ಸಾಹಿತಿ ಪ್ರೊ. ಭಗವಾನ್ ಹತ್ಯೆಗೆ ಸಂಚು: 2 ಆರೋಪಿಗಳು ತಪ್ಪೊಪ್ಪಿಗೆ

ವಿಚಾರವಾದಿ, ಸಾಹಿತಿ ಪ್ರೊ.ಕೆ.ಎಸ್, ಭಗವಾನ್ ಹತ್ಯೆಗೆ ಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವಿಚಾರವಾದಿ, ಸಾಹಿತಿ ಪ್ರೊ.ಕೆ.ಎಸ್, ಭಗವಾನ್ ಹತ್ಯೆಗೆ ಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. 
ಭಗವಾನ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಪೊಲೀಸರು ಉಡುಪಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಪಟ್ಟಿಯಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. 
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ 7 ಮಂದಿ ಆರೋಪಿಗಳ ಪೈಕಿ ಓರ್ವ ಆರೋಪಿ ಕೆ.ಎಸ್, ಭಗವಾನ್ ಹತ್ಯೆಗೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ತಿಳಿದುಬಂದಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೆ.ಟಿ.ನವೀನ್ ಕುಮಾರ್ಸ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್, ಅಮೋಲ್ ಕಾಳೆ ಅಲಿಯಾಸ್ ಭಾಯ್'ಸಾಬ್ ಅಲಿಯಾಸ್ ಸಂಜಯ್ ಬನ್ಸಾರೆ, ಅಮಿತ್ ದೆಗ್ವೆಕಾರ್ ಅಲಿಯಾಸ್ ಪ್ರದೀಪ್ ಮಹಾಜನ್, ಮನೋಹರ್ ದುಂಡಪ್ಪ ಇಡವೆ ಅಲಿಯಾಸ್ ಮನೋಜ್ ಮತ್ತು ನಿಹಾಲ್ ಅಹಿಲಾಯ್ ದಾದಾ ( ತಲೆಮರೆಸಿಕೊಂಡಿರುವ ಆರೋಪಿ) ಆರೋಪಿಗಳಾಗಿದ್ದಾರೆ. 
ಭಗವಾನ್ ಹತ್ಯೆ ಪ್ರಕರಣದಲ್ಲಿ ಇದೀಗ ಇಬ್ಬರು ತಪ್ಪೊಪ್ಪಿಕೊಂಡಿದ್ದು, ಇಬ್ಬರನ್ನು ಡಿ.ಅನಿಲ್ ಕುಮಾರ್ ಅಲಿಯಾಸ್ ಅನಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ನವೀನ್ ಕುಮಾರ್ ಆಪ್ತ ಗೆಳೆಯನಾಗಿದ್ದಾನೆ. ಶಸ್ತ್ರಾಸ್ತ್ರ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಯ್ಯದ್ ಶಬ್ಬೀರ್ ಎಂದು ಹೇಳಲಾಗುತ್ತಿದೆ. 
ಭಗವಾನ್ ಹತ್ಯೆಗೆ ಸಂಚು ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿದ್ದು, ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇಬ್ಬರನ್ನೂ ತಪ್ಪಿತಸ್ಥರೆಂದು ಪರಿಗಣಿಸುವಂತೆ ಅಧಿಕಾರಿಗಳು ಇದೀಗ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. 
ಶೂಟ್ ಮಾಡುವ ಅಭ್ಯಾಸ ನಡೆಸಬೇಕಿದ್ದು, ಏರ್ ಗನ್ ಬೇಕೆಂದು ನವೀನ್ ಕೇಳಿದ್ದ. ಅಲ್ಲದೆ, ಭಗವಾನ್ ಅವರು  ಹಿಂದೂ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಚಟುವಟಿಕೆಗಳ ಮೇಲೂ ಕಣ್ಗಾವಲಿರಿಸುವಂತೆ ತಿಳಿಸಿದ್ದ. ಸುಜೀತ್, ಕಾಳೆ, ಅಮಿಕ್ ದೆಗ್ವೇಕರ್ ಮತ್ತು ನಿಬಾರ್ ಅವರು ಜನವರಿ ತಿಂಗಳಿನಲ್ಲಿ ನವೀನ್'ನನ್ನು ಭೇಟಿ ಮಾಡಲು ಮದ್ದೂರಿಗೆ ಬಂದಿದ್ದರು. ಈ ವೇಳೆ ನವೀನ್ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟಿದ್ದ. ಅಲ್ಲದೆ, ಭಗವಾನ್ ಅವರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸುವ ಜವಾಬ್ದಾರಿಯನ್ನು ನನಗೆ ನೀಡಿರುವುದಾಗಿಯೂ ನವೀನ್ ತಿಳಿಸಿದ್ದ ಎಂದು ವಿಚಾರಣೆ ವೇಳೆ ಅನಿಲ್ ಹೇಳಿಕೊಂಡಿದ್ದಾನೆ. 
ನವೀನ್ ಅಂಗಡಿಗೆ ಬಂದು ರೂ.3,500ರಂತೆ ಎರಡು ಏರ್ ಗನ್ ಗಳನ್ನು ಖರೀದಿ ಮಾಡಿದ್ದ. 7-8 ವರ್ಷಗಳಾದ ಬಳಿಕ ಮತ್ತೆ ಅಂಗಡಿಗೆ ಬಂದಿದ್ದ ಆತ ಪರವಾನಗಿ ಇರುವ ಪಿಸ್ತೂಲ್ ಬೇಕೆಂದು ಕೇಳಿದ್ದ. ನನ್ನ ಬಳಿ ಪಿಸ್ತೂಲ್ ಪರವಾನಗಿ ಇಲ್ಲ ಎಂದು ಹೇಳಿದ್ದೆ. ನಾನು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಂತೆಯೇ ಮನವಿ ಮಾಡಿಕೊಂಡ ನವೀನ್ ಕನಿಷ್ಟ ಪಕ್ಷ ಗುಂಡುಗಳನ್ನಾದರೂ ನೀಡುವಂತೆ ಮನವಿ ಮಾಡಿಕೊಂಡ. ಬೇರಾವುದೇ ಉದ್ದೇಶಗಳಿಲ್ಲ, ಲಾಕೆಟ್ ಗಳಂತೆ ಬಳಕೆ ಮಾಡುತ್ತೇನೆ. ಗುಂಡುಗಳನ್ನು ನೀಡುವಂತೆ ತಿಳಿಸಿದ್ದ. ಆ ಸಂದರ್ಭದಲ್ಲೂ ನನಗೂ ಹಣದ ಅವಶ್ಯಕತೆ ಇತ್ತು. ಬಳಿಕ ನನ್ನ ಗೆಳೆ ಅಮ್ಜದ್ ಜೊತಗೆ ಮಾತನಾಡಿ, ಕೆಲಸಕ್ಕೆ ಬಾರದ ಗುಂಡುಗಳನ್ನು ನೀಡುವಂತೆ ತಿಳಿಸಿದ್ದೆ. ಇದಾದ 3 ದಿನಗಳ ಬಳಿಕ ಅಮ್ಜದ್ 18 ಸುತ್ತಿನ 32 ಗುಂಡುಗಳನ್ನು ನನಗೆ ಕೊಟ್ಟಿದ್ದ. ಅದೇ ದಿನ ಸಂಜೆ ನವೀನ್ ನನಗೆ ಕಲೆ ಮಾಡಿದ್ದ ಬಳಿಕ ನಾನು ರೂ.3,000ಕ್ಕೆ ಗುಂಡುಗಳನ್ನು ಮಾರಾಟ ಮಾಡಿದ್ದೆ ಎಂದು ಕಲಾಸಿಪಾಳ್ಯದಲ್ಲಿ ಶಸ್ತ್ರಾಸ್ತ್ರ ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಯ್ಯದ್ ಶಬ್ಬೀರ್ ಹೇಳಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com