ಸಂಗ್ರಹ ಚಿತ್ರ
ರಾಜ್ಯ
ವಿಧಾನಸೌಧದಲ್ಲಿ ದಲ್ಲಾಳಿಗಳಿಗೆ ಮಾತ್ರ ತಡೆ, ಮಾಧ್ಯಮಗಳಿಗಲ್ಲ; ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ
ವಿಧಾನ ಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರವೇಶ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂಬ ಸುದ್ದಿಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ದಲ್ಲಾಳಿಗಳಿಗೆ ಮಾತ್ರ ತಡೆ, ಮಾಧ್ಯಮಗಳಿಗಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು: ವಿಧಾನ ಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಪ್ರವೇಶ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂಬ ಸುದ್ದಿಗೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ದಲ್ಲಾಳಿಗಳಿಗೆ ಮಾತ್ರ ತಡೆ, ಮಾಧ್ಯಮಗಳಿಗಲ್ಲ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾದ್ಯಮಗಳಿಗೆ ನಿಷೇಧ ಹೇರಲಾಗಿದೆ ಎಂಬ ಮಾಧ್ಯಮಗಳ ಸುದ್ದಿಗೆ ಸ್ಪಷ್ಟನೆ ನೀಡಿದ ಅಂತಹ ಯಾವುದೇ ಆದೇಶವನ್ನು ನಾನು ನೀಡಿಲ್ಲ. ವಿಧಾನಸೌಧದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಅವರನ್ನು ತಡೆಯುತ್ತೇವೆ, ಮಾಧ್ಯಮಗಳಿಗೆ ಯಾವುದೇ ತಡೆ ಇಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಕೆಲವರಿಂದ ವಿಧಾನಸೌಧದಲ್ಲಿ ಅನಾನುಕೂಲಗಳು ಆಗುತ್ತಿವೆ. ಸಾರ್ವಜನಿಕರು ಬೆಳಗ್ಗಿನಿಂದ ರಾತ್ರಿ ಯವರೆಗೆ ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಧಿಕಾರಿಗಳಿಗೂ ಕೆಲಸ ಮಾಡಲು ಅನಾನುಕೂಲ ಆಗುತ್ತಿದೆ. ದಲ್ಲಾಳಿಗಳು ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನರಿಗೆ ದಾರಿ ತಪ್ಪಿಸುವವರ ವಿರುದ್ಧ ಎಚ್ಚರಿಕೆ ವಹಿಸುತ್ತೇವೆ. ಕಾನೂನು ಬಾಹಿರ ಚಟುವಟಿಕೆಗಳಾಗದಂತೆ ತಡೆ ಹಾಕುತ್ತೇವೆ ಎಂದು ಹೇಳಿದರು.
ಮಾಧ್ಯಮ ಮಿತ್ರರು ಪ್ರತ್ಯೇಕವಾಗಿ ಒಬ್ಬೊಬ್ಬರೇ ಮೈಕ್ ಹಿಡಿದು ಬರುತ್ತೀರಿ. ಆ ಬಳಿಕ ಕೆಲವರು ನಮಗೆ ಮಾಹಿತಿ ನೀಡಿಲ್ಲ ಎಂದು ಟೀಕಿಸುತ್ತೀರಿ. ಇದರಿಂದ ಸಚಿವರಾಗಲಿ, ನನಗಾಲಿ ಕೆಲಸಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಮಾಧ್ಯಮ ಮಿತ್ರರಿಗೆ ಪ್ರತ್ಯೇಕ ರೂಮ್ ನ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಈಗಿರುವ ಸ್ಟಾಂಡ್ ಬದಲು ಮಳೆ, ಬಿಸಿಲು, ಗಾಳಿಯಲ್ಲಿ ರಕ್ಷಣೆ ಕೊಡುವಂತ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ