ಜುಲೈ 23ರ ಮಧ್ಯಾಹ್ನ 3.30ರ ಸುಮಾರಿಗೆ ಸಂತ್ರಸ್ತ ವಿದ್ಯಾರ್ಥಿನಿ, ಸಹಪಾಠಿಯ ಜತೆ ಉದ್ಯಾನದಲ್ಲಿ ಕುಳಿತಿದ್ದಳು. ಈ ವೇಳೆ ಕ್ಯಾಬ್ ನಲ್ಲಿ ಅಲ್ಲಿಗೆ ತೆರಳಿರುವ ದುಷ್ಕರ್ಮಿ ಶ್ರೀನಾಥ್, ಪಿಸ್ತೂಲ್ ಮಾದರಿಯ ಲೈಟರ್ ತೋರಿಸಿ ಬೆದರಿಸಿದ್ದಾನೆ. 'ನಾನು ಸಿಸಿಬಿ ಕಾನ್ ಸ್ಟೆಬಲ್. ಇಲ್ಲಿ ಕುಳಿತು ಏನು ಮಾಡುತ್ತಿದ್ದೀರಾ? ನಿಮ್ಮಿಬ್ಬರ ವಿರುದ್ಧ ಯಾರೋ ದೂರು ಕೊಟ್ಟಿದ್ದಾರೆ' ಎಂದು ಏರುದನಿಯಲ್ಲಿ ಹೇಳಿದ್ದಾನೆ. ಇದರಿಂದ ಹೆದರಿದ ಸ್ನೇಹಿತ, ಅಲ್ಲಿಂದ ಎದ್ದು ಹೋಗಿದ್ದಾನೆ. ಇತ್ತ ಈಕೆ ಕೂಡ ಬಸ್ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ್ದಾಳೆ.