ಬೆಂಗಳೂರು: ಸಹೋದ್ಯೋಗಿ ಸೈನಿಕನ ಹತ್ಯೆ, ಇಬ್ಬರು ಯೋಧರ ಬಂಧನ

ಸೈನಿಕ ಪಂಕಜ್ (26) ಹತ್ಯೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಇಬ್ಬರು ಆರೋಪಿ ಯೋಧರನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಸಹೋದ್ಯೋಗಿ ಸೈನಿಕನ ಹತ್ಯೆ, ಇಬ್ಬರು ಯೋಧರ ಬಂಧನ
ಬೆಂಗಳೂರು: ಸಹೋದ್ಯೋಗಿ ಸೈನಿಕನ ಹತ್ಯೆ, ಇಬ್ಬರು ಯೋಧರ ಬಂಧನ
Updated on: 
ಬೆಂಗಳೂರು: ಸೈನಿಕ ಪಂಕಜ್ (26) ಹತ್ಯೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಇಬ್ಬರು ಆರೋಪಿ ಯೋಧರನ್ನು  ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ.
ಆಂಧ್ರ ಪ್ರದೇಶದವರಾದ ಮುರಳಿಕೃಷ್ಣ ಹಾಗೂ ಧನರಾಜ್ ಆರೋಪಿಗಳಾಗಿದ್ದು ಇವರೂ ಸಹ ಯೋಧರಾಗಿದ್ದರು. ಉತ್ತರ ಪ್ರದೇಶ ಮೂಲದ ಪಂಕಜ್ ಮೂರು ದಿನಗಳ ಹಿಂದೆ ವಿವೇಕನಗರದ ಎಎಸ್​ಸಿ ಸೆಂಟರ್​ ಮತ್ತು ಕಾಲೇಜು ಆವರಣದಲ್ಲಿ ಕೊಲೆಯಾಗಿದ್ದ.
ಪಂಕಜ್ ತನ್ನ ಕೋಣೆಯಲ್ಲಿ ಮಲಗಿರುವ ವೇಳೆ ಹಗ್ಗದಿಂದ ಕತ್ತನ್ನು ಬಿಗಿದ ಆರೋಪಿಗಳು ಬಳಿಕ ಚಾಕುವಿನಿಂದ ಕುತ್ತಿಗೆ ಸೀಳಿದ್ದಾರೆ. ಆ ವೇಳೆ ಪಂಕಜ್ ಸಹ ಸಾಕಷ್ಟು ಪ್ರತಿರೋಧ ತೋರಿದ್ದಾನೆ. ಧನರಾಜ್  ಕಾಲು ಕೈಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಹೀಗೆ ಪಂಕಜ್ ಹತ್ಯೆ ಮಾಡಿದ್ದ ಆರೋಪಿಗಳು   ಮೃತದೇಹವನ್ನು ಆರ್ಮಿ ಟ್ರಕ್ ನಲ್ಲಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿ ಏನೂ ತಿಳಿಯದವರಂತೆ ಮರಳಿದ್ದರೆಂದು ಪೋಲೀಸ್ ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ. ಹೇಳಿದ್ದಾರೆ
ಯೋಧ ಮುರಳಿಕೃಷ್ಣನ ಕೆಲ ದಾಖಲಾತಿಗಳನ್ನು ಮೃತ ಪಂಕಜ್ ಕಳ್ಳತನ ಮಾಡಿದ್ದ ಎನ್ನಲಾಗಿದ್ದು  ಇದೇ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕೊಲೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲವೆಂದು ಪೋಲೀಸರು ಹೇಳೀದ್ದಾರೆ.
"ಪಂಕಜ್ ದೇಹ ಪೂರ್ಣವಾಗಿ ಸುಟ್ಟಿರಲಿಲ್ಲ ಅರ್ಧ ಸುಟ್ಟ ದೇಹವನ್ನು ಆರೋಪಿಗಳು ಎಎಸ್​ಸಿ ಸೆಂಟರ್​ ಮತ್ತು ಕಾಲೇಜು ಆವರಣದಲ್ಲಿ ಬಿಸಾಡಿದ್ದಾರೆ.  ಬಳಿಕ ಪಂಕಜ್ ಕೋಣೆಗೆ ಬಂದು ಅಲ್ಲಿ ಆಗಿದ್ದ ರಕ್ತದ ಕಲೆಗಳನ್ನು ತೊಳೆದಿದಾರೆ. ಆರೋಪಿ ಧನರಾಜ್ ಗೆ ಪಂಕಜ್ ಚಾಕುವಿನಿಂದ ಚುಚ್ಚಿ ಗಾಯವಾಗಿತ್ತಷ್ಟೆ, ಆತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ. ತಾನು ಟ್ರಿನಿಟಿ ಸರ್ಕಲ್ ಬಳಿ ಅಪಘಾತಕ್ಕೊಳಗಾಗಿ ಈ ಗಾಯವಾಗಿದೆ ಎಂದು ಅವನು ಆಸ್ಪತ್ರೆಯಲ್ಲಿ ವಿವರಣೆ ನಿಡಿದ್ದ. ಆದರೆ ಅವನನ್ನು ಪರೀಕ್ಷಿಸಿದ ವೈದ್ಯರಿಗೆ ಇದು ಅಪಘಾತದಿಂದಾದ ಗಾಯವಲ್ಲ ಎನ್ನುವುದು ತಿಳಿದಿದೆ. ಅವರು ನಮಗೆ ಮಾಹಿತಿ ನೀಡಿದರು " ಡಿಜಿಪಿ ಚಂದ್ರಗುಪ್ತ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com