2017 ರಲ್ಲಿ ನಾನು ಗರ್ಭಿಣಿಯಾದೆ, ಆದರೆ ಇದಕ್ಕೆ ನನ್ನ ಪತಿ ವಿರೋಧಿಸಿದ್ದರು. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಗರ್ಭಪಾತವೂ ಆಯಿತು. ಈ ಅಘಾತದಿಂದಾಗಿ ಖಿನ್ನತೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ನಡುವೆ ನನ್ನ ಪತಿ ಬೇರೆ ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ನಾನು ಆಸ್ಪತ್ರೆಗೆ ತೆರಳಿದಾಗ ವೈದ್ಯರು ನನಗೂ ಹೆಚ್ ಐ ವಿ ಇದೆ ಎಂದು ಹೇಳಿದ್ದರು. ಈ ವಿಷಯದ ಬಗ್ಗೆ ಪತಿಯೊಂದಿಗೆ ಚರ್ಚಿಸಲು ಮುಂದಾದಾಗ ನನ್ನ ಮೇಲೆ ಮಾನಸಿಕ, ದೈಹಿಕ ದಾಳಿ ನಡೆದಿದೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.