ನಾಗರಹೊಳೆ ಅಭಯಾರಣ್ಯದಲ್ಲಿ ಧಮ್ ಹೊಡೆದ ಆನೆ ರಹಸ್ಯ ಬಯಲು!

ಕರ್ನಾಟಕದ ನಾಗರಹೊಳೆ ಅಭಯಾರಣ್ಯದಲ್ಲಿ ಕಾಡು ಆನೆಯೊಂದು ಬಾಯಿಯಿಂದ ಹೊಗೆ ಉಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ, ಕಾಡಿನಲ್ಲಿ ಬೆಂಕಿ ಬಿದ್ದಾಗ ಇದ್ದಿಲನ್ನು ತಿಂದಿದ್ದರಿಂದ ಆನೆ ತನ್ನ ಬಾಯಿಯಿಂದ...
ನಾಗರಹೊಳೆ ಅಭಯಾರಣ್ಯದಲ್ಲಿ ಧಮ್ ಹೊಡೆದ ಆನೆ ರಹಸ್ಯ ಬಯಲು!
ನಾಗರಹೊಳೆ ಅಭಯಾರಣ್ಯದಲ್ಲಿ ಧಮ್ ಹೊಡೆದ ಆನೆ ರಹಸ್ಯ ಬಯಲು!
Updated on
ಬೆಂಗಳೂರು: ಕರ್ನಾಟಕದ ನಾಗರಹೊಳೆ ಅಭಯಾರಣ್ಯದಲ್ಲಿ ಕಾಡು ಆನೆಯೊಂದು ಬಾಯಿಯಿಂದ ಹೊಗೆ ಉಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಆದರೆ, ಕಾಡಿನಲ್ಲಿ ಬೆಂಕಿ ಬಿದ್ದಾಗ ಇದ್ದಿಲನ್ನು ತಿಂದಿದ್ದರಿಂದ ಆನೆ ತನ್ನ ಬಾಯಿಯಿಂದ ಹೊಗೆ ಉಗುಳುತ್ತಿತ್ತು ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ. 
ವೈಲ್ಡ್ ಲೈಫ್ ಕನ್ಸರ್ವೇಶನ್ ಸೊಸೈಟಿ (ಡಹ್ಲ್ಯೂಸಿಎಸ್) ಇಂಡಿಯಾ ಪ್ರೋಗ್ರಾಮ್ ನ ಸಹಾಯ ನಿರ್ದೇಶ ವಿನಯ್ ಕುಮಾರ್ ಅನ್ನುವವರು 2016ರ ಏಪ್ರಿಲ್ ನಲ್ಲಿ ಆನೆ ಹೊಗೆ ಉಗುಳುತ್ತಿರುವ ವಿಡಿಯೋವನ್ನು ಸೆರೆಹಿಡಿದಿದ್ದರು. 
ವಿಡಿಯೋ ಕುರಿತು ಸ್ಪಷ್ಟನೆ ನೀಡಿರುವ ಡಬ್ಲ್ಯೂಸಿಎಸ್ ಪ್ರೋಗ್ರಾಮ್ ಇಂಡಿಯಾದ ಹಿರಿಯನಾಗರಹೊಳೆ ಅಭಯಾರಣ್ಯದಲ್ಲಿ ಧಮ್ ಹೊಡೆದ ಆನೆ ರಹಸ್ಯ ಬಯಲು! ವಿಜ್ಞಾನಿ ವರುಣ್ ಗೋ.ಸ್ವಾಮಿಯವರು, ಇದ್ದಿಲುಗಳು ಕಾಡು ಪ್ರಾಣಿಗಳಿಗೆ ಇಷ್ಟದ ಆಹಾರವಾಗಿದೆ. ಇದ್ದಿಲಿನಲ್ಲಿ ಯಾವುದೇ ಪೌಷ್ಟಿಕ ಸತ್ವಗಳಿರುವುದಿಲ್ಲ. ಆದರೆ, ಅದರಲ್ಲಿ ವಿಷನಾಶಕ ಗುಣವಿದೆ. ಮಲಬದ್ಧತೆಯನ್ನು ನಿವಾರಿಸುವ ಗುಣವನ್ನೂ ಅದು ಹೊಂದಿದೆ. ಈ ಔಷಧೀಯ ಗುಣದಿಂದಾಗಿಯೇ ಕಾಡುಪ್ರಾಣಿಗಳು ಇದ್ದಿಲಿನ ಆಕರ್ಷಣೆಗೆ ಒಳಗಾಗುವುದುಂಟು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com