ಕೆಲಸ ಹುಡುಕಿಕೊಂಡು 2015 ರ ಮೇ ನಲ್ಲಿ ನಗರಕ್ಕೆ ಬಂದಿದ್ದ 26 ವರ್ಷದ ಯುವತಿಗೆ ಎಚ್ಎಸ್ಆರ್ ಲೇಔಟ್ ನಿವಾಸಿ ರಾಂಗ್ ಸೇನಕಲ್ ಎಂಬಾಕೆಯ ಪರಿಚಯವಾಗಿತ್ತು. ಬ್ಯೂಟಿ ಪಾರ್ಲರ್ ನಲ್ಲೆ ಕೆಲಸ ಕೊಡಿಸುತ್ತೇನೆ ಸ್ವಲ್ಪ ದಿನ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡು,ಇರು ಎಂದು ಹೇಳಿದ್ದರು. ಮನೆಯಲ್ಲಿ ಆಕೆಯ ಪತಿ ವಹಾಂಗ್ ಬಮ್ ಲಲಿತ ಸಿಂಗ್ ಹಾಗೂ ಇಬ್ಬರು ಮಕ್ಕಳು ವಾಸವಿದ್ದರು. ಅಲ್ಲಿ ಕೆಲಸಕ್ಕಿದ್ದ ಯುವತಿಯು ಪ್ರತ್ಯೇಕ ಕೊಠಡಿಯಲ್ಲಿ ವಾಸವಿದ್ದರು ಎಂದು ಪೊಲೀಸರು ಹೇಳಿದರು.