ಹೃದಯ ತಜ್ಞ ಡಾ.ರಮಣ ರಾವ್ ಅವರು ಮಾತನಾಡಿ, ಬದಲಾದ ಹವಾಮಾನ ವೈರಸ್ ಗಳನ್ನು ಹೊತ್ತು ತರುತ್ತವೆ. ಹವಾಮಾನ ಬದಲಾಗುತ್ತಿದ್ದಂತೆಯೇ ವೈರಲ್ ಸೋಂಕುಗಳು ಹೆಚ್ಚಾಗುವುದನ್ನು ನಾವು ನೋಡುತ್ತೇನೆ. ಈ ವೈರಸ್ ಗಳು ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವುದು ಹೆಚ್ಚಾಗಿರುತ್ತದೆ. ಪ್ರತೀ ವರ್ಷ ಮಾನವನ ದೇಹದಲ್ಲಿ ವಿವಿಧ ರೀತಿಯ ವೈರಸ್ ಗಳನ್ನು ನೋಡುತ್ತೇವೆ. ಇದರಲ್ಲಿ ಕೆಲವು ಅತ್ಯಂತ ಅಪಾಯಕಾರಿಯಾಗಿರುತ್ತವೆ. ಕೆಲವು ಅಂತಹ ಅಪಾಯಗಳೇನೂ ಇರುವುದಿಲ್ಲ. ಇಂತಹ ವೈರಸ್ ಗಳು ಪ್ರಮುಖವಾಗಿ ವಯಸ್ಸಾದವರು ಹಾಗೂ ಮಕ್ಕಳ ಮೇಲೆಯೇ ಹೆಚ್ಚು ಪರಿಣಾಮ ಬೀರುವುದುಂಟು ಎಂದು ಹೇಳಿದ್ದಾರೆ.