ಆದಾಗ್ಯೂ, ಇಂತಹ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಕೆಲ ಪೋಷಕರು ಧ್ವನಿ ಎತ್ತುತ್ತಿದ್ದಾರೆ. ಕೆಲವರು ನ್ಯಾಯಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣೆ ಆಯೋಗದ ಮೊರೆ ಹೋಗಿದ್ದಾರೆ. ಇನ್ನೂ ಕೆಲ ಪೋಷಕರು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದಾರೆ.ದುರದೃಷ್ಟವೆಂದರೆ , ಒಂದು ವೇಳೆ ಪ್ರತಿಭಟನೆ ಮಾಡಿದ್ದರೆ, ತಮ್ಮ ಮಕ್ಕಳಿಗೆ ಏನಾದರೂ ತೊಂದರೆ ಮಾಡಿದ್ದರೆ ಏನು ಗತಿ ಎಂಬುದು ಹಲವು ಪೋಷಕರ ಆತಂಕಕ್ಕೆ ಕಾರಣವಾಗಿದೆ.