ಮಧುಮೇಹದಿಂದ ಬಳಲುವ ಗರ್ಭೀಣಿಯರಿಗೆ ಇನ್ಸುಲಿನ್ ಚುಚ್ಚುಮದ್ದು ಬದಲಿಗೆ ಮಾತ್ರೆ: ರಾಜ್ಯ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಸುಮಾರು 1 ಲಕ್ಷ ಗರ್ಭೀಣಿ ಮಹಿಳೆಯರು ಮಧುಮೇಹದಿಂದ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮೆಟ್ ಫಾರ್ಮಿನ್ ಮಾತ್ರೆ ನೀಡಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸುಮಾರು 1 ಲಕ್ಷ ಗರ್ಭೀಣಿಯರು ಮಧುಮೇಹದಿಂದ ನರಳುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಮೆಟ್ ಫಾರ್ಮಿನ್ ಮಾತ್ರೆ ನೀಡಲು  ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ  ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ರಾಜ್ ಕುಮಾರ್, ಇನ್ಸುಲಿನ್ ಚುಚ್ಚುಮದ್ದಿನಿಂದ  ದೇಹದ ಶಕ್ತಿ ಕಾಪಾಡುವಿಕೆ ಮತ್ತಿತರ ತೊಂದರೆಯಾಗುತ್ತಿದೆ. ಸಂರಕ್ಷಣೆ ಹಾಗೂ ಆರೋಗ್ಯ ಎಚ್ಚರಿಕೆ ವಹಿಸಲು ತೊಂದರೆಯಾಗುತ್ತದೆ. ಹಾಗಾಗೀ ಸುಲಭವಾಗಿ ಈ ಮಾತ್ರೆ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮೊದಲ ಬಾರಿಗೆ ಚಿಕಿತ್ಸೆಗೆ ಬಂದಂತಹ ಗರ್ಭೀಣಿಯರಿಗೆ ಗ್ಲೂಕೋಸ್ ಪ್ರಮಾಣ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷೆ ಮಾಡಲಾಗುತ್ತದೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶ ಕಂಡುಬಂದರೆ ನ್ಯೂಟ್ರಿಷಿಯನ್ ಥೆರಪಿ ಮಾಡಲಾಗುವುದು, ಒಂದು ವೇಳೆ ಸಕ್ಕರೆ ಪ್ರಮಾಣ ಸಾಮಾನ್ಯವಾಗಿದ್ದರೆ ಮೆಟ್ ಫಾರ್ಮಿನ್ ಮಾತ್ರೆ ನೀಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಆರೋಗ್ಯ ಸಚಿವಾಲಯ ಫೆಬ್ರವರಿ 28 ರಂದು ಪರಿಷ್ಕರಿಸಿದ ತಾಂತ್ರಿಕ ಮತ್ತು ಕಾರ್ಯಾಚರಣೆ ಮಾರ್ಗದರ್ಶನದಂತೆ ಮಧುಮೇಹದಿಂದ ಬಳಲುತ್ತಿರುವ ಗರ್ಭೀಣಿ ಮಹಿಳೆಯರಿಗೆ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಇನ್ಸುಲಿನ್ ಇಂಜೆಕ್ಷನ್ ಬದಲಾಗಿ ಮೆಟ್ ಫಾರ್ಮಿನ್ ಮಾತ್ರೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com