ಲೋಕಾಯುಕ್ತರಿಗೆ ಚಾಕು ಇರಿತ: ಅಧಿಕಾರಿಗಳ ವಿರುದ್ಧ ರೋಸಿ ಹೋಗಿದ್ದ ತೇಜ್ ರಾಜ್ ಹೇಳಿದ್ದೇನು?

ತೇಜ್ ರಾಜ್ ಅಧಿಕಾರಿಗಳ ಲಂಚಬಾಕತನದಿಂದ ರೋಸಿ ಹೋಗಿದ್ದನಂತೆ.. ಅಲ್ಲದೆ ಪದೇ ಪದೇ ದೂರಿಗೆ ಸಾಕ್ಷಿ ಇಲ್ಲ ಎಂದು ಹೇಳಿ ಲೋಕಾಯುಕ್ತರು ಪ್ರಕರಣಗಳನ್ನು ತಿರಸ್ಕರಿಸಿದ್ದರಂತೆ ಇದರಿಂದ ಹತಾಶನಾಗಿ ಕೃತ್ಯವೆಸಗಿದ್ದಾನೆ.
ಆರೋಪಿ ತೇಜ್ ರಾಜ್
ಆರೋಪಿ ತೇಜ್ ರಾಜ್
ಬೆಂಗಳೂರು: ಕರ್ನಾಟಕ ಲೋಕಾಯುಕ್ತರಿಗೆ ಚಾಕು ಇರಿದು ಬಂಧನಕ್ಕೀಡಾಗಿರುವ ಆರೋಪಿ ತೇಜ್ ರಾಜ್ ಅಧಿಕಾರಿಗಳ ಲಂಚಬಾಕತನದಿಂದ ರೋಸಿ ಹೋಗಿದ್ದನಂತೆ.. ಅಲ್ಲದೆ ಪದೇ ಪದೇ ದೂರಿಗೆ ಸಾಕ್ಷಿ ಇಲ್ಲ ಎಂದು ಹೇಳಿ ಲೋಕಾಯುಕ್ತರು ಪ್ರಕರಣಗಳನ್ನು ತಿರಸ್ಕರಿಸಿದ್ದರಂತೆ ಇದರಿಂದ ಹತಾಶನಾಗಿ ಕೃತ್ಯವೆಸಗಿದ್ದಾನೆ.
ಸರ್ಕಾರಿ ಅಧಿಕಾರಿಗಳ ಲಂಚಬಾಕತನದ ವಿರುದ್ಧ ತೇಜ್ ರಾಜ್ ಲೋಕಾಯುಕ್ತ ಸಂಸ್ಥೆಗೆ ಒಟ್ಟು 5 ದೂರುಗಳನ್ನ ನೀಡಿದ್ದನಂತೆ ಈ ಪೈಕಿ ಮೂರು ದೂರುಗಳಿಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿ ಲೋಕಾಯುಕ್ತರು ಪ್ರಕರಣವನ್ನು ತಿರಸ್ಕರಿಸಿದ್ದರು. ಇನ್ನೂ ಎರಡು ಪ್ರಕರಣಗಳ ವಿರುದ್ಧದ ವಿಚಾರಣೆ ಬಾಕಿ ಇತ್ತು. ತಾನು ನೀಡಿದ್ದ ದೂರಗಳೆಲ್ಲೂ ತಿರಸ್ಕಾರಗೊಂಡ ಹಿನ್ನೆಯಲ್ಲಿ ಆತ ಆಕ್ರೋಶಗೊಂಡಿದ್ದ ಮತ್ತು ಕೊನೆಯದಾಗಿ ಹತಾಶೆಯಿಂದ ಈ ಗಂಭೀರ ಕೃತ್ಯಕ್ಕೆ ಕೈ ಹಾಕಿದ್ದ. ತಾನು ಹತಾಶೆಗೊಂಡಿದ್ದು ಇದಕ್ಕೂ ಮೊದಲು ಈ ಕೃತ್ಯ ಎಸಗಲು ಯೋಚಿಸಿದ್ದೆ ಎಂದು ಶರ್ಮಾ ತನಿಖೆ ವೇಳೆ ಬಾಯಿ ಬಿಟ್ಟಿದ್ದಾನೆ. ತನ್ನ ಪ್ರಕರಣಗಳ ಬಗ್ಗೆ ಚರ್ಚೆ ನಡೆಸಲು ಆತ ಲೋಕಾಯುಕ್ತ ನ್ಯಾಯಮೂರ್ತಿಗಳ ಕಚೇರಿಗೆ ಬಂದಿದ್ದ. ಆತನಿಗೆ ಲೋಕಾಯುಕ್ತರ ಭೇಟಿಗೆ ಅವಕಾಶ ನೀಡಲಾಗಿತ್ತು ಮತ್ತು ಈ ಸಂಬಂಧ ಆತನಿಗೆ ಸ್ಲಿಪ್ ಕೂಡ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ವಿವರ?
ರಾಜಸ್ಥಾನ ಮೂಲದ, ತುಮಕೂರಿನ ಎಸ್.ಎಸ್.ಪುರ ನಿವಾಸಿ ಆರ್. ತೇಜರಾಜ್ ಬುಧವಾರ ಮಧ್ಯಾಹ್ನ 12.45ಕ್ಕೆ ಎಂ.ಎಸ್ ಕಟ್ಟಡದಲ್ಲಿರುವ ಲೋಕಾಯುಕ್ತ ಸಂಸ್ಥೆಗೆ ಆಗಮಿಸಿದ್ದ. ಸಂದರ್ಶಕರ ದಾಖಲಾತಿ ಪುಸ್ತಕದಲ್ಲಿ ತನಿಖಾ ವಿಭಾಗದ ಸಹಾಯಕ ರಿಜಿಸ್ಟ್ರಾರ್ (ಎಆರ್​ಇ-5) ಕೆ.ಎ.ಲಲಿತಾ ಅವರನ್ನು ಭೇಟಿಯಾಗಬೇಕು ಎಂದು ನಮೂದಿಸಿದ್ದ. ಬಳಿಕ 3ನೇ ಮಹಡಿಯಲ್ಲಿದ್ದ ತಮ್ಮ ಕಚೇರಿಗೆ ಆತ ಬಂದಾಗ ಆತನೊಂದಿಗೆ ಮಾತನಾಡಲು ಲಲಿತಾ ನಿರಾಕರಿಸಿದ್ದರು. ಆತ ಪುನಃ 2ನೇ ಮಹಡಿಯಲ್ಲಿರುವ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕಚೇರಿಯತ್ತ ಹೋಗಿದ್ದ. ಅಲ್ಲಿದ್ದ ಅಟೆಂಡರ್ ಪಳನಿ ಬಳಿ ಲೋಕಾಯುಕ್ತರನ್ನು ಭೇಟಿ ಮಾಡಿ ಮಾತನಾಡಬೇಕು ಎಂದು ಚೀಟಿಯಲ್ಲಿ ಹೆಸರು ಬರೆದು ಕೊಟ್ಟಿದ್ದ. ಪಳನಿ ಆ ಚೀಟಿಯನ್ನು ಲೋಕಾಯುಕ್ತರ ಟೇಬಲ್ ಮೇಲಿಟ್ಟು ಹೊರ ಬಂದಿದ್ದ. ಕಡತಗಳ ಪರಿಶೀಲನೆಯಲ್ಲಿದ್ದ ಲೋಕಾಯುಕ್ತರು1.35ರಲ್ಲಿ ತೇಜರಾಜ್​ನನ್ನು ಒಳಗೆ ಕಳುಹಿಸುವಂತೆ ಅಟೆಂಡರ್​ಗೆ ಸೂಚಿಸಿದ್ದರು.
ಲೋಕಾಯುಕ್ತರ ಕೊಠಡಿ ಪ್ರವೇಶಿಸಿದ ತೇಜರಾಜ್, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆ ಒದಗಿಸಿ ದೂರು ನೀಡಿದ್ದರೂ ತಾನು ನೀಡಿದ್ದ ಎರಡೂ ಪ್ರಕರಣಗಳನ್ನು ಖುಲಾಸೆಗೊಳಿಸಲಾಗಿದೆ. ಇನ್ನೂ 3 ಪ್ರಕರಣಗಳು ಬಾಕಿ ಇವೆ. ನನಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂದು ಏರುಧ್ವನಿಯಲ್ಲಿ ವಾದಿಸಿದ. ಆಗ ವಿಶ್ವನಾಥ ಶೆಟ್ಟಿ ಅವರು ಕಾನೂನು ಪ್ರಕಾರವೇ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಹೇಳಿದರು. ಅಂದಾಜು 10 ನಿಮಿಷಗಳ ಕಾಲ ತೇಜರಾಜ್ ಲೋಕಾಯುಕ್ತರ ಜತೆ ವಾಗ್ವಾದ ನಡೆಸಿದ. ಕೊನೆಗೆ ಆಕ್ರೋಶಗೊಂಡ ಆರೋಪಿ ತನ್ನ ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ತಂದಿದ್ದ ಚೂರಿಯನ್ನು ತೆಗೆದು 1.50ರ ವೇಳೆಗೆ ಏಕಾಏಕಿ ನ್ಯಾ.ಶೆಟ್ಟಿ ಅವರ ಮೇಲೆ ದಾಳಿ ನಡೆಸಿ ಕಿಬ್ಬೊಟ್ಟೆ ಮತ್ತು ಎದೆ ಭಾಗಕ್ಕೆ ಚೂರಿಯಿಂದ ಇರಿದ. ಬಳಿಕ ಆತ ಪರಾರಿಯಾಗಲು ಯತ್ನಿಸಿದ್ದು, ಕೂಡಲೇ ಕೊಠಡಿ ಒಳ ಪ್ರವೇಶಿಸಿದ್ದ ಪೊಲೀಸರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ನಂತರ ವಿಧಾನಸೌಧ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. 
ರಾಜಸ್ಥಾನದ ಪಾಲಿ ಜಿಲ್ಲೆಯ ಮೂಲದ ತೇಜರಾಜ್ ಶರ್ಮ ಅವರ ತಂದೆ ರೂಪಚಂದ್ ಶರ್ಮ 35 ವರ್ಷದ ಹಿಂದೆಯೇ ಕುಟುಂಬ ಸಮೇತ ತಿಪಟೂರಿಗೆ ಬಂದು ನೆಲೆಸಿದ್ದರು. ತೇಜರಾಜ್ 1998ರಿಂದ ಕುಟುಂಬದವರಿಂದ ದೂರವಿದ್ದ. ಅಲ್ಲದೆ, ಸಣ್ಣ, ಸಣ್ಣ ವಿಚಾರಗಳಿಗೂ ಉದ್ವೇಗಕ್ಕೊಳಗಾಗುತ್ತಿದ್ದ ಎನ್ನಲಾಗಿದೆ. ಖಾಸಗಿ ಪೀಠೋಪಕರಣ ಸಂಸ್ಥೆಯಲ್ಲಿ ಕೆಲಸ ಮಾಡಿ ತೊರೆದಿದ್ದ. ಬಳಿಕ ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣ ಸಪ್ಲೈ ಮಾಡುವ ಸಬ್ ಟೆಂಡರ್ ಪಡೆಯುತ್ತಿದ್ದ. ಈಗ ಈತನ ಬಿದಿರುಮಳೆ ತೋಟದ ಬಾಡಿಗೆ ರೂಂ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಹೇಳಿದ್ದೇನು?
ಅಧಿಕಾರಿಗಳು ಕಮೀಷನ್​ಗಾಗಿ ಇಲಾಖೆಗಳಿಗೆ 4-5 ಕೋಟಿ ರೂ. ನಷ್ಟ ಮಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ, ಕೈ ಕೆಲಸಗಾರರಿಗೆ, ರೇಷ್ಮೆ ರೈತರಿಗೆ, ಹಾಲು ಉತ್ಪಾದಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ದೂರಿನಲ್ಲಿ ತೇಜರಾಜ್ ಹೇಳಿದ್ದಾನೆ. ಅಂತೆಯೇ ಈ ಬಗ್ಗೆ ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿರುವ ತೇಜ್ ರಾಜ್, ಕಳೆದ ಆರು ತಿಂಗಳಿನಿಂದ ಲೋಕಾಯುಕ್ತ ಕಚೇರಿಯಲ್ಲಿ ಹಲವರ ಅಕ್ರಮಗಳ ವಿರುದ್ಧ ದೂರು ದಾಖಲಿಸಿದ್ದೆ. ಆದರೆ ನನ್ನ ದೂರಿನ ಬಗ್ಗೆ ಲೋಕಾಯಕ್ತ ಅಧಿಕಾರಿಗಳು ಗಮನಹರಿಸಿರಲಿಲ್ಲ. ಈ ಹಿಂದೆ ಮೂರು ಬಾರಿ ಲೋಕಾಯುಕ್ತರನ್ನು ಭೇಟಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಆಕ್ರಮಗಳ ಕುರಿತು ದೂರುಗಳ ಮೇಲೆ ದೂರು ಕೊಟ್ಟರೂ ಲೋಕಾಯುಕ್ತ ಕಚೇರಿಯಿಂದ ಸೂಕ್ತ ಉತ್ತರ ಬಂದಿರಲಿಲ್ಲ. ಆದರೆ ಸಾಕ್ಷ್ಯಾಧಾರ ಕೊರತೆ ಎಂದು ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದರು. ನ್ಯಾಯ ಸಿಗದೆ ಹತಾಶೆಗೊಂಡು ಕೃತ್ಯ ಎಸಗಿದೆ ಎಂದು ತೇಜರಾಜ್ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೂರಿನಲ್ಲಿ ಯಾರ ಹೆಸರು ?
ಮಂಜುನಾಥ್ ಉಪ ನಿರ್ದೇಶಕ, ಸಾರ್ವಜನಿಕ ಶೀಕ್ಷಣ ಇಲಾಖೆ, ತುಮಕೂರು
ಶಿವಕುಮಾರ್ ಎಸ್​ಡಿಎ, ಸಾರ್ವಜನಿಕ ಶೀಕ್ಷಣ ಇಲಾಖೆ
ದೇವರಾಜ್ ಸಹಾಯಕ ನಿರ್ದೇಶಕ, ರೇಷ್ಮೆ ಗೂಡಿನ ಮಾರುಕಟ್ಟೆ, ಕೋಲಾರ
ಮಹಲಿಂಗಪ್ಪ ಕ್ಲರ್ಕ, ಪರ್ಚೇಸ್ ಸಕ್ಷೆನ್, ಟಿಯುಎಂಪಿ ಲಿ., ತುಮಕೂರು
ಡಾ.ಚಂದ್ರಪ್ಪ ಮ್ಯಾನೇಜರ್, ಟಿಯುಎಂಪಿ ಲಿ., ತುಮಕೂರು
ಎಆರ್ ಚಂದ್ರಶೇಖರ್ ವ್ಯವಸ್ಥಾಪಕ ನಿರ್ದೇಶಕ, ತುಮಕೂರು
ಪ್ರಭಾಕರ್ ಜಂಟಿ ನಿರ್ದೇಶಕ , ರೇಷ್ಮೆ ವಿನಿಮಯ ಕೇಂದ್ರ, ಬೆಂಗಳೂರು
ಕುಮಾರ್ ಎಸ್​ಡಿಸಿ, ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ, ತುಮಕೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com