ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ರಾಜ್ಯ
ಬೆಂಗಳೂರಲ್ಲಿ ದೆಹಲಿ ಸಿಎಂ: ಕೇಜ್ರಿವಾಲ್'ಗೆ ಪ್ರಕೃತಿ ಚಿಕಿತ್ಸೆ ಆರಂಭ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚಿಕಿತ್ಸೆಗಾಗ ನಗರಕ್ಕೆ ಆಗಮಿಸಿದ್ದು, ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ...
ಬೆಂಗಳೂರು; ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಚಿಕಿತ್ಸೆಗಾಗ ನಗರಕ್ಕೆ ಆಗಮಿಸಿದ್ದು, ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿದ್ದಾರೆ.
ಗುರುವಾರ ಸಂಜೆ ರಾಜಧಾನಿ ದೆಹಲಿಯಿಂದ ನಗರಕ್ಕೆ ಆಗಮಿಸಿದ ಕೇಜ್ರಿವಾಲ್ ಅವರು ವಿಮಾನ ನಿಲ್ದಾಣದಿಂದ ತುಮಕೂರು ರಸ್ತೆಯ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಆರಂಭಿಕ ತಪಾಸಣೆಗಳನ್ನು ಮುಗಿಸಿ ದಾಖಲಾದರು.
ಮಧುಮೇಹ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನಲೆಯಲ್ಲಿ ಕೇಜ್ರಿವಾಲ್ ಅವರು ಸುಮಾರು 1 ವಾರ ಅಥವಾ ಹತ್ತು ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ.

