ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವ
ರಾಜ್ಯ
ಹಾಸನ: ರಥೋತ್ಸವದಲ್ಲಿ ಕೂದಲೆಳೆ ಅಂತರದ ಅಪಾಯದಿಂದ ದೇವೇಗೌಡ ಕುಟುಂಬ ಪಾರು
ಶುಕ್ರವಾರ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅವರ ಪತ್ನಿ ..
ಹಾಸನ: ಶುಕ್ರವಾರ ಹೊಳೆನರಸೀಪುರ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ರಥೋತ್ಸವದ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅವರ ಪತ್ನಿ ಚನ್ನಮ್ಮ ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.
ಬ್ರಹ್ಮ ರಥೋತ್ಸವದ ವೇಳೆ ಭಕ್ತರು ಏಕಾಏಕಿ ರಥವನ್ನು ಎಳೆದಿದ್ದರಿಂದ ದೇವೇಗೌಡರು ಹಾಗೂ ಚನ್ನಮ್ಮನವರ ಮೇಲೆ ರಥ ಹರಿಯುವುದು ತಪ್ಪಿದ್ದು, ಸ್ವಲ್ಪದರಲ್ಲೆ ಪಾರಾಗಿದ್ದಾರೆ.
ಉತ್ಸವಕ್ಕೆ ದೇವೇಗೌಡರು ಪತ್ನಿ ಚನ್ನಮ್ಮನವರೊಂದಿಗೆ ತೆರಳಿದ್ದರು. ಶಾಸಕ ಎಚ್.ಡಿ.ರೇವಣ್ಣ, ಪತ್ನಿ ಭವಾನಿ ಹಾಗೂ ಪುತ್ರ ಸೂರಜ್ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ದೇವೆಗೌಡರು ಚಾಲನೆ ನೀಡಿದರು. ಆದರೆ, ಭಕ್ತರು ಏಕಾಏಕಿ ಪೂಜೆ ರಥ ಎಳೆದಿದ್ದರಿಂದ ನೂಕುನುಗ್ಗಲು ಉಂಟಾಯಿತು.ಇದರಿಂದ ದೇವೇಗೌಡರ ಪತ್ನಿ ಚನ್ನಮ್ಮ ಒಮ್ಮೆಲೇ ಕಂಗಾಲಾದರು. ತಕ್ಷಣ ಜಾಗೃತರಾದ ಶಾಸಕ ರೇವಣ್ಣ ಹಾಗೂ ಅಂಗರಕ್ಷಕರು ಅವರನ್ನು ರಕ್ಷಿಸಿದ್ದಾರೆ.
ಬಗ್ಗೆ ಗೊರೂರು ಜಲಾಶಯದ ಬಳಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಥೋತ್ಸವದಲ್ಲಿ ನಡೆದ ನೂಕು ನುಗ್ಗಲಿನಿಂದ ಯಾರಿಗೂ ಏನೂ ಆಗಿಲ್ಲ. ಪತ್ನಿ ಚನ್ನಮ್ಮ ಚೆನ್ನಾಗಿದ್ದಾರೆ. ಯಾರೂ ಆತಂಕ ಪಡಬೇಕಿಲ್ಲ ಎಂದು ತಿಳಿಸಿದ್ದಾರೆ..
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ