ಮಗಳ ನೆನಪಿನಾರ್ಥ ಬಡ ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಸುತ್ತಿರುವ 'ಗುಮಾಸ್ತ'

ಸರ್ಕಾರಿ ಶಾಲೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರೂ, ಮಗಳ ನೆನಪಿನಾರ್ಥ 45 ಬಡ ವಿದ್ಯಾರ್ಥಿನಿಯರ ಶಾಲಾ ಶುಲ್ಕ ಪಾವತಿ ಮಾಡುವ ಮುಖಾಂತರ ಇಲ್ಲೊಬ್ಬ ವ್ಯಕ್ತಿ ಇತರರಿಗೆ ಪ್ರೇರಣೆಯಾಗಿದ್ದಾರೆ...
ಮಗಳ ನೆನಪಿನಾರ್ಥ ಬಡ ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಸುತ್ತಿರುವ 'ಗುಮಾಸ್ತ'
ಮಗಳ ನೆನಪಿನಾರ್ಥ ಬಡ ಹೆಣ್ಣುಮಕ್ಕಳ ಶಾಲಾ ಶುಲ್ಕ ಪಾವತಿಸುತ್ತಿರುವ 'ಗುಮಾಸ್ತ'
ಕಲಬುರಗಿ: ಸರ್ಕಾರಿ ಶಾಲೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದರೂ, ಮಗಳ ನೆನಪಿನಾರ್ಥ 45 ಬಡ ವಿದ್ಯಾರ್ಥಿನಿಯರ ಶಾಲಾ ಶುಲ್ಕ ಪಾವತಿ ಮಾಡುವ ಮುಖಾಂತರ ಇಲ್ಲೊಬ್ಬ ವ್ಯಕ್ತಿ ಇತರರಿಗೆ ಪ್ರೇರಣೆಯಾಗಿದ್ದಾರೆ. 
ಕಲಬುರಗಿಯ ಮಕ್ತಾಂಪುರದಲ್ಲಿರುವ ಎಂಪಿಹೆಚ್ಎಸ್ ಸರ್ಕಾರಿ ಶಾಲೆಯಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜು ಇತರರಿಗೆ ಪ್ರೇರಣೆಯಾಗಿದ್ದಾರೆ. 
ಪ್ರಸಕ್ತ ಸಾಲಿನಿಂದ ಬಡ ಹೆಣ್ಣು ಮಕ್ಕಳ ಶಾಲೆ ಶುಲ್ಕ ಭರಿಸುವ ಕಾರ್ಯವನ್ನು ಆರಂಭಿಸಿದ್ದೇನೆಂದು ಬಸವರಾಜು ಅವರು ಹೇಳಿದ್ದಾರೆ. 
ಬಸವರಾಜು ಅವರ ಮಗಳು ದಾನೇಶ್ವರಿ ಯವರು ಕಳೆದ ವರ್ಷ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಳು. 
ನಮ್ಮದು ಬಡತನದ ಕುಟುಂಬ ಹಿನ್ನೆಲೆಯುಳ್ಳವರು. ಶಾಲಾ ಶುಲ್ಕವನ್ನು ಕಟ್ಟು ಸಾಧ್ಯವಾಗುತ್ತಿರಲಿಲ್ಲ. ಇದೀಗ ಬಸವರಾಜು ಸರ್ ತಮ್ಮ ಮಗಳ ನೆನಪಿನಾರ್ಥವಾಗಿ ನಮ್ಮ ಶಾಲಾ ಶುಲ್ಕವನ್ನು ಪಾವತಿಸುತ್ತಿದ್ದಾರೆ. ಅವರ ಮಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಕೋರಿತ್ತೇವೆ ಎಂದು ಎಂಪಿಹೆಚ್ಎಸ್ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com