಜ್ಞ  ಎಂ.ಎಸ್. ಸ್ವಾಮಿನಾಥನ್, ಇದನ್ನು ಅಲ್ಪಾವಧಿಯ ಅಗತ್ಯ ಎಂದಿದ್ದು, ಕೃಷಿ ಆರ್ಥಿಕತೆ ನಿರ್ವಹಣೆಯ ಮಾದರಿ ಅಲ್ಲ ಎಂದಿದ್ದಾರೆ.
ರೈತರ ಆದಾಯ ಹೆಚ್ಚಿಸಬೇಕು ಹಾಗೂ ಕೃಷಿ ಆರ್ಥಿಕತೆ ಪ್ರಗತಿ ಸಾಧಿಸುವಂತೆ ಅವರ ದಿ ನ್ಯೂ  ಸಂಡೇ  ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದಾರೆ.
ರಾಜ್ಯಸರ್ಕಾರ ಇತ್ತೀಚಿಗೆ ರೈತರ ಕೃಷಿ ಸಾಲ ಮನ್ನಾ ಘೋಷಣೆ ಮಾಡಿದೆ. ಇಂತಹ ಕ್ರಮ ನೆರವು ನೀಡುತ್ತದೆ ಎಂದು ಭಾವಿಸುವಿರಾ ?
ಸಾಲ ಮರುಪಾವತಿಸಲಾಗದ ರೈತರಿಗೆ ಸಾಲ ಮನ್ನಾ ಅಲ್ಪಾವಧಿಗೆ ಅಗತ್ಯವಾಗಿರುತ್ತದೆ. ಆದಾಗ್ಯೂ, ಇದು ರೈತರ ಆರ್ಥಿಕ ನಿರ್ವಹಣೆಯಲ್ಲಿ ಶಾಶ್ವತವಾದ ವ್ಯವಸ್ಥೆಯಲ್ಲ, ಕೃಷಿ ಆರ್ಥಿಕತೆ ಉತ್ತಮವಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಕೃಷಿ ಆರ್ಥಿಕತೆ ಉತ್ತಮವಾಗಿದ್ದರೆ ಅವರು ಸಾಲ ಮರುಪಾವತಿ ಮಾಡುತ್ತಿದ್ದರು. ಕೃಷಿ ಆರ್ಥಿಕತೆ ಸದೃಢಗೊಳಿಸಲು  ಕ್ರಮ ಕೈಗೊಳ್ಳಬೇಕು, ರೈತರ ಆದಾಯ ಹೆಚ್ಚಿಸಲು  ಕ್ರಮ ಕೈಗೊಳ್ಳಬೇಕು.
ನಾವು ಇಂತಹ ಸ್ಥಿತಿಯನ್ನು ಏಕೆ ತಲುಪಿದ್ದೇವೆ?
ಕೃಷಿ  ಕ್ಷೇತ್ರದಲ್ಲಿ ತೊಂದರೆಯುಂಟಾಗಲು ನಾವು ಅವಕಾಶ ಮಾಡಿಕೊಟ್ಟಿದ್ದೇವೆ. 10 ವರ್ಷಗಳ ಹಿಂದೆಯೇ  ರೈತರಿಗಾಗಿ ರಾಷ್ಟ್ರೀಯ ನೀತಿಯ ಕರಡು ರೂಪಿಸಿದ್ದೇನೆ. ಆದರೆ.ಯಾವುದೇ ಸರ್ಕಾರಗಳು ಕ್ರಮ ಕೈಗೊಳ್ಳಲಿಲ್ಲ. ಕೇವಲ ವರದಿಯನ್ನು ಮುದ್ರಣಪಡಿಸಿ ಸಂಸತ್ತಿನಲ್ಲಿ ಹಂಚಿದ್ದಾರೆ ಅಷ್ಟೇ.
ರೈತರು ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.  ಇದು ತುಂಬಾ ಗಂಭೀರವಾದ ಸಮಸ್ಯೆ ಎಂದು ಯೋಚಿಸುವಿರಾ ?
 ಕರ್ನಾಟಕ ಮಾತ್ರವಲ್ಲ, ಅನೇಕ ರಾಜ್ಯಗಳಲ್ಲಿಯೂ ಈ ಸಮಸ್ಯೆಯಿದೆ. ಇಂತಹ ಸಮಸ್ಯೆಗಳಿಗೆ ಎಚ್ಚರಿಕೆಯಿಂದ ಗಮನಹರಿಸಬೇಕಾಗಿದೆ. ಮಾರುಕಟ್ಟೆ ತೊಂದರೆಯಾಗಿರಬಹುದು, ಅಥವಾ ದರ , ಕನಿಷ್ಠ ಬೆಂಬಲ ಬೆಲೆ ಯಾವುದೂ ಸರಿಯಾಗಿರುವುದಿಲ್ಲ
ಕೇಂದ್ರಸರ್ಕಾರ ಇತ್ತೀಚಿಗೆ ಘೋಷಿಸಿದ್ದ ಕನಿಷ್ಠ ಬೆಂಬಲ ಬೆಲೆ ಘೋಷಣೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಧಾನಿ ನರೇಂದ್ರಮೋದಿ ಇತ್ತೀಚಿಗೆ ಗಣನೀಯವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ್ದಾರೆ. ಬಹು ಹಿಂದೆಯೇ ಈ ಬಗ್ಗೆ ಶಿಫಾರಸ್ಸು ಮಾಡಿದ್ದೆ. ರೈತರ ಸಮಸ್ಯೆಯನ್ನು ಸಹ ಭಾರತದಲ್ಲಿ ರಾಜಕೀಯ ದೃಷ್ಟಿಕೋನದಿಂದ ನೋಡಲಾಗುತ್ತದೆ. ಒಂದು ವೇಳೆ ಅಂತಹ ವಿಷಯಗಳ ಬಗ್ಗೆ ಮಾತನಾಡದಿದ್ದರೆ, ಅವರು ಗಮನ ಹರಿಸುವುದಿಲ್ಲ.
 ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ  ಕರ್ನಾಟಕದ ಮುಖ್ಯಮಂತ್ರಿಗೆ ನಿಮ್ಮ ಸಲಹೆ ಏನು ?
ನಗರೀಕರಣದ ಕಾಲದಲ್ಲಿ ಹಣ್ಣು, ತರಕಾರಿ ಉತ್ಪಾದನೆ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ,  ಪ್ಯಾಕಿಂಗ್ ಮತ್ತು ಮಾರುಕಟ್ಟೆ ಕೂಡಾ ಅತಿ ಪ್ರಮುಖವಾಗಿದೆ. ಮಾರುಕಟ್ಟೆ ಕೇಂದ್ರಿತ ತೋಟಗಾರಿಕೆ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದೇನೆ.
 ಸರ್ಕಾರ ಏನೆಲ್ಲಾ ಕ್ರಮ ಕೈಗೊಳ್ಳಬೇಕು?
ಸರ್ಕಾರ ಸಂಶೋಧನೆ ಮತ್ತು  ಪ್ರದರ್ಶನ ಕೇಂದ್ರಗಳನ್ನು ಸ್ಥಾಪಿಸಬೇಕು, ಇಲ್ಲಿ ಉತ್ತಮ ತೋಟಗಾರಿಕೆ ರೈತರನ್ನು ಗುರುತಿಸಬೇಕು ಮತ್ತು ಇನ್ನಿತರರಿಗೆ ತರಬೇತಿ ನೀಡಬೇಕು,  ಭೂಮಿಯಿಂದ ಭೂಮಿಗೆ ಎನ್ನುವಂತಾಗಿರಬೇಕು,  ಸಂಸ್ಕರಣೆ, ಮಾರ್ಕೆಟಿಂಗ್,  ದರದ ಬಗ್ಗೆ ಸರ್ಕಾರ ಗಮನ ಹರಿಸಬೇಕು  ರಾಜ್ಯ ರೈತ ಆಯೋಗವನ್ನು ಸರ್ಕಾರ ಸ್ಥಾಪಿಸಬೇಕು
ಕರ್ನಾಟಕದಲ್ಲಿ ಸಮುದ್ರ  ನೀರು ಕೃಷಿ ಬಗ್ಗೆ ನಿಮ್ಮ ದೃಷ್ಟಿಕೋನ ಏನು ?
ನೀರು ಸಮುದ್ರ ನೀರಿನಿಂದ ಕೂಡಿದೆ. ಈ ಬಗ್ಗೆ ಕರಾವಳಿ ಪ್ರದೇಶಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ.
 ಇಸ್ರೇಲ್ ಕೃಷಿ ಮಾದರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು
 ಈ ಪದ್ದತಿಯಿಂದ ಸಾಕಷ್ಟು ಅನುಕೂಲವಾಗುತ್ತದೆ. ನೀರಿನ ಬಳಕೆಯಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಲು ಇದು ಪ್ರಮುಖವಾಗಿದೆ.  ಮಳೆ ಕೊಯ್ಲು ವಿಧಾನವನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಡಬೇಕು. ನೀರು ನಿರ್ವಹಣೆಯಲ್ಲಿ ಯಾವುದೇ ಮಾದರಿಯನ್ನು ಅನುಸರಿಸಬಹುದು, ಕರ್ನಾಟಕ ತನ್ನದೇ ಆದ ಸ್ವಂತ ಮಾದರಿಯನ್ನು ಅಭಿವೃದ್ದಿಪಡಿಸಬಹುದು.
ರೈತರಿಗೆ ನಿಮ್ಮ ಸಲಹೆಗಳು ಏನು ?

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com