ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ ಕರ್ನಾಟಕ ವಿಧಾನಸಭೆ ಚುನಾವಣೆ!

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಗ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಗ ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಹಲವು ಪ್ರಥಮಗಳಿಗೆ ಸಾಕ್ಷಿಯಾಗಲಿದೆ.
1.ವಿವಿ ಪ್ಯಾಟ್
ಇದೇ ಮೊದಲ ಬಾರಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾನದ ವೇಳೆ ವಿವಿಪ್ಯಾಟ್ ಬಳಕೆ ಮಾಡುವ ಕುರಿತು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಒಟ್ಟು 56, 696 ಮತ ಕೇಂದ್ರಗಳಲ್ಲೂ ವಿವಿ ಪ್ಯಾಟ್ ಬಳಕೆ ಮಾಡಲು ನಿರ್ಧರಿಸಲಾಗಿದೆ.  ಮತದಾರ ತಾನು ಆಯ್ಕೆ ಮಾಡಬೇಕಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಸಾಕು ಮತಯಂತ್ರದ ಪಕ್ಕದಲ್ಲಿಯೇ ಇಡಲಾಗುವ ಮತ ಖಾತರಿಪಡಿಸುವ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ (ವಿವಿ ಪ್ಯಾಟ್) ಯಂತ್ರದಲ್ಲಿ ನಾವು ಮತ ಹಾಕಿದ ಅಭ್ಯರ್ಥಿಯ ಹೆಸರಿನಲ್ಲಿ ಪ್ರಿಂಟ್ ಆದ ಚೀಟಿ ಮತದಾನದ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು.
2.ಮಹಿಳಾ ಮತ ಕೇಂದ್ರ
ಇನ್ನು ಇದೇ ಮೊದಲ ಬಾರಿಗೆ ಮತದಾನದ ವೇಳೆ ಮತದಾನ ಪ್ರಕ್ರಿಯೆ ಸಂಪೂರ್ಣ ನಿರ್ವಹಣೆಯನ್ನು ಮಹಿಳೆಯರಿಗೆ ನೀಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದರಂತೆ ಮಹಿಳಾ ಮತ ಕೇಂದ್ರ ಸ್ಥಾಪನೆಗೆ ಆಯೋಗ ನಿರ್ಧರಿಸಿದ್ದು, ಚುನಾವಣಾ ಅಧಿಕಾರಿಗಳಿಂದ ಹಿಡಿದು, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯವರೆಗೂ ಎಲ್ಲ ಸಿಬ್ಬಂದಿಗಳೂ ಮಹಿಳೆಯರೇ ಆಗಿರಲಿದ್ದಾರೆ. 
3.ಬಾಟಮ್ ಆ್ಯಪ್
ದೇಶದಲ್ಲೇ ಮೊದಲ ಬಾರಿಗೆ ಬಾಟಮ್ ಆ್ಯಪ್ ಪರಿಚಯಿಸಲಾಗುತ್ತಿದ್ದು, ಎಲ್ಲ ಮತ ಕೇಂದ್ರಗಳ ಎಲ್ಲ ಮಾಹಿತಿ ಮತ್ತು ನಿರ್ಧಿಷ್ಟ ಕಾರ್ಯ ನಿರ್ವಹಣೆಯ  ಪ್ರಕ್ರಿಯೆಯ ಸಮಗ್ರ ಮಾಹಿತಿ  ಅಧಿಕಾರಿಗಳ ಬೆರಳ ತುದಿಯಲ್ಲೇ ಸಿಗಲಿದೆ. ಇದರಿಂದ ಯಾವುದೇ ಬೂತ್ ನಲ್ಲಿ ಸಮಸ್ಯೆಯಾದರೂ ಕ್ಷಿಪ್ರವಾಗಿ ಬಗೆಹರಿಸಲು ಅನುಕೂಲವಾಗುತ್ತದೆ.
4.ಇ-ಅಟ್ಲಾಸ್
ಇದೆೇ ಮೊದಲ ಬಾರಿಗೆ ಹೊಸ ಆವಿಷ್ಕಾರವಾಗಿ ಜಿಐಎಸ್ (ಭೌಗೋಳಿಕ ಮಾಹಿತಿ ವ್ಯವಸ್ಥೆ) ಮೂಲಕ ಚುನಾವಣಾ ಸಂಬಂಧಿ ಚಟುವಟಿಕಗಳ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಯೋಜನೆ ರೂಪಿಸುವುದು, ಅದನ್ನು ಜಾರಿಗೊಳಿಸುವ ಪ್ರಕ್ರಿಯೆ ಇದರಿಂಗದ ಸಲೀಸಾಗಲಿದೆ.
5.ಸರಕು ಮತ್ತು ಸೇವೆಗೆ ಇ-ಪೇಮೆಂಟ್
ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳಿಂದ, ಪೊಲೀಸ್ ಸಿಬ್ಬಂದಿಗೆ, ವಾಹನಗಳ ಮಾಲೀಕರಿಗೆ ಮತ್ತು ಚುನಾವಣಾ ಸಿಬ್ಬಂದಿ ಚಟುವಟಿಕೆಗಳಿಗೆ ಸರಕು, ಸೇವೆಗಳನ್ನು ನೀಡಿದವರಿಗೆ ಇ-ಪೇಮೆಂಟ್ ಮೂಲಕ ಹಣಪಾವತಿ ಮಾಡಲು ನಿರ್ಧರಿಸಲಾಗಿದೆ.
6.ಅಂಗವಿಕಲರಿಗೇ ವಿಶೇಷ ಮತಕೇಂದ್ರ
ಅಂಗವಿಕಲರಿಗೆ ಅನುಕೂಲವಾಗುವಂತೆ ಗ್ರೌಂಡ್ ಫ್ಲೋರ್ ನಲ್ಲೇ ಮತಗಟ್ಟೇ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮೊದಲೇ ಗುರುತಿಸಿ ಆದ್ಯತೆಯ ಮೇರೆಗೆ ಮತಚಲಾವಣೆಗೆ ಅವಕಾಶ ನೀಡಲಾಗುತ್ತದೆ. ಅಂತೆಯೇ ಗಾಲಿ ಕುರ್ಚಿ ಮೂಲಕ ಚಲಸಲು ಅನುಕೂಲವಾಗುವಂತೆ ರ್ಯಾಂಪ್ ಅಳವಡಿಕೆ ಮಾಡಲು ನಿರ್ಧರಿಸಲಾಗಿದೆ.
7.ಇವಿಎಂನಲ್ಲಿ ಅಭ್ಯರ್ಥಿ ಚಿತ್ರ
ಈ ಹಿಂದೆ ರಾಜ್ಯದಲ್ಲಿ ಬಳಸಲಾದ ಮತ ಯಂತ್ರಗಳಲ್ಲಿ ಪಕ್ಷದ ಚಿನ್ಹೆ ಮತ್ತು ಹೆಸರು ಮಾತ್ರ ಇರುತ್ತಿತ್ತು. ಹಾಲಿ ಚುನಾವಣೆಯಲ್ಲಿ ಇವುಗಳೊಂದಿಗೆ ಅಭ್ಯರ್ಥಿಯ ಭಾವಚಿತ್ರಗಳೂ ಕೂಡ ಇರಲಿವೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com