ಕಳೆದ 6 ತಿಂಗಳಿನಿಂದ ನನಗೆ ಸಂಬಳ ಸಿಕ್ಕಿಲ್ಲ, ಹೇಗೆ ಜೀವನ ನಡೆಸಲಿ?; ಕೊಂಡಮ್ಮಳ ಪ್ರಶ್ನೆ

ಆರು ತಿಂಗಳಿನಿಂದ ವೇತನ ಸಿಗದೆ ಹತಾಶೆಗೀಡಾಗಿರುವ 50 ವರ್ಷದ ಕೊಂಡಮ್ಮ ಕಳೆದ ವಾರ ...
ಕೊಂಡಮ್ಮ
ಕೊಂಡಮ್ಮ

ಬೆಂಗಳೂರು: ಆರು ತಿಂಗಳಿನಿಂದ ವೇತನ ಸಿಗದೆ ಹತಾಶೆಗೀಡಾಗಿರುವ 50 ವರ್ಷದ ಕೊಂಡಮ್ಮ ಕಳೆದ ವಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್ ಸುಬ್ರಮಣಿ ಎಂಬ ಪೌರಕಾರ್ಮಿಕನಿಗೆ ಸಹ ಕಳೆದ 6 ತಿಂಗಳಿನಿಂದ ವೇತನ ಸಿಗದೆ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿವೇಕಾನಂದ ಮೆಟ್ರೊ ಸ್ಟೇಷನ್ ಹಿಂಭಾಗ ಇಂದಿರಾ ಹರಿಜನ ಸೇವಾ ಸಂಘದ ಕೊಳಚೆ ಪ್ರದೇಶದಲ್ಲಿ ಕೊಂಡಮ್ಮ ವಾಸ. ವಿಧವೆ ಕೊಂಡಮ್ಮ ಮೂವರು ಮಕ್ಕಳೊಂದಿಗೆ ನೆಲೆಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆಯಾಗಿಲ್ಲ ಇದ್ದ ಒಬ್ಬ ಮಗ ಮದ್ಯಪಾನದ ವ್ಯಸನದಿಂದ ಅನಾರೋಗ್ಯಕ್ಕೀಡಾಗಿ ಸರಿಯಾದ ಉದ್ಯೋಗವಿಲ್ಲದೆ ಇದ್ದಾನೆ. ಹೀಗಾಗಿ ಕೊಂಡಮ್ಮ ದುಡಿಯುವುದು ಅನಿವಾರ್ಯ. ಸರಿಯಾಗಿ ವೇತನ ಬಾರದಿರುವುದು ಕೊಂಡಮ್ಮಗೆ ತೀವ್ರ ಸಮಸ್ಯೆಯಾಗಿದೆ.

ಬೆಂಗಳೂರಿನ ವಾಯುಮಾಲಿನ್ಯದಿಂದ ಕೊಂಡಮ್ಮಗೆ ಇತ್ತೀಚೆಗೆ ಕಫದ ಸಮಸ್ಯೆ ಕೂಡ ಎದುರಾಗಿದೆ. ಆಸ್ಪತ್ರೆಗೆ ನನಗೆ ಪ್ರತಿ ತಿಂಗಳು 3ರಿಂದ 5 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಔಷಧಿಗೆ 2 ಸಾವಿರ ರೂಪಾಯಿ ಬೇಕಾಗುತ್ತದೆ. ಮನೆಯ ಮಾಲಿಕ ಬಾಡಿಗೆ ಕೇಳುತ್ತಿರುತ್ತಾರೆ. ನಾನು ಹೇಗೆ ಜೀವನ ಮಾಡಲಿ? ಕಳೆದ ಡಿಸೆಂಬರ್ ನಲ್ಲಿ ನನಗೆ ವೇತನ ಸಿಕ್ಕಿದ್ದು ಎಂದು ಕೊಂಡಮ್ಮ ತನ್ನ ಕಷ್ಟ ಹೇಳುತ್ತಾರೆ.

ಪೌರಕಾರ್ಮಿಕರನ್ನು ಯಾರು ಕೂಡ ಮನೆಗೆಲಸಕ್ಕೆ ಕರೆಯುವುದು ಕೂಡ ಇಲ್ಲ ಎನ್ನುತ್ತಾರೆ ಮತ್ತೊಬ್ಬ ಪೌರಕಾರ್ಮಿಕ ರಂಜಿತ್. ಕೊಂಡಮ್ಮನ ಮಗನಿಗೆ ಸಹ ಕಾಯಿಲೆಯಿದೆ. ತನ್ನ ಪರಿಸ್ಥಿತಿಯನ್ನು ಸಹಿಸಲಾಗದೆ ಕಳೆದ ವಾರ ಕೊಂಡಮ್ಮ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರು. ಆತ ಕಾರ್ಯಕರ್ತರು ವೇತನ ಕೊಡಿಸುವುದಾಗಿ ಭರವಸೆ ನೀಡಿದ್ದರು.

ಕೊಂಡಮ್ಮಳ ಬೇಡಿಕೆ ಸದ್ಯ ಈಡೇರುತ್ತಾ ಇಲ್ಲವೊ ಗೊತ್ತಿಲ್ಲ, ಆದರೆ ಭರವಸೆಯೊಂದಿಗೆ ಆಕೆ ಪ್ರತಿನಿತ್ಯ ಕಸ ಗುಡಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com