ಬೆಂಗಳೂರಿನ ಹಲವು ಶಾಲೆಗಳಲ್ಲಿ ಪ್ಲಾಸ್ಟಿಕ್ ಡಬ್ಬಿ, ಬಾಟಲ್ ಗಳ ಬಳಕೆಗೆ ನಿಷೇಧ

ಪರಿಸರ ರಕ್ಷಣೆ ಮತ್ತು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುತ್ತಿರುವ ನಗರದ ಶಾಲೆಗಳು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಪರಿಸರ ರಕ್ಷಣೆ ಮತ್ತು ಮಕ್ಕಳ ಆರೋಗ್ಯದ ಕಡೆ ಹೆಚ್ಚು ಕಾಳಜಿ ವಹಿಸುತ್ತಿರುವ ನಗರದ ಶಾಲೆಗಳು ಮಕ್ಕಳು ಶಾಲೆಗೆ ಪ್ಲಾಸ್ಟಿಕ್ ಡಬ್ಬಿಗಳನ್ನು ಮತ್ತು ನೀರಿನ ಬಾಟಲ್ ಗಳನ್ನು ತೆಗೆದುಕೊಂಡು ಹೋಗಬಾರದೆಂದು ನಿಯಮ ಹೊರಡಿಸಿದೆ.

ಈ ಬಗ್ಗೆ ಮಕ್ಕಳ ಪೋಷಕರಿಗೆ ಸೂಚನೆ ನೀಡಲಾಗಿದೆ ಮತ್ತು ತಂಪು ಪಾನೀಯಗಳನ್ನು ತೆಗೆದುಕೊಂಡು ಹೋಗುವ ಬಾಟಲಿಗಳನ್ನು ಹೆಚ್ಚು ಸಮಯ ಬಳಸಬಾರದೆಂದು ಕೂಡ ಹೇಳಿವೆ.

ಶಾಲಾ ಆಡಳಿತ ಮಂಡಳಿಯ ಈ ತೀರ್ಮಾನ ಮಕ್ಕಳ ಪೋಷಕರಿಗೆ ಸಹ ಖುಷಿಯನ್ನುಂಟುಮಾಡಿದೆ. ಅವರ ಒಂದೇ ಒಂದು ಆತಂಕವೆಂದರೆ ಸ್ಟೈನ್ ಲೆಸ್ ಸ್ಟೀಲ್ ಡಬ್ಬಿಗಳು ತಮ್ಮ ಮಕ್ಕಳಿಗೆ ಒಯ್ಯಲು ಸ್ವಲ್ಪ ಭಾರವಾಗಬಹುದು ಎನ್ನುತ್ತಾರೆ.

ಊಟ, ತಿಂಡಿಗೆ ಸ್ಟೀಲ್ ಬಾಕ್ಸ್ ಗಳನ್ನು ಮಾತ್ರ ಕಳುಹಿಸಿ ಎಂದು ನನ್ನ ಮಗಳ ಶಾಲೆಯ ಪ್ರಾಂಶುಪಾಲರು ಹೇಳಿರುವುದು ತುಂಬಾ ಖುಷಿ ತಂದಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅದು ಒಳ್ಳೆಯದು ಎನ್ನುತ್ತಾರೆ ಪ್ರತಿಭಾ ಪ್ರವೀಣ್. ಇವರು ತಮ್ಮ ಮಗಳನ್ನು ನಗರದ ಪ್ರಿ ನರ್ಸರಿ ಶಾಲೆಯೊಂದಕ್ಕೆ ಕಳುಹಿಸುತ್ತಿದ್ದಾರೆ. ಸ್ವಚ್ಛತೆಯನ್ನು ನಿರ್ವಹಿಸದಿರುವುದರಿಂದ ಕೂಡ ನಗರದ ಶಾಲೆಗಳು ಪ್ಲಾಸ್ಟಿಕ್ ಡಬ್ಬಿಗಳು ಮತ್ತು ಬಾಟಲಿಗಳನ್ನು ನಿಷೇಧಿಸಿವೆ.

ನಗರದಲ್ಲಿ ಬಹುತೇಕ ಪೋಷಕರು ಉದ್ಯೋಗಕ್ಕೆ ಹೋಗುವುದರಿಂದ ಮನೆಕೆಲಸದವರು ಅಡುಗೆ ಮಾಡಿ ಮಕ್ಕಳಿಗೆ ಊಟ, ಸ್ನ್ಯಾಕ್ಸ್ ನ ಡಬ್ಬಿಯನ್ನು ಕೊಟ್ಟು ಕಳುಹಿಸುತ್ತಾರೆ. ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಆಹಾರದ ಅಂಶಗಳು ರಬ್ಬರ್ ನ ಸುತ್ತ ಹಿಡಿದಿರುತ್ತದೆ. ರಬ್ಬರ್ ನ ಸುತ್ತ ಮತ್ತು ಪ್ಲಾಸ್ಟಿಕ್ ಬಾಟಲ್ ನಲ್ಲಿ ಫಂಗಸ್ ಕೂಡ ಬೆಳೆಯುತ್ತದೆ ಎನ್ನುತ್ತಾರೆ ಐಸಿಎಸ್ ಇ ಶಾಲೆಯ ಪ್ರಾಂಶುಪಾಲರೊಬ್ಬರು.

ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಬಿಸಿಯ ಆಹಾರವನ್ನು ಹಾಕಿದರೆ ಪ್ಲಾಸ್ಟಿಕ್ ಕೋಟ್ ಅಥವಾ ತೆಳು ಮೇಲ್ಪದರ ಕರಗಿ ಆಹಾರದ ಜೊತೆ ಬೆರೆಯುವ ಸಾಧ್ಯತೆಯಿದೆ. ಪ್ಲಾಸ್ಟಿಕ್ ಬಾಟಲ್ ಗಳನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸುವಾಗ ಗ್ರಾಹಕರು ಬಿಪಿಎ ಮುಕ್ತ ಪ್ಲಾಸ್ಟಿಕ್ ಗಳನ್ನು ಖರೀದಿಸಬೇಕು. ಸ್ಟೀಲ್ ಬಾಟಲ್ ಗಳನ್ನು ನಾವು ಮಕ್ಕಳಿಗೆ ಸಲಹೆ ಮಾಡುತ್ತೇವೆ ಎನ್ನುತ್ತಾರೆ ಶಿಕ್ಷಕಿಯೊಬ್ಬರು.

ಲಿಟ್ಲ್ ಫ್ಲವರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಬಿ ಗಾಯತ್ರಿ ದೇವೆ, ನಾವಿನ್ನು ಕಡ್ಡಾಯ ಮಾಡಿಲ್ಲ, ಆದರೆ ಪೋಷಕರಲ್ಲಿ ಸ್ಟೀಲ್ ಡಬ್ಬಿಗಳನ್ನು ಕಳುಹಿಸುವಂತೆ ಹೇಳುತ್ತೇವೆ. ಪ್ಲಾಸ್ಟಿಕ್ ಗೆ ಹೋಲಿಸಿದರೆ ಸ್ಟೀಲ್ ಡಬ್ಬಿಗಳು ಉತ್ತಮ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಈ ಮೂಲಕ ಪರಿಸರ ಸಂರಕ್ಷಣೆಗೆ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಬೇಕು ಎನ್ನುತ್ತಾರೆ.

ಇದೊಂದು ಉತ್ತಮ ಅಭಿಯಾನ. ಕೆಲ ವರ್ಷಗಳ ಹಿಂದೆ ಪ್ಲಾಸ್ಟಿಕ್ ಬಳಕೆಯ ಪರಿಣಾಮ ಮತ್ತು ಮಕ್ಕಳ ಆರೋಗ್ಯದ ಮೇಲೆ ಪ್ಲಾಸ್ಟಿಕ್ ನ ಪರಿಣಾಮಗಳ ಬಗ್ಗೆ ನಾವು ಅಧ್ಯಯನ ಮಾಡಿದ್ದೆವು. ತಂಪು ಪಾನೀಯಗಳ ಬಾಟಲ್ ಗಳಲ್ಲಿ ಹಲವು ಪೋಷಕರು ಕಳುಹಿಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಹೀಗಾಗಿ ಇಂತಹ ಬಾಟಲ್ ಗಳನ್ನು ನಿಷೇಧಿಸುತ್ತೇವೆ ಎನ್ನುತ್ತಾರೆ ಖಾಸಗಿ ಶಾಲೆಗಳ ವ್ಯವಸ್ಥಾಪಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್. 

ಮಕ್ಕಳಿಗೆ ಸ್ಟೀಲ್ ಡಬ್ಬಿಗಳನ್ನು ಆಕರ್ಷಿಸುವಂತೆ ಮಾಡಲು ಸೃಜನಾತ್ಮಕವಾಗಿ ಅವುಗಳನ್ನು ವಿನ್ಯಾಸಗೊಳಿಸುವಂತೆ ಕೂಡ ಉತ್ಪಾದಕರಿಗೆ ಸೂಚನೆ ನೀಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com