ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪಾರ್ಕ್'ನಲ್ಲಿ ಕುಳಿತು ಸಂಚು ರೂಪಿಸಿದ್ದ ಆರೋಪಿಗಳು

2017 ಆಗಸ್ಟ್ ತಿಂಗಳಿನಲ್ಲಿ ವಿಜಯನಗರ ಆದಿಚುಂಚನಗಿರು ಮಠದಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾದ ಕೆ.ಟಿ.ನವೀನ್ ಕುಮಾರ್ ಹಾಗೂ ಸುಜಿತ್ ಕುಮಾರ್ ಅಲಿಯಾನ್ ಪ್ರವೀಣ್ ಪಾರ್ಕ್ ವೊಂದರಲ್ಲಿ ಕುಳಿತು ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು; 2017 ಆಗಸ್ಟ್ ತಿಂಗಳಿನಲ್ಲಿ ವಿಜಯನಗರ ಆದಿಚುಂಚನಗಿರು ಮಠದಲ್ಲಿ ನಡೆದಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾದ ಕೆ.ಟಿ.ನವೀನ್ ಕುಮಾರ್ ಹಾಗೂ ಸುಜಿತ್ ಕುಮಾರ್ ಅಲಿಯಾನ್ ಪ್ರವೀಣ್ ಪಾರ್ಕ್ ವೊಂದರಲ್ಲಿ ಕುಳಿತು ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. 
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ 651 ಪುಟುಗಳ ಆರೋಪಪಟ್ಟಿಯಲ್ಲಿ ಈ ಅಂಶವಿದೆ. 
ಬಂಧಿತ ನವೀನ್ ಬಲಪಂಥೀಯ ಹಾಗೂ ಸನಾತನ ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದ. ವಿಚಾರಣೆ ವೇಳೆ ಆರೋಪಿ ನವೀನ್ ಹಲವಾರು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ಆ.19 ಮತ್ತು 20 ರಂದು ಆದಿಚುಂಚನಗಿರಿ ಮಠದಲ್ಲಿ ಧಾರ್ಮಿಕ ಸಭೆಯೊಂದರನ್ನು ನಡೆಸಲಾಗಿತ್ತು. ಸಭೆಯಲ್ಲಿ ನಾನು ಮತ್ತು ಪ್ರವೀಣ್ ಪಾಲ್ಗೊಂಡಿದ್ದೆವು ಎಂದು ಹೇಳಿದ್ದಾರೆ.
ಎರಡು ದಿನಗಳ ಸಭೆ ಮುಕ್ತಾಯಗೊಂಡ ಬಳಿಕ ಇಬ್ಬರೂ ಆರೋಪಿಗಳು ಆದಿಚುಂಚನಗಿರಿ ಕಾಂಪ್ಲೆಕ್ಟ್ ಹಿಂಭಾಗದಲ್ಲಿರುವ ಪಾರ್ಕ್ ವೊಂದಕ್ಕೆ ತೆರಳಿದ್ದಾರೆ. ಪಾರ್ಕ್ ನಲ್ಲಿ ಕುಳಿತ ಇಬ್ಬರೂ ಗೌರಿ ಲಂಕೇಶ್ ಹತ್ಯೆ ಮಾಡುವ ಕುರಿತು ಸಂಚು ರೂಪಿಸಿದ್ದಾರೆ. 
ನವೀನ್ ಅಲಿಯಾಸ್ ಹೊಟ್ಟೆ ಮಂಜ 7-8 ವರ್ಷಗಳ ಹಿಂದೆಯೇ ಅಕ್ರಮವಾಗಿ 32 ಎಂಎಂನ ಗುಂಡುಗಳನ್ನು ಖರೀದಿಸಿದ್ದ. ಅಕ್ರಮ ಬಂದೂಕು ಮಾರಾಟ ದಂಧ್ಯೆಲ್ಲಿ ತೊಡಗಿದ್ದ ನವೀನ್, ಕಲಾಸಿಪಾಳ್ಯದಲ್ಲಿರುವ ಸಿಟಿ ಗನ್ ಹೌಸ್ ಅಂಗಡಿ ಕೆಲಸಗಾರ ಸೈಯ್ಯದ್ ಶಬ್ಬೀರ್ ಎಂಬುವವರಿಂದ ಏಳೆಂಟು ವರ್ಷಗಳ ಹಿಂದೆಯೇ 32 ಎಂಎಂನ 18 ಗುಂಡುಗಳನ್ನು ಖರೀದಿ ಮಾಡಿದ್ದ. ಈ ಬಗ್ಗೆ ಎಸ್ಐಟಿಗೆ ಶಬ್ಬೀರ್ ಹೇಳಿಕೆ ನೀಡಿದ್ದಾರೆ. ಗೌರಿ ಅವರನ್ನು ಹತ್ಯೆ ಮಾಡಲು ಬಂದಿದ್ದ ಶೂಟರ್ ಗಳಿಗೆ ನವೀನ್ ಖರೀದಿ ಮಾಡಿದ್ದ ಗುಂಡುವಗಳನ್ನು ಕೊಟ್ದಿದ್ದ. 
7-8 ವರ್ಷಗಳ ಹಿಂದೆ ನಮ್ಮ ಅಂಗಡಿಗೆ ಬಂದಿದ್ದ ನವೀನ್ ರೂ.3,500 ಮೌಲ್ಯದ ಎರಡು ಏರ್'ಗನ್ ಗಳನ್ನು ಖರೀದಿ ಮಾಡಿದ್ದ. ಇದಾದ ವಾರದ ಬಳಿಕ ಮತ್ತೆ ಬಂದ ಆತ, ನನಗೆ ಪಿಸ್ತೂಲ್ ಬೇಕಿದೆ ಎಂದಿದ್ದ. ಆಗ ನಾವು ಲೈಸೆನ್ಸ್ ಕೇಳಿದ್ದಕ್ಕೆ, ನನ್ನ ಬಳಿ ಲೈಸೆನ್ಸ್ ಇಲ್ಲ. ಹಂಗೇ ಕೊಡಿ ಎಂದಿದ್ದ. ಹಾಗಾಗಿ ಪಿಸ್ತೂಲ್ ನೀಡಲು ನಿರಾಕರಿಸಲಾಯಿತು. ಕೊನೆಗೆ ಕನಿಷ್ಟ ಜೀವಂತ ಗುಂಡುಗಳನ್ನಾದರೂ ಕೊಡುವಂತೆ ಅವನು ಗೋಗರೆದಿದ್ದ. 
ಆ ವೇಳೆ ನನಗೆ ಹಣದ ಅವಶ್ಯಕತೆ ಇದ್ದ ಕಾರಣಕ್ಕೆ ಆತನಿಗೆ ಗುಂಡುಗಳನ್ನು ಕೊಡಿಸಲು ಒಪ್ಪಿದೆ ಎಂದಿದ್ದಾರೆ ಶಬ್ಬೀರ್. 
ನನಗೆ ಬಳಿ ಗುಂಡುಗಳಿದ್ದ ಕಾರಣ ಬೇರೆಯವರಿಂದ ನವೀನ್'ಗೆ ಗುಂಡುಗಳನ್ನು ಕೊಡಿಸಿದ್ದೆ. ಏನ್ಆರ್ ರಸ್ತೆಯ ಸ್ನೇಹಿದ ಅಹ್ಮದ್'ಗೆ ಗುಂಡುಗಳನ್ನು ಕೊಡಿಸುವಂತೆ ನಾನು ಕೇಳಿದ್ದೆ. ಆತ 0.32ಎಂಎಂನ ಗುಂಡುಗಳನ್ನು ಹೊಂದಿಸಿಕೊಟ್ಟ. ಅವುಗಳನ್ನು ನನ್ನ ಅಂಗಡಿಯ ಕೆಇಬಿ ಮೀಟರ್'ನಲ್ಲೇ ಇಟ್ಟಿದ್ದೆ. ಅದೇ ದಿನ ಸಂಜೆ ನವೀನ್ ಅಂಗಡಿ ಬಳಿ ಬಂದು ರೂ.3 ಸಾವಿರ ಕೊಟ್ಟು ಗುಂಡುಗಳನ್ನು ತೆಗೆದುಕೊಂಡು ಹೋಗಿದ್ದ. ಅದರಲ್ಲಿ ರೂ.2 ಸಾವಿರ ಅಹ್ಮದ್'ಗೆ ಕೊಟ್ಟು ಇನ್ನುಳಿದ ಹಣವನ್ನು ನಾನು ಇಟ್ಟುಕೊಂಡಿದ್ದೆ. ಈ ವಿಚಾರ ನನ್ನ ಅಂಗಡಿ ಮಾಲೀಕರಿಗೆ ಗೊತ್ತಿರಲಿಲ್ಲ ಎಂದು ತಿಳಿಸಿದ್ದಾರೆ. 
ಇದರತಂತೆ ನವೀನ್ ಸ್ವಭಾವ ಹಾಗೂ ಹಿಂದುತ್ವಪರ ಆತನಿಗಿದ್ದ ಕಾಳಜಿ ಬಗ್ಗೆ ಆತನ ಪತ್ನಿ ರೂಪಾ ಕೂಡ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 
ಮಂಡ್ಯ ಜಿಲ್ಲೆ ಕದಲೂರು ಗ್ರಾಮದ ನವೀನ್ 5 ವರ್ಷಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ. ನವೀನ್ ಜೆಡಿಎಸ್ ಬೆಂಬಲಿಗರಾಗಿದ್ದು, ಮತ್ತಾವುದೇ ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿರಲಿಲ್ಲ. ಹುಂದುತ್ವ ಪರ ಕಾಳಜಿ ಹೊಂದಿದ್ದರು. 2017ರಲ್ಲಿ ಶಿವಮೊಗ್ಗದ ಕಾರ್ಯಕ್ರಮವೊಂದಕ್ಕೆ ಕೆರೆದುಕೊಂಡು ಹೋಗಿದ್ದ ಅವರು, ಮೊದಲ ಬಾರಿಗೆ ಸತಾನ ಸಂಸ್ಥೆಯವರನ್ನು ಪರಿಚಯ ಮಾಡಿಕೊಟ್ಟಿದ್ದರು. ಈಗಲೂ ಅವರಲ್ಲಿ ಹಲವರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. 
ಹಿಂದು ಯುವಸೇನೆ ಸಂಚಾಲಕರಾಗಿದ್ದ ಪತಿ, ಮದ್ದೂರಿನಲ್ಲಿ ಪ್ರತಿ ಶನಿವಾರ ಸಂಜೆ ಸನಾತನ ಸಂಸ್ಥೆಗಳ ಬಗ್ಗೆ ಆಸಕ್ತರಿಗೆ ಧರ್ಮ ಶಿಕ್ಷಣೆ ನೀಡುತ್ತಿದ್ದರು. 
ದಸರಾ ಹಬ್ಬದ ಮಾರನೇ ದಿನ ಸನಾತನ ಸಂಸ್ಥೆಯ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದಿದ್ದರು. ಮನೆಗೆ ಬಂದಿದ್ದವರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಜೂನ್ ತಿಂಗಳಲ್ಲಿ ಗೋವಾದಲ್ಲಿ ನಡೆದ ಧರ್ಮ ಶಿಕ್ಷಣ ಸಮ್ಮೇಳನದಲ್ಲಿಯೂ ಪತಿ ಪಾಲ್ಗೊಂಡಿದ್ದರು. 
ಆದಾದ 2-3 ತಿಂಗಳ ಬಳಿಕ, ಮತ್ತೊಂದು ಧರ್ಮ ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಗೆ ಹೋಗುತ್ತಿರುವುದಾಗಿ ಮನೆಯಿಂದ ಹೊರಟರು. ಮರುದಿನವೇ ವಾಪಸಾದ ಅವರು, ಬಟ್ಟೆ ಹಾಗೂ ಬ್ಯಾಗ್ ಬಿಟ್ಟು ಬಂದಿದ್ದರು. ಈ ಬಗ್ಗೆ ಕೇಳಿದ್ದಕ್ಕೆಯ ಬ್ಯಾಗ್ ರೈಲಿನಲ್ಲಿಯೇ ಮಿಸ್ ಆಗಿದೆ ಎಂದಿದ್ದರು. ಅದೇ ದಿನ ಪತಿಯ ಮನಸ್ಸು ಕೂಡ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿಗೆ ಹೋಗೋಣ ಎಂದು ಹೇಳಿ ನನ್ನನ್ನು ಕರೆದುಕೊಂಡು ಹೋದರು. ಬೆಳಿಗ್ಗೆ ಸನಾತನ ಆಶ್ರಮವೊಂದಕ್ಕೆ ಹೋಗಿದ್ದೆವು. ಈ ವೇಳೆ ಟಿವಿಯಲ್ಲಿ ಗೌರಿ ಲಂಕೇಶ್ ಕೊಲೆ ಕುರಿತು ಸುದ್ದಿಗಳು ಪ್ರಸಾರವಾಗುತ್ತಿತ್ತು. ಬಳಿಕ ನವೀನ್ ಬಳಿ ಗೌರಿ ಲಂಕೇಶ್ ಹತ್ಯೆಯಾಗಿದೆ ಎಂದು ನಾನು ಹೇಳಿದಾಗ ಹೌದಾ...ಎಂದರು ಅಷ್ಟೇ. ಬೇರೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. 
ದಸರಾ ಹಬ್ಬಕ್ಕೆ 2-3 ತಿಂಗಳ ಹಿಂದೆ ಮನೆಗೆ ಪಿಸ್ತೂಲ್ ತಂದಿದ್ದರು. ಈ ವೇಳೆ ಮನೆಯಲ್ಲಿ ಇಡಬೇಡಿ ಎಂದು ಬೈದಿದ್ದೆ. ಅದಕ್ಕೆ ಅವರು ಇದು ನಕಲಿ ಪಿಸ್ತೂಲ್, ಮನೆಯಲ್ಲಿ ಇಟ್ಟುಕೊಂಡರೆ ಏನೂ ಸಮಸ್ಯೆಗಳಿಲ್ಲ ಎಂದು ಹೇಳಿಕೆ ಲಾಕರ್ ನಲ್ಲಿ ಇಟ್ಟಿದ್ದರು. ಆಯುಧ ಪೂಜೆ ದಿನ ಆ ಪಿಸ್ತೂಲ್'ಗೆ ಪೂಜೆ ಮಾಡಿದ ಅವರು ಸೂಜಿಯಿಂದ ಬೆರಳು ಚುಚ್ಚಿಕೊಂಡು ರಕ್ತವನ್ನು ಪಿಸ್ತೂಲಿಗೆ ಅರ್ಪಣೆ ಮಾಡಿದ್ದರು. ನಂತರ ಜೈ ಭಾರತ ಮಾತೆ ಎಂದು ಹೇಳಿದ್ದರು ಎಂದು ರೂಪಾ ಅವರು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ. 
ಪ್ರಕರಣ ಸಂಬಂಧ ನವೀನ್ ಬಂಧನದ ಬಳಿಕ ಸನಾತನ ವೆಬ್'ಸೈಟ್ ನಲ್ಲಿದ್ದ ಲೇಖಗಳನ್ನು ತೆಗೆದು ಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ. 
2017ರ ನವೆಂಬರ್ ತಿಂಗಳಿನಲ್ಲಿ ಮದ್ದೂರಿನ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಸಲಾಗಿದ್ದ ಧಾರ್ಮಿಕ ಕಾರ್ಯಕ್ರಮ ಕುರಿತ ಲೇಖನವನ್ನು www.sanatan.org ನಲ್ಲಿ ಪ್ರಕಟಿಸಲಾಗಿತ್ತು. ಲೇಖನವನ್ನು ಡಿ.10 ರಂದು ಪ್ರಕಟಿಸಲಾಗಿತ್ತು. ಇದೀಗ ನವೀನ್ ಬಂಧನದ ಸುದ್ದಿ ತಿಳಿದುಬಂದ ಹಿನ್ನಲೆಯಲ್ಲಿ ಲೇಖನವನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com