27ಕ್ಕೆ 'ಸೂಪರ್ ಬ್ಲಡ್ ಮೂನ್': ಚಂದ್ರನನ್ನು ನೋಡಲು ಬೆಂಗಳೂರಿನ ತಾರಾಲಯದಲ್ಲಿ ವ್ಯವಸ್ಥೆ

ಪ್ರಸಕ್ತ ಸಾಲಿನ ಮೊದಲ ಚಂದ್ರಗ್ರಹಣ ಜುಲೈ.27-28ರ ನಡುವಿನ ರಾತ್ರಿ ಸಂಭವಿಸಿಲಿದ್ದು. ವಿಶ್ವದಾದ್ಯಂತ ಗೋಚರಗೊಳ್ಳುವ ಈ ಚಂದ್ರಗ್ರಹಣ, ಸರಿಸುಮಾರು 1 ಗಂಟೆ 43 ನಿಮಿಷಗಳ ಕಾಲ ಚಂದ್ರಗ್ರಹಣ ಇರಲಿದೆ...
27ಕ್ಕೆ 'ಸೂಪರ್ ಬ್ಲಡ್ ಮೂನ್': ಚಂದ್ರನನ್ನು ನೋಡಲು ಬೆಂಗಳೂರಿನ ತಾರಾಲಯದಲ್ಲಿ ವ್ಯವಸ್ಥೆ
27ಕ್ಕೆ 'ಸೂಪರ್ ಬ್ಲಡ್ ಮೂನ್': ಚಂದ್ರನನ್ನು ನೋಡಲು ಬೆಂಗಳೂರಿನ ತಾರಾಲಯದಲ್ಲಿ ವ್ಯವಸ್ಥೆ
ಬೆಂಗಳೂರು: ಪ್ರಸಕ್ತ ಸಾಲಿನ ಮೊದಲ ಚಂದ್ರಗ್ರಹಣ ಜುಲೈ.27-28ರ ನಡುವಿನ ರಾತ್ರಿ ಸಂಭವಿಸಿಲಿದ್ದು. ವಿಶ್ವದಾದ್ಯಂತ ಗೋಚರಗೊಳ್ಳುವ ಈ ಚಂದ್ರಗ್ರಹಣ, ಸರಿಸುಮಾರು 1 ಗಂಟೆ 43 ನಿಮಿಷಗಳ ಕಾಲ ಚಂದ್ರಗ್ರಹಣ ಇರಲಿದೆ. ಹೀಗಾಗಿ ಅದನ್ನು ಶತಮಾನದಲ್ಲಿಯೇ ಅತ್ಯಂದ ದೀರ್ಘಾವಧಿಗೆ ಗೋಚರವಾಗುವ ಗ್ರಹಣ, ಫುಲ್ ಬ್ಲಡ್ ಮೂನ್ ಎಂದು ಕೂಡ ಕರೆಯಲಾಗುತ್ತಿದೆ. 
ಚಂದ್ರನನ್ನು ಬಹಳ ಹತ್ತಿರದಿಂದ ನೋಡಲುವ ಅವಕಾಶವನ್ನು ಸಾರ್ವಜನಿಕರಿಗೆ ಮಾಡಿಕೊಡುವ ಸಲುವಾಗಿ ನಗರದಲ್ಲಿರುವ ತಾರಾಲಯಗಳು ವ್ಯವಸ್ಥೆ ಕಲ್ಪಿಸಲು ನಿರ್ಧಾರ ಕೈಗೊಂಡಿವೆ. 
ಆಗಸದಲ್ಲಿ ಸ್ಪಷ್ಟ ಚಿತ್ರಣಗಳು ಕಂಡು ಬರುತ್ತಿದ್ದಂತೆಯೇ ಸಾರ್ವಜನಿಕರಿಗೂ ಚಂದ್ರಗ್ರಹಣವನ್ನು ವೀಕ್ಷಣೆ ಮಾಡುವಂತಹ ಅವಕಾಶವನ್ನು ಕಲ್ಪಿಸಲಾಗುತ್ತದೆ. ಮೋಡ ಕವಿದ ವಾತಾವರಣ ಇದಿದ್ದೇ ಆದರೆ, ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಜವಾಹರ್ ಲಾಲ್ ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿಯವರು ಹೇಳಿದ್ದಾರೆ. 
ಜು.27ರಂದು ಮಧ್ಯರಾತ್ರಿ 11.54 ಗಂಟೆಗೆ ಚಂದ್ರಗ್ರಹಣ ಆರಂಭವಾಗಲಿದೆ. ರಾತ್ರಿ 1 ಗಂಟೆಗೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿ ಚಂದ್ರನನ್ನು ಕೆಂಪಾಗಿಸಲಿದೆ. ನಂತರ 2.43ಗಂಟೆಯವರೆಗೂ ಇದೇ ರೀತಿ ಗ್ರಹಣದ ಪೂರ್ಣ ಸ್ಥಿತಿ ಇರಲಿದೆ. ಬಳಿಕ ನೆರಳು ಬಿಟ್ಟುಕೊಳ್ಳುತ್ತಾ ಗ್ರಹಣ ಮುಗಿಯಲಿದೆ. ರಾತ್ರಿ 3.49 ಗಂಟೆಗೆ ಗ್ರಹಣ ಸಂಪೂರ್ಣವಾಗಿ ಬಿಡಲಿದೆ. ಪ್ರತೀವರ್ಷ ನಡೆಯುವ ಚಂದ್ರಗ್ರಹಣಕ್ಕೆ ಹೋಲಿಸಿದರೆ, ಈ ಚಂದ್ರಗ್ರಹಣವು ಕೆಲ ನಿಮಿಷಗಳ ಕಾಲ ಹೆಚ್ಚಾಗಿರಲಿದೆ ಎಂದು ತಿಳಿಸಿದ್ದಾರೆ. 
ಚಂದ್ರನ ಸಮೀಪಕ್ಕೆ ಮಂಗಳ ಗ್ರಹಣ ಕೂಡ ಬರುತ್ತಿರುವುದರಿಂದ ಈ ಬಾರಿಯ ಚಂದ್ರಗ್ರಹಣ ಬಹಳ ವಿಶೇಷವಾಗಿದೆ. ಅತೀ ದೀರ್ಘಾವಧಿ ಕೆಂಪು ಚಂದ್ರ ಬಾನಂಗಳದಲ್ಲಿ ಗೋಚರಿಸುತ್ತದೆ. ನೂರು ವರ್ಷಗಳಿಗೊಮ್ಮೆ ನಭೋಮಂಡಲದಲ್ಲಿ ಇಂತಹದ್ದೊಂದು ಕೌತುಕ ಸಂಭವಿಸುತ್ತದೆ. ಸೂರ್ಯಗ್ರಹಣವನ್ನು ಬರೀಗಣ್ಣಿನಿಂದ ನೋಡುವುದು ಕಷ್ಟ ಆದರೆ, ಚಂದ್ರಗ್ರಹಣವನ್ನು ಬರಿಗಣ್ಣನಿಂದ ನೋಡಲು ಸಾಧ್ಯವಿದೆ. ಜೊತೆಗೆ ಸಮೀಪದಲ್ಲಿಯೇ ಮಂಗಳ ಗ್ರಹ ಬರುವುದನ್ನೂ ನಾವು ನೋಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com