ಈ ಎಲ್ಲಾ ತನಿಖೆ ಸಂಸ್ಥೆಗಳು ಈ ಹಿಂದೆಯೇ ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಗೌರಿ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈ ಹಂತದಲ್ಲಿ ತನಿಖೆ ಸ್ಥಗಿತಗೊಳ್ಳುವುದು ನಮಗಿಷ್ಟವಿಲ್ಲ. ಪ್ರಸ್ತುತ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಇತರೆ ತನಿಖಾ ಸಂಸ್ಥೆಗಳ ವಶಕ್ಕೆ ನೀಡಿದರೆ, ಗೌರಿ ಹತ್ಯೆ ಪ್ರಕರಣದ ತನಿಖೆಗೆ ಸಮಸ್ಯೆಯಾಗುತ್ತದೆ. ತನಿಖೆ ಯಾವುದೇ ರೀತಿಯ ಅಡೆತಡೆಗಳಾಗಬಾರದು. ವಿಳಂಬ ಕೂಡ ಆಗಬಾರದು. ತನಿಖೆ ಪೂರ್ಣಗೊಳ್ಳುವುದಷ್ಟೇ ನಮ್ಮ ಪ್ರಾಮುಖ್ಯತೆಯಾಗಿದೆ. ಪ್ರಕರಣ ಶೀಘ್ರಗತಿಯಲ್ಲಿ ತಾರ್ಕಿಕ ಅಂತ್ಯ ಕಾಣಬೇಕು. ತನಿಖೆ ಹಂತದಲ್ಲಿ ಯಾವುದೇ ಅಡೆತಡೆಗಳುಂಟಾಗಬಾರದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.