ಕರ್ನಾಟಕ-ಗೋವಾ ತೆರಿಗೆ ಇಲಾಖೆಯಿಂದ ರೂ,1 ಲಕ್ಷ ಕೋಟಿ ತೆರಿಗೆ ಸಂಗ್ರಹ

ಹಣಕಾಸು ವರ್ಷ 2017-18ನೇ ಸಾಲಿನಲ್ಲಿ ಕರ್ನಾಟಕಕ-ಗೋವಾ ಆದಾಯ ತೆರಿಗೆ ಇಲಾಖೆಯಿಂದ ರೂ. 1 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹಣಕಾಸು ವರ್ಷ 2017-18ನೇ ಸಾಲಿನಲ್ಲಿ ಕರ್ನಾಟಕಕ-ಗೋವಾ ಆದಾಯ ತೆರಿಗೆ ಇಲಾಖೆಯಿಂದ ರೂ. 1 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯ್ಕುತ್ ರಜನೀಶ್ ಕುಮಾರ್ ಅವರು, 2004ರಲ್ಲಿ ಕೇಂದ್ರ ಸರ್ಕಾರಗ್ಗೆ ಪಾವತಿಯಾಗುತ್ತಿದ್ದ ಒಟ್ಟು ಕೇಂದ್ರೀಯ ತೆರಿಗೆ ರೂ.1 ಲಕ್ಷ ಕೋಟಿ ಇತ್ತು. ಆದರೆ, ಇದೀಗ ಕರ್ನಾಟಕ ಮತ್ತು ಗೋವಾ ವಲಯದಿಂದಲೇ ರೂ.1 ಲಕ್ಷ ಕೋಟಿ ತೆರಿಗೆಯಾಗುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದ್ದಾರೆ. 
ಆದಾಯ ತೆರಿಕೆ ಸಂಗ್ರಹದಲ್ಲಿ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿರುವ ಕರ್ನಾಟಕ-ಗೋವಾ ವಲ್ಯವು ಒಂದು ಲಕ್ಷ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಿದ್ದು, ಪ್ರಸ್ತುತ ರೂ.98 ಕೋಟಿ ಸಂಗ್ರಹಿಸಿದೆ ಎಂದು ತಿಳಿಸಿದ್ದಾರೆ. 
ಆದಾಯ ತೆರಿಗೆ ಸಂಗ್ರದಲ್ಲಿ ಮುಂಬೈ, ದೆಹಲಿ ನಂತರ ಕರ್ನಾಟಕ-ಗೋವಾ ವಲಯ ಸ್ಥಾನ ಪಡೆದುಕೊಂಡಿದೆ. ರೂ.1 ಲಕ್ಷ ಸಂಗ್ರಹದ ಹಾದಿಯಲ್ಲಿದ್ದು, ಇದೇ ಮೊದಲ ಬಾರಿಗೆ ತೆರಿಕೆ ಸಂಗ್ರಹದಲ್ಲಿ ಲಕ್ಷ ಕೋಟಿ ರೂ. ಮೀರಲಿದೆ. ಜನರಿಗೆ ತೆರಿಗೆ ಪಾವತಿಸುವ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯಕ್ಕೆ ರೂ.98 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. 
ಇಲಾಖೆಯ ಅಧಿಕಾರಿಗಳು ನಡೆಸಿರುವ ಸಮೀಕ್ಷೆ ಪ್ರಕಾರ ಕಳೆದ 2 ವರ್ಷದಿಂದ ಸುಮಾರು 500 ಮಂದಿ ತೆರಿಗೆ ಪಾವತಿ ಮಾಡದಿರುವುದು ಗೊತ್ತಾಗಿದೆ. ಸೂಮಾರು ರೂ.300 ನಷ್ಟು ವ್ಯವಾಹ ನಡೆಸಿದರೂ ತೆರಿಗೆ ಪಾವತಿಸಿಲ್ಲ ಮಾ.31 ರಂದು ತೆರಿಗೆ ಪಾವತಿಲು ಕೊನೆಯ ದಿನಾಂಕವಾಗಿದೆ. ನಿಗದಿತ ಸಮಯದೊಳಗೆ ತೆರಿಗೆ ಪಾವತಿಸದಿದ್ದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಗೆ ನೀಡಿದ್ದಾರೆ. 
600ಕ್ಕೂ ಹೆಚ್ಚು ದಾಳಿಗಳ ಪಾಕಿ 517 ಸಂಸ್ಥೆಗಳು ಸಿಬ್ಬಂದಿಯ ಟಿಡಿಎಸ್ ಕಡಿತ ಮಾಡುವವಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ರೂ.300 ಕೋಟಿ ನಷ್ಟು ಸುಸ್ತಿಯಾಗಿರುವುದು ಗೊತ್ತಾಗಿದೆ. ಕಳೆದ ವರ್ಷ 490 ಕಂಪನಿಗಳ ಮೇಲೆ ದಾಳಿ ನಡೆಸಿ ರೂ.160ಕೋಟಿ ಸುಸ್ತಿಯಾಗಿತ್ತು. ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ನಡೆದಿರುವ ದಾಳಿಗಳು 463 ಕಡೆ ನಡೆದಿದ್ದು, ರೂ.254 ಕೋಟಿ ಸುಸ್ತಿಯಾಗಿದೆ. ವಂಚನೆ ಪ್ರಕರಣಗಳಲ್ಲಿ ಶೇ.50ರಷ್ಟು ಸಂಸ್ಥೆಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com