ಬೆಂಗಳೂರು:ಸಾರ್ವಜನಿಕ ವಲಯದ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಮಾರಾಟದಲ್ಲಿ ಅಕ್ರಮ ನಡೆದಿದೆ ಎಂದು ಉಪಲೋಕಾಯುಕ್ತ ಸುಭಾಷ್ ಬಿ ಆಡಿ ಆರೋಪಿಸಿದ್ದಾರೆ.
ಈ ಸಂಬಂಧ ವಿಚಾರಣೆ ನಡೆಸಿದ ಸುಭಾಷ್ ಬಿ ಆಡಿ, ದಾವಣಗೆರೆಯ ಭದ್ರ ಸಹಕಾರಿ ಸಕ್ಕರೆ ಕಾರ್ಖಾನೆಯಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿ ರಾಜ್ಯಸರ್ಕಾರ ಸಿಐಡಿಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಹರಾಜಿಗೆ ಸರ್ಕಾರ 150 ಕೋಟಿ ರೂ ಬಿಡ್ ಘೋಷಿಸಿದ್ದು, 54 ಕೋಟಿ ರೂ. ಗೆ ಹರಾಜು ಹಾಕಲಾಗಿದೆ. ಇದರ ಮಾರುಕಟ್ಟೆ ಮೌಲ್ಯ 400 ಕೋಟಿ ರೂ ಆಗಿದೆ ಎಂದು ಹೇಳಿದ್ದಾರೆ.
ದಾವಣಗೆರೆ ಕಬ್ಬು ಬೆಳಗಾರರ ರೈತರ ಸಂಘ ಕೇವಲ ಆರು ದಿನಗಳ ಹಿಂದಷ್ಟೇ ನೋಂದಣಿಯಾಗಿದ್ದು, ಹರಾಜು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಖಾನೆಯ ಕಟ್ಟಡ ಸೇರಿದಂತೆ ಸ್ಥಿರಾ ಮತ್ತು ಚರಾಸ್ಥಿ ಮೌಲ್ಯ 188.58 ಕೋಟಿ ರೂ. ಆಗಿದೆ.
ಆದರೆ, ರೈತರ ಸಂಘ ಬಿಡ್ ನಲ್ಲಿ ಭಾಗಿಯಾಗುವ ಮೂಲಕ ಕಾನೂನುಬಾಹಿರವಾಗಿ ಕಾರ್ಖಾನೆಯನ್ನು ಪಡೆದುಕೊಂಡಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹರಿಹರ ತಾಲೂಕು ಹೊಳಲ್ಕೆರೆಯ ಎಂ. ಜಿ. ಪರಮೇಶ್ವರ ಗೌಡ ಎಂಬವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ತನಿಖೆ ನಡೆಸಿದ ಸುಭಾಷ್ ಬಿ ಆದಿ, ರಾಜ್ಯ ಲೋಕಾಯುಕ್ತ ಕಾಯ್ದೆ ಪ್ರಕಾರ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ
ಮಾರುಕಟ್ಟೆ ಬೆಲೆಗಿಂತ 150 ಕೋಟಿ ರೂ ಗೆ ಬಿಡ್ ನ್ನು ರಾಜ್ಯಸರ್ಕಾರ ನಿಗದಿಪಡಿಸಿದ್ದು, ಸಹಕಾರ ಸಂಘದ ಸಹಾಯಕ ನೋಂದಣಿಕಾರಿ, ದಾವಣಗೆರೆ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬಿಡ್ ದಾರರೊಂದಿಗೆ ಕೈ ಜೋಡಿಸಿದ್ದು,ಕಪ್ಪು ಹಣ ಹೊಂದಿರುವವರು ಈ ಹರಾಜು ಪಡೆದಿದ್ದಾರೆ ಎನ್ನಲಾಗಿದೆ.
ದಾವಣಗೆರೆ ಕಬ್ಬು ಬೆಳೆಗಾರರ ರೈತರ ಸಂಘದಲ್ಲಿ ಹಣ ವರ್ಗಾವಣೆಯಾಗಿರುವುದು ತನಿಖೆಯಿಂದ ಬಯಲಾಗಿದೆ.ಇದರಲ್ಲಿ
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಂದ 8 ಕೋಟಿ ರೂ ಸಾಲ ಪಡೆದುಕೊಂಡು ಮತ್ತೆ ಪಾವತಿಸಿರುವ ಬಗ್ಗೆಯೂ ಸಾಕ್ಷ್ಯಧಾರಗಳು ಸಿಕ್ಕಿವೆ.
Advertisement