ಕಾರವಾರ : ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 8 ಆರೋಪಿಗಳ ಬಂಧನ

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಉದ್ಯಮಿಗಳು, ಕಾಲೇಜು ವಿದ್ಯಾರ್ಥಿ ಸೇರಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ  ಕಾಡು ಪ್ರಾಣಿಗಳ ಚರ್ಮ ಮತ್ತು ಕೊಂಬುಗಳನ್ನು ಮಾರಾಟ ಮಾಡುತ್ತಿದ್ದ ಉದ್ಯಮಿಗಳು,  ಕಾಲೇಜು ವಿದ್ಯಾರ್ಥಿ ಸೇರಿದಂತೆ 8 ಮಂದಿ ಆರೋಪಿಗಳನ್ನು  ಪೊಲೀಸರು  ಬಂಧಿಸಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್  ವ್ಯಾಪ್ತಿಯಲ್ಲಿ ಚಿರತೆ ಚರ್ಮ ಮಾರಾಟ ಮಾಡುತ್ತಿದ್ದ ಸಿರಸಿಯ ಮಂಜುನಾಥ್ ರತ್ನಕರ್ ಮತ್ತು ಹೊನ್ನಾವರದ ಕೃಷ್ಣ ಗಣಪ ಅವರನ್ನು  ಗುರುವಾರ ಬಂಧಿಸಿದ ಪೊಲೀಸರು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ವಿಚಾರಣೆ ವೇಳೆಯಲ್ಲಿ ಈ ಪ್ರಕರಣದಲ್ಲಿ ಕೆಲ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿರುವುದನ್ನು ತಿಳಿದ ಪೊಲೀಸರು ಶಿರಸಿಗೆ ಹೋಗಿ  ಇತರ ಆರು ಮಂದಿಯನ್ನು ಬಂಧಿಸಿದ್ದು,  ಜಿಂಕೆ ಚರ್ಚೆ, ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರಸಿಯ ರಾಮ್  ರೆಸಾರ್ಟ್ ಮಾಲೀಕ ಉದಯ್ ರಾಮ್ ನಾಯಕ್,  ಉದಯ್ ಗಂಗಾಧರ್ ರಾಯ್ ಕಾರ್,  ಮಹೇಂದ್ರ ಹೆಗ್ಡೆ,  ಮಂಜುನಾಥ್ ನಾಯ್ಕ್,  ರಾಘವೇಂದ್ರ ಪೂಜಾರಿ,  ಸುನೀಲ್ ನಾಯ್ಕ್ ಅವರನ್ನು ಬಂಧಿಸಿ  ಬೆಂಗಳೂರಿಗೆ ಕರೆತರಲಾಗಿದೆ.

ವನ್ಯಜೀವಿಗಳ ಭೇಟಿ ಮತ್ತು ಚರ್ಮ ಮಾರಾಟದಲ್ಲಿ ತೊಡಗಿದ್ದ  ಆರೋಪದ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ 8 ಮಂದಿ ಆರೋಪಿಗಳ ಮೇಲೂ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com