ಬೆಂಗಳೂರು: ಚಾಕೋಲೇಟ್ ಚಿನ್ನದ ಪೇಪರ್ ರೀತಿ ಚಿನ್ನದ ಸಾಗಾಟ- ಖದೀಮರ ಬಂಧನ

ಚಪ್ಪಲಿ, ಗುದದ್ವಾರ, ಮೇಕಪ್ ಸೆಟ್'ಗಳಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳು ಇದೀಗ ಚಾಕೋಲೇಟ್ ಅನ್ನು ಚಿನ್ನದ ಪೇಪರ್'ನಲ್ಲಿ ಸುತ್ತಿ ಸಾಗಾಟ ಮಾಡುವಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ಚಪ್ಪಲಿ, ಗುದದ್ವಾರ, ಮೇಕಪ್ ಸೆಟ್'ಗಳಲ್ಲಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಆರೋಪಿಗಳು ಇದೀಗ ಚಾಕೋಲೇಟ್ ಅನ್ನು ಚಿನ್ನದ ಪೇಪರ್'ನಲ್ಲಿ ಸುತ್ತಿ ಸಾಗಾಟ ಮಾಡುವಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. 
ಕಾಸರಗೋಡಿ ನಿವಾರಿ ರೌಫ್ಕಟ್ಟಕ್ಕಲ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ರೂ.11.83 ಲಕ್ಷ ಮೊಲ್ಯದ 384 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 
ಆರೋಪಿ ಗುರುವಾರ ಬೆಳಿಗ್ಗೆ ಬಹ್ರೇನ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದ. ಆತನ ಬಳಿ ಬ್ಯಾಗ್ ಇತ್ತು. ಕಸ್ಟಮ್ಸ್ ಅಧಿಕಾರಿಗಳು ಅನುಮಾನದಿಂದ ಬ್ಯಾಗ್ ನಲ್ಲಿದ್ದ ವಸ್ತುಗಳನ್ನು ತೀವ್ರವಾಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ತುಂಬ ಚಾಕೋಲೇಟ್ ಮತ್ತು ಚ್ಯೂಯಿಂಗ್ ಗಮ್ ಪತ್ತೆಯಾಗಿದೆ. 
ಚಾಕೋಲೇಟ್ ಗಳನ್ನು ತೆಗೆದು ನೋಡಿದಾಗ ಆರೋಪಿ ಚಾಕೋಲೇಟ್ ತಿನಿಸಿನ ಮೇಲೆ ಬಂಗಾರದ ಹಾಳೆ ಮಾಡಿ ಚಾಕೋಲೇಟ್ ಪೇಪರ್ ಸುತ್ತಿರುವುದು ಕಂಡು ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 
ದುಬಾರಿ ಚಾಕೋಲೇಟ್ ಗಳ ಒಳಗೆ ಗೋಲ್ಡ್ ಕಲರ್ ಇರುವ ಹಾಳೆಗಳನ್ನು ಸುತ್ತಿರಲಾಗಿರುತ್ತದೆ. ಆದರಂತೆ ಚಿನ್ನದಂತೆ ಹಾಳೆ ಮಾಡಿ ಚಾಕೋಲೇಟ್ ಗಳಿಗೆ ಸುತ್ತಿಕೊಂಡು ಆರೋಪಿ ಬಂದಿದ್ದ. ಇದೇ ಮೊದಲ ಬಾರಿಗೆ ಆರೋಪಿಗಳು ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಈ ರೀತಿಯ ಹೊಸ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com