ಈ ಬೇಸಿಗೆಯಲ್ಲಿ ಬೆಂಗಳೂರು ತಾಪಮಾನ 40 ಡಿಗ್ರಿ ಮೀರುವ ಸಾಧ್ಯತೆ!

ಈ ವರ್ಷ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈ ವರ್ಷ ಬೇಸಿಗೆ ಕಾಲ ಇನ್ನಷ್ಟು ಬಿಸಿಯಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ರಾಜ್ಯಾದ್ಯಂತ ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತ ಅಧಿಕವಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ(ಕೆಎಸ್ಎನ್ ಡಿಎಂಸಿ) ತಿಳಿಸಿದೆ.

ಕೆಎಸ್ಎನ್ ಡಿಎಂಸಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾತನಾಡಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಗರಿಷ್ಟ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗುವ ಸಾಧ್ಯತೆಯಿದೆ. 2015ರಲ್ಲಿ ಅತಿ ಹೆಚ್ಚು 39.60 ಡಿಗ್ರಿ ಸೆಲ್ಸಿಯಸ್ ನಷ್ಟಾಗಿತ್ತು. ಅದಕ್ಕಿಂತಲೂ ಹೆಚ್ಚು ಈ ವರ್ಷ ಬಿಸಿಲು ಇರುವ ಸಾಧ್ಯತೆಯಿದೆ. ಜಾಗತಿಕ ತಾಪಮಾನದಿಂದಾಗಿ ಕಳೆದ 50 ವರ್ಷಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬೆಂಗಳೂರಿನ ತಾಪಮಾನವನ್ನು ನೋಡಿದರೆ ಕಳೆದೊಂದು ದಶಕದಲ್ಲಿ ಪ್ರತಿವರ್ಷ ತಾಪಮಾನ ಏರಿಕೆಯಾಗುತ್ತಾ ಹೋಗುತ್ತಿದೆ. ಇದು ಎಚ್ಚರಿಕೆಯ ಸೂಚನೆಯಾಗಿದೆ ಎನ್ನುತ್ತಾರೆ.

ಬೆಂಗಳೂರಿನ ತಾಪಮಾನ ಈ ವರ್ಷ ಎಷ್ಟು ಪ್ರಬಲವಾಗಿರುತ್ತದೆಯೆಂದರೆ ಏಪ್ರಿಲ್ ಮಳೆ ಅಥವಾ ಮಾವಿನ ಮಳೆ ಎಂದು ಕರೆಯಲ್ಪಡುವ ಮಳೆ ಮಾರ್ಚ್ 15ರ ಸುಮಾರಿಗೆ ಸುರಿಯುವ ಸಾಧ್ಯತೆಯಿದೆ. ಬಿಸಿಲಿನ ಝಳಕ್ಕೆ ಪ್ರಕೃತಿದತ್ತವಾಗಿ ಸುರಿಯುವ ಮಳೆಯದು ಎನ್ನುತ್ತಾರೆ ರೆಡ್ಡಿ.



ದಕ್ಷಿಣ ಒಳನಾಡಿನ ಕರ್ನಾಟಕದ ಭಾಗಗಳಾದ ಬೆಂಗಳೂರು, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರುಗಳಲ್ಲಿ ಸಾಮಾನ್ಯ ಮಟ್ಟಕ್ಕಿಂತ ತಾಪಮಾನದಲ್ಲಿ ಕನಿಷ್ಠ 0.5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಭಾಗಗಳಾದ ಬಳ್ಳಾರಿ, ಕೊಪ್ಪಳ, ಕಲಬುರಗಿ, ಗದಗ ಮತ್ತು ವಿಜಯಪುರಗಳಲ್ಲಿ ತಾಪಮಾನದಲ್ಲಿ ಈ ವರ್ಷ ಸರಾಸರಿ 1 ಡಿಗ್ರಿ ಹೆಚ್ಚಾಗುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com