ನನ್ನ ಭವಿಷ್ಯದ ಒಂದು ಭಾಗ ಕೂಡ ನನ್ನ ಮಗನೊಂದಿಗೆ ಅಂತ್ಯವಾಗಿದೆ: ಶರತ್ ಮಡಿವಾಳ್ ತಂದೆ

ಜುಲೈ 7 2017 ರಂದು ಮಂಗಳೂರಿನ ಬಿ.ಸಿ ರಸ್ತೆಯಲ್ಲಿರುವ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಬಾಗಿಲು ಮುಚ್ಚಿ ಮನೆಗೆ ವಾಪಸ್ ಬರುವ ವೇಳೆ ಆರ್ ಎಸ್ ...
ಶರತ್ ಮಡಿವಾಳ ತಂದೆ
ಶರತ್ ಮಡಿವಾಳ ತಂದೆ
Updated on
ಮಂಗಳೂರು:  ಜುಲೈ 7 2017 ರಂದು ಮಂಗಳೂರಿನ ಬಿ.ಸಿ ರಸ್ತೆಯಲ್ಲಿರುವ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಬಾಗಿಲು ಮುಚ್ಚಿ ಮನೆಗೆ ವಾಪಸ್ ಬರುವ ವೇಳೆ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಈ ಪ್ರಕರಣ ನಡೆದು 9 ತಿಂಗಳು ಕಳೆದಿದೆ. ಉದಯ್ ಲಾಂಡ್ರಿಯಲ್ಲಿ ಶರತ್  ಅವರ ಹಿರಿಯ ಸಹೋಕದರಿ ಹಾಗೂ ಅವರ ತಂದೆ ಕೆಲಸ ಮುಂದುವರಿಸಿದ್ದಾರೆ. ಶರತ್ ತಂದೆ 63 ವರ್ಷ ವಯಸ್ಸಿನ ಥಣಿಯಪ್ಪ ಬರುವ ಗ್ರಾಹಕರನ್ನು ನಗು ನುಗತಾ ಸ್ವಾಗತಿಸುತ್ತಾರೆ, ಆದರೆ ಆ ನಗುವಿನ ಹಿಂದೆ ಎಂದೂ ಮುಗಿಯದ ಯಾತನೆಯಿದೆ. 
ನಾವು ಕೊಳಕು ಬಟ್ಟೆಗಳನ್ನು ಶುದ್ದೀಕರಿಸಿ ಹೇಗೊ ಜೀವನ ನಿರ್ವಹಿಸುತ್ತಿದ್ದೆವು, ನನ್ನ ಸಹೋದರ ರಾಜಕೀಯ ಪಿತೂರಿಗೆ ಬಲಿಯಾಗುತ್ತಾನೆ ಎಂದು ನಾವು ಯೋಚಿಸಿರಲಿಲ್ಲ ಎಂದು ಶರತ್ ಸಹೋದರಿ ಹೇಳಿದ್ದಾರೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಶರತ್ ಸಹೋದರಿ ಒತ್ತಾಯದ ಮೇರೆಗೆ ಕೆಲಸಕ್ಕೆ ರಾಜೀನಾಮೆ ನೀಡಿ ತಂದೆಗೆ ಲಾಂಡ್ರಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ.
ನನ್ನ ಮಗನ ಸಾವಿನ ಜೊತೆ ನನ್ನ ಭವಿಷ್ಯದ ಒಂದು ಭಾಗೂ ಅಂತ್ಯ ಕಂಡಿದೆ, ಈ ನಾನು ನನ್ನ ಸಮಯ ಕಾಯುತ್ತಿದ್ದೇನೆ ಎಂದು ಥಣಿಯಪ್ಪ ಮಡಿವಾಳ್ ಅವರು ತಿಳಿಸಿದ್ದಾರೆ.
ಸಮಾಜ ಸೇವಕನಾಗಿದ್ದ ಶರತ್ ತಮ್ಮ ಒಳ್ಳೆಯ ಕೆಲಸ ಮಾಡಿ ಉತ್ತಮ ಹೆಸರು ಪಡೆದಿದ್ದ. ಆತನ ಸಾವಿನ ನಂತರ ಬಹುಸಂಖ್ಯೆಯಲ್ಲಿ ಮುಸ್ಲಿಮರು ಆತನ ಹತ್ಯೆಗಾಗಿ ಕಣ್ಣೀರು ಸುರಿಸಿದ್ದಾರೆ.
ಇನ್ನೂ ಇತ್ತೀಚೆಗೆ ಮಂಗಳೂರಿಗೆ ಅಮಿತ್ ಶಾ ಭೇಟಿ ನೀಡಿದ್ದ ವೇಳೆ ಅವರನ್ನು ಭೇಟಿಯಾಗಿದ್ದ ಥಣಿಯಪ್ಪ ತಮ್ಮ ಮಗನ ಸಾವಿನ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ತಂಡದಿಂದ ಮಾಡಿಸಬೇಕು ಎಂದು ಮನವಿ ಸಲ್ಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com