ವಿದ್ಯುತ್ ನಿಗಮಕ್ಕೆ ಆಂಧ್ರ ಅಭ್ಯರ್ಥಿಗಳಿಗೆ ಮನ್ನಣೆ: ಕರ್ನಾಟಕದ ಆಕಾಂಕ್ಷಿಗಳಲ್ಲಿ ಅಸಮಾಧಾನ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಎಂಜಿನಿಯರಿಂಗ್, ಲೆಕ್ಕಪತ್ರ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಎಂಜಿನಿಯರಿಂಗ್, ಲೆಕ್ಕಪತ್ರ ಮತ್ತು ಆಡಳಿತಾತ್ಮಕ ಹುದ್ದೆಗಳಿಗೆ ಮತ್ತು ರಾಜ್ಯಾದ್ಯಂತ ವಿದ್ಯುತ್ ಸರಬರಾಜು ಕಂಪೆನಿಗಳಿಗೆ 1,921 ಅಭ್ಯರ್ಥಿಗಳ ಅಂತಿಮ ನೇಮಕಾತಿ ಆದೇಶ ಇನ್ನೇನು ಸ್ವಲ್ಪ ದಿನಗಳಲ್ಲಿಯೇ ಘೋಷಣೆಯಾಗಲಿದೆ ಎಂದುಕೊಳ್ಳುವಾಗಲೇ ನಿಗಮ ಬಿಡುಗಡೆ ಮಾಡಿರುವ ತಾತ್ಕಾಲಿಕ ಪಟ್ಟಿ ರಾಜ್ಯದ ಒಂದು ವರ್ಗದ ಎಂಜಿನಿಯರಿಂಗ್ ಪದವೀಧರರಿಗೆ ನೋವುಂಟುಮಾಡಿದೆ.

ಇದಕ್ಕೆ ಬೆಂಬಲವಾಗಿ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಕೂಡ ನೇಮಕಾತಿ ಪ್ರಕ್ರಿಯೆಗೆ ಕೂಡಲೇ ತಡೆನೀಡಬೇಕೆಂದು ಒತ್ತಾಯಿಸಿದೆ.

ಇದಕ್ಕೆ ಕಾರಣ, ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಸಾಮಾನ್ಯ ವರ್ಗ ವಿಭಾಗದಲ್ಲಿ ಬಿಡುಗಡೆ ಮಾಡಿರುವ ತಾತ್ಕಾಲಿಕ ಪಟ್ಟಿ. ಹಲವು ಮೀಸಲಾತಿ ವಿಭಾಗಗಳಲ್ಲಿ 251 ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗಿದ್ದು ಸಾಮಾನ್ಯ ಅಭ್ಯರ್ಥಿಗಳ ವಿಭಾಗದಲ್ಲಿ 29 ಹುದ್ದೆಗಳಲ್ಲಿ 24 ಹುದ್ದೆಗಳನ್ನು ಆಂಧ್ರಪ್ರದೇಶದ ಬಿ.ಟೆಕ್ ಪದವೀಧರರಿಗೆ ನೀಡಲಾಗಿದೆ ಎನ್ನುತ್ತಾರೆ ಕರ್ನಾಟಕದ ಬಿ.ಟೆಕ್ ಪದವೀಧರರೊಬ್ಬರು.

20 ಮಂದಿ ಎಂಜಿನಿಯರಿಂಗ್ ಆಕಾಂಕ್ಷಿಗಳ ಪರವಾಗಿ ಮಾತನಾಡಿದ 2013ನೇ ಸಾಲಿನ ವಿಶ್ವೇಶ್ವರಯ್ಯ ಟೆಕ್ನಾಲಜಿ ವಿಶ್ವವಿದ್ಯಾಲಯದ ಅಭ್ಯರ್ಥಿ ಎಂ.ವಿಶ್ವನಾಥ್, ಕರ್ನಾಟಕ ವಿದ್ಯುತ್ ನಿಗಮ ನೇಮಕಾತಿ ಮತ್ತು ಬಡ್ತಿ ಪ್ರಾಧಿಕಾರ, ಉದ್ಯೋಗ ಪ್ರಾಧಿಕಾರ ಮತ್ತು ಉದ್ಯೋಗಿಗಳ ಪ್ರಾಧಿಕಾರ 2015ರ ಪ್ರಕಾರ, ಕೆಪಿಟಿಸಿಎಲ್ ಗೆ ತಂದಿರುವ ತಿದ್ದುಪಡಿಯಂತೆ ಹುದ್ದೆಗೆ ನಿಗದಿಪಡಿಸಿರುವ ಅರ್ಹತೆ ಬಿಇ ಅಥವಾ ಎಎಮ್ಐಇ ಆಗಿದೆ ಎನ್ನುತ್ತಾರೆ.

ಬಿ.ಟೆಕ್ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಕರ್ನಾಟಕದ ಹಲವು ಬಿ.ಟೆಕ್ ಪದವೀಧರರು ಕೂಡ ಅರ್ಜಿ ಸಲ್ಲಿಸಲಿಲ್ಲ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಸಿಗಲಿಲ್ಲ. ನಾನು 43.75 ಅಂಕ ಗಳಿಸಿದ್ದರೆ ಸಿಗಲಿಲ್ಲ. ಅದೇ ಆಂಧ್ರ ಪ್ರದೇಶದ ಅಭ್ಯರ್ಥಿ 44 ಅಂಕ ಗಳಿಸಿದವರಿಗೆ ಸಿಕ್ಕಿದೆ, ಇದು ಅನ್ಯಾಯ ಎನ್ನುತ್ತಾರೆ ವಿಶ್ವನಾಥ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com