ಗೌರಿ ಹಂತಕನ ಪತ್ತೆಗಾಗಿ ಎಸ್ ಐಟಿಯಿಂದ ವಿಜಯಪುರದ 2,000 ಯುವಕರ ವಿಚಾರಣೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ (ಎಸ್ ಐಟಿ) ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 2,000 ಯುವಕರನ್ನು ಪ್ರಶ್ನಿಸಿದೆ.
ಪತ್ರಕರ್ತೆ ಗೌರಿ ಲಂಕೇಶ್
ಪತ್ರಕರ್ತೆ ಗೌರಿ ಲಂಕೇಶ್
Updated on: 
ವಿಜಯಪುರ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ತಂಡ (ಎಸ್ ಐಟಿ) ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು  2,000 ಯುವಕರನ್ನು ಪ್ರಶ್ನಿಸಿದೆ.
ಈ ಪ್ರದೇಶದ ಹಿಂದೂ ಪರ ಸಂಘಟನೆಗಳ ಕೆಲಸ ಕಾರ್ಯಗಳು ಹಾಗೂ ದೇಶೀ ಪಿಸ್ತೂಲು ಬಳಕೆ ಕುರಿತಂತೆ ಎಸ್ ಐಟಿ ತಂಡ ಸಾಕಷ್ಟು ವಿಚಾರಣೆ ನಡೆಸಿತ್ತು.. ಹತ್ಯೆ ಪ್ರಕರಣದಲ್ಲಿ ಮೊದಲಿಗೆ ಬಂಧಿಸಲಾದ ಮನೋಹರ್ ಇದೇ ಜಿಲ್ಲೆಯವನಾಗಿದ್ದು ಈತನ ಬಂಧನಕ್ಕೆ ಮುನ್ನ ಎಸ್ ಐಟಿ ಈ ಆರೋಪಿಯ ಪತ್ತೆಗಾಗಿ 500 ಕ್ಕಿಂತಲೂ ಹೆಚ್ಚು ಯುವಕರನ್ನು ಪ್ರಶ್ನಿಸಿತ್ತು.
ಮನೋಹರ್ ಈದಾವೆ ಬಂಧನ ಈ ಪ್ರಕರಣದ ಪ್ರಮುಖ ತಿರುವಾಗಿತ್ತು. ಈತನ ಮನೆಯಲ್ಲಿ ಡೈರಿ ಹಾಗೂ 22ಕ್ಕೂ ಹೆಚ್ಚು ಸಂಖ್ಯೆಯ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಹಾಗೆಯೇ ಈತನ ಬಂಧನದಿಂದಲೇ ಪ್ರಮುಖ ಆರೋಪಿಯಾದ ಸಿಂಧಗಿಯ ಪರಶುರಾಮ್ ವಾಗ್ಮೋರೆ ಸುಳಿವು ಸಿಕ್ಕಿತ್ತು.
ವಾಗ್ಮೋರೆ ಬಂಧನಕ್ಕೆ ಮುನ್ನ ಎಸ್ ಐಟಿ ತಂಡ ಸಿಂಧಗಿ ಹಾಗೂ ವಿಜಯಪುರದ ಸುಮಾರು 1,500 ಕ್ಕಿಂತಲೂ ಹೆಚ್ಚು ಯುವಕರನ್ನು ವಿಚಾರಣೆಗೆ ಒಳಪಡಿಸಿತ್ತು.ಇನ್ನು ಪ್ರಕರಣದ ಇತರೆ ಆರೋಪಿಗಳ ಪತ್ತೆಗಾಗಿ ಕಲಬುರ್ಗಿ, ಧಾರವಾಡ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಎಸ್ ಐಟಿ ತಂಡ ಸತತ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com