ಈ ವರೆಗೂ ಬಿಎಂಟಿಸಿ ವಿದ್ಯಾರ್ಥಿಗಳಿಗೆ 4 ಲಕ್ಷ ಬಸ್ ಪಾಸ್ ಗಳನ್ನು ವಿತರಿಸಿದ್ದು, ಈ ಪಾಸ್ ಗಳಿಗೆ ಈಗಾಗಲೇ ಸಬ್ಸಿಡಿಗಳನ್ನು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳ ಪಾಸ್ ಗಳಿಗೆ ಸರ್ಕಾರ ಈಗಾಗಲೇ ಶೇ.50 ರಷ್ಟು ಅಂದರೆ ರೂ.250 ಕೋಟಿ ಹಣವನ್ನು ನೀಡಿದೆ. ಬಿಎಂಟಿಸಿ ಶೇ.25 ರಷ್ಟು ಅನುದಾನವನ್ನು ಭರಿಸುತ್ತಿದೆ. ಅಂದರೆ, ರೂ.40 ಕೋಟಿಯಷ್ಟು ಬಿಎಂಟಿಸಿ ನೀಡುತ್ತಿದೆ. ಇನ್ನುಳಿದ ಶೇ.25 ರಷ್ಟು ಹಣವನ್ನು ವಿದ್ಯಾರ್ಥಿಗಳು ಬಸ್ ಪಾಸ್ ಗಳಿಗೆ ನೀಡಬೇಕಾಗುತ್ತದೆ. ಆದರೆ, ವಿದ್ಯಾರ್ಥಿಗಳು ಶೇ.25 ರಷ್ಟು ಅನುದಾನವನ್ನೂ ನೀಡುವಂತೆ ಆಗ್ರಹಿಸುತ್ತಿದ್ದಾರೆ.