

ಬೆಂಗಳೂರು : ಮುಂದಿನ ಎರಡು ತಿಂಗಳ ಕಾಲ ರೈಲ್ವೆ ಪ್ರಯಾಣಿಕರ ಟಿಕೆಟ್ ಗೆ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ದಕ್ಷಿಣ ಕೇಂದ್ರ ರೈಲ್ವೆ 62 ವಿಶೇಷ ರೈಲುಗಳ ಕಾರ್ಯಾಚರಣೆಯನ್ನು ಆರಂಭಿಸುತ್ತಿದೆ.
ಯಶವಂತಪುರ- ವಿಶಾಖಪಟ್ಟಣ್ಣಂ , ಕಾಕಿನಾಡ- ರಾಯಚೂರು, ಮತ್ತು ವಿಜಯವಾಡ- ರಾಯಚೂರು ನಡುವೆ ಈ ರೈಲುಗಳು ಓಡಾಟ ನಡೆಸಲಿವೆ.
ಯಶವಂತಪುರ- ವಿಶಾಖಪಟ್ಟಣಂ- ಯಶವಂತಪುರ ಸಾಪ್ತಾಹಿಕ ತಾತ್ಕಲ್ ವಿಶೇಷ ರೈಲು ಶುಕ್ರವಾರ ಸಂಜೆ 6-35ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಮಾರನೇ ದಿನ 2-35ಕ್ಕೆ ವಿಶಾಖಪಟ್ಟಣಂ ತಲುಪಲಿದೆ.ಇದೇ ರೈಲು ಭಾನುವಾರ ಮಧ್ಯಾಹ್ನ 1-45ಕ್ಕೆ ವಿಶಾಖಪಟ್ಟಣಂನಿಂದ ಹೊರಡಲಿದ್ದು, ಮಾರನೇ ದಿನ 9-05ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ.
ಏಪ್ರಿಲ್ 28 ರಂದು ಶನಿವಾರ ಮಧ್ಯಾಹ್ನ 1-40ಕ್ಕೆ ಕಾಕಿನಾಡಿಂದ ನಿರ್ಗಮಿಸುವ ಕಾಕಿನಾಡ ಟೌನ್ ರಾಯಚೂರು ವಿಶೇಷ ರೈಲು ಮಾರನೇ ದಿನ 8-15ಕ್ಕೆ ರಾಯಚೂರು ತಲುಪಲಿದೆ.ಇದೇ ರೈಲು ಶನಿವಾರ ರಾತ್ರಿ 5-30ಕ್ಕೆ ರಾಯಚೂರು ಬಿಡಲಿದ್ದು, ಮಾರನೇ ದಿನ 11-25ಕ್ಕೆ ಕಾಕಿನಾಡ ತಲುಪಲಿದೆ.
ಎರಡು ಮಾರ್ಗದ ರೈಲುಗಳಲ್ಲಿಯೂ ದ್ವಾರಪುಡಿ, ರಾಜಮುಂಡ್ರೆ, ನಿದದಾವೊಲು, ಭೀಮಾವರಂ, ಕೈಕಾಲೂರು, ವಿಜಯವಾಡ. ಗುಂಟಕಲ್, ಅದೋನಿ, ಮಂತ್ರಾಲಯ ಮತ್ತಿತರ ನಿಲ್ದಾಣಗಳಲ್ಲಿ ರೈಲು ನಿಲ್ಲಿಸಲಾಗುತ್ತದೆ.
ಏಪ್ರಿಲ್ 26 ರಿಂದ ಗುರುವಾರ ರಾತ್ರಿ 11-10ಕ್ಕೆ ವಿಜಯವಾಡದಿಂದ ನಿರ್ಗಮಿಸುವ ವಿಜಯವಾಡ- ರಾಯಚೂರು ವಿಶೇಷ ರೈಲು ಮಾರನೇ ದಿನ 11-30ಕ್ಕೆ ರಾಯಚೂರು ತಲುಪಲಿದೆ.