75ರ ಸಂಭ್ರಮದಲ್ಲಿ ಗಾಂಧಿ ಬಜಾರ್ ವಿದ್ಯಾರ್ಥಿ ಭವನ

ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೆಸರು ಕೇಳುತ್ತಿದ್ದಂತೆಯೇ ಕೆಲವರ ಬಾಯಲ್ಲಿ ನೀರೂರುತ್ತದೆ. ಏಕೆಂದರೆ. ಇಲ್ಲಿನ ತುಪ್ಪದ ಮಸಾಲೆ ದೋಸೆ ಮಹತ್ವದ ಅಂತಹದ್ದು. ದಶಕದ ಇತಿಹಾಸವನ್ನು ಹೊಂದಿರುವ ವಿದ್ಯಾರ್ಥಿ ಭವನ 75ರ ಸಂಭ್ರಮದಲ್ಲಿದೆ...
75ರ ಸಂಭ್ರಮದಲ್ಲಿ ಗಾಂಧಿ ಬಜಾರ್ ವಿದ್ಯಾರ್ಥಿ ಭವನ
75ರ ಸಂಭ್ರಮದಲ್ಲಿ ಗಾಂಧಿ ಬಜಾರ್ ವಿದ್ಯಾರ್ಥಿ ಭವನ
ಬೆಂಗಳೂರು: ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೆಸರು ಕೇಳುತ್ತಿದ್ದಂತೆಯೇ ಕೆಲವರ ಬಾಯಲ್ಲಿ ನೀರೂರುತ್ತದೆ. ಏಕೆಂದರೆ. ಇಲ್ಲಿನ ತುಪ್ಪದ ಮಸಾಲೆ ದೋಸೆ ಮಹತ್ವದ ಅಂತಹದ್ದು. ದಶಕದ ಇತಿಹಾಸವನ್ನು ಹೊಂದಿರುವ ವಿದ್ಯಾರ್ಥಿ ಭವನ 75ರ ಸಂಭ್ರಮದಲ್ಲಿದೆ. 
ಬೆಂಗಳೂರು ನಗರದ ಬೆಳವಣಿಗೆಯ ಜೊತೆ ಜೊತೆಗೆ ಉದ್ಯಾನ ನಗರಿಯ ಸಂಸ್ಕೃತಿಯೊಂದಿಗೆ ತಳುಕಿಹಾಕಿಕೊಂಡಿರುವ ತಿನಿಸುತಾಣ ಈ ವಿದ್ಯಾರ್ಥಿ ಭವನ. ತಿನಿಸು ಪ್ರಿಯರಿಗೆ ಮರೆಯಲಾಗದ ತಾಣ ಕೂಡ ಹೌದು. ಈ ವಿದ್ಯಾರ್ಥಿ ಭವನದಲ್ಲಿ ತಯಾರಿಸಲಾಗುವ ರುಚಿಕರವಾದ ಮಸಾಲೆ ದೋಸೆಯನ್ನು ತಿನ್ನುವ ಸಲುವಾಗಿಯೇ ನಗರದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ದಶಕಗಳಿಂದಲೂ ಕೈಗೆಟುವ ದರದಲ್ಲಿಯೇ ಇಲ್ಲಿನ ಸವಿರುಚಿಗಳನ್ನು ಉಣಬಡಿಸಲಾಗುತ್ತಿದ್ದು, ಎಷ್ಟೇ ಜನ ಇದ್ದರೂ ಸಾಲಿನಲ್ಲಿ ನಿಂತುಕೊಳ್ಳುವ ಜನರು ಇಲ್ಲಿನ ದೋಸೆಯನ್ನು ಸವಿದು ಹೋಗುತ್ತಾರೆ. 
1943ರಲ್ಲಿ ಉಡುಪಿಯ ಕುಂದಾಪುರ ಮೂಲಕ ವೆಂಕಟರಮಣ ಮತ್ತು ಪರಮೇಶ್ವರ ಎಂಬ ಸಹೋದರರು ಈ ಹೋಟೆಲ್ ನ್ನು ಆರಂಭಿಸಿದ್ದರು. ಈ ವಿದ್ಯಾರ್ಥಿ ಭವನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಚಳುವಳಿಕಾರರು, ಕಮ್ಯೂನಿಸ್ಟ್ ನಾಯಕರು ಹಾಗೂ ಸಾಹಿತಿ, ನಟರ ನೆಚ್ಚಿನ ತಾಣವಾಗಿತ್ತು. ಮೊದಲು ಸಣ್ಣದಾಗಿ ಆರಂಭವಾಗಿದ್ದ ಈ ಹೋಟೆಲ್ ನಂತರ ನವೀಕರಣಗೊಳಪಟ್ಟು ಸ್ಥಳಾಂತರಗೊಂಡಿದ್ದು 1948ರಲ್ಲಿ ಎಂದು ಹೇಳಲಾಗುತ್ತಿದೆ. 
ನವ್ಯ ಹಾಗೂ ನವೋದಯ ಕನ್ನಡ ಸಾಹಿತ್ಯಕ ಪರಂಪರೆಯ ಬಹಳಷ್ಟು ಬರಹಗಳಲ್ಲಿ ವಿದ್ಯಾರ್ಥಿ ಭವನ್ ದೋಸೆಯ ಪ್ರಸ್ತಾಪ ಕೂಡ ಇದೆ. ಇಲ್ಲಿನ ಸುತ್ತಲು ಕಾಲೇಜುಗಳಿದ್ದು, ವಿದ್ಯಾರ್ಥಿಗಳನ್ನು ಈ ವಿದ್ಯಾರ್ಥಿ ಭವನ ಸೆಳೆಯುತ್ತಿದೆ. ವಿದ್ಯಾರ್ಹತೆಗೆಂದು ಬರುವ ವಿದ್ಯಾರ್ಥಿಗಳಂತೂ ಒಂದು ಬಾರಿಯಾದರೂ ಇಲ್ಲಿನ ದೋಸೆಯನ್ನು ಸವಿಯುತ್ತಾರೆ. 
1970ರಲ್ಲಿ ಕುಂದಾಪುರದಿಂದ ನಗರಕ್ಕೆ ಆಗಮಿಸಿದ್ದ ರಾಮಕೃಷ್ಣ ಅಡಿಗ ಎಂಬುವವರು ವಿದ್ಯಾರ್ಥಿ ಭವನವನ್ನು ಖರೀದಿ ಮಾಡಿದ್ದರು. ಪ್ರಸ್ತುತ ರಾಮಕೃಷ್ಣ ಅವರ ಪುತ್ರ ಅರುಣ್ ಕುಮಾರ್ ಅಡಿಗ ಎಂದು ಹೋಟೆಲ್ ನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿ ಭವನದ ಹಿಂದಿರುವ ಕಥೆಯನ್ನು ರಾಮಕೃಷ್ಣ ಅಡಿಗ ಅವರು ವಿವರಿಸಿದ್ದಾರೆ. 
ಕುಂದಾಪುರ ಮೂಲದವರಾಗಿದ್ದ ನನ್ನ ತಂದೆ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಹೋಟೆಲ್ ಮಾಲೀಕರ ಪುತ್ರಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. 1968ರಲ್ಲಿ ಇಬ್ಬರಿಗೂ ವಿವಾಹವಾಗಿತ್ತು. 
ಕೆಲ ವರ್ಷಗಳ ಬಳಿಕ ಹೋಟೆಲ್ ವೊಂದರನ್ನು ಆರಂಭಿಸಲು ನನ್ನ ತಂದೆ ಬಯಸಿದ್ದರು. ಈ ವೇಳೆ ವಿದ್ಯಾರ್ಥಿ ಭವನದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರು. ನಂತರ ಅದರ ಮೆನುವಿನ ಬಗ್ಗೆ ತಿಳಿದುಕೊಳ್ಳಲು ಆರಂಭಿಸಿದ್ದರು. ಅಂದಿನಿಂದಲೂ ಉಪಹಾರ ಮಂದಿರಕ್ಕೆ ಶುಕ್ರವಾರದಂದು ರಜೆಯನ್ನು ನೀಡಲಾಗುತ್ತಿದೆ. ಶನಿವಾರ ಎಂದಿನಂತೆಯೇ ಕಾರ್ಯಗಳು ನಡೆಯುತ್ತವೆ. ಅಂದಿನಿಂದ ಇಂದಿನವರೆಗೂ ಗುಣಮಟ್ಟದಲ್ಲಾಗಲೀ ಅಥವಾ ರುಚಿಯಲ್ಲಾಗಲೀ ಯಾವುದೇ ಬದಲಾವಣೆಗಳಿಲ್ಲ. ರುಚಿಯಲ್ಲಿ ಬದಲಾವಣೆಗಳಿಲ್ಲದಿರುವುದರಿಂದ ಕೈಗಳ ಬದಲಾವಣೆಯಾದರೂ ಗ್ರಾಹಕರಿಗೆ ಇದರ ಬದಲಾವಣೆಗಳು ತಿಳಿಯುವುದಿಲ್ಲ. ಅಂದು ಒಂದು ದೋಸೆಗೆ 60 ಪೈಸೆ ಇದ್ದು ಎಂದು ಅರುಣ್ ಅವರು ಹೇಳಿದ್ದಾರೆ. 
ಇನ್ನು ದೋಸೆ ವಿಶೇಷತೆ ಬಗ್ಗೆ ವಿವರಣೆ ನೀಡಿರುವ ಅವರು, ತುಮಕೂರು ಮತ್ತು ಚಿತ್ರದುರ್ಗದಿಂದ ಕೆಂಪು ಅಕ್ಕಿಯನ್ನು ಖರೀದಿಸಲಾಗುತ್ತದೆ. ಇದು ದೋಸೆ ಹಿಟ್ಟಿಗೆ ಬಣ್ಣವನ್ನು ನೀಡುತ್ತದೆ. ಹಲವು ವರ್ಷಗಳಿಂದಲೂ ನಾವು ಮದ್ದೂರಿನಿಂದಲೇ ಬೆಣ್ಣೆಯನ್ನು ಖರೀದಿಸುತ್ತಿದ್ದೆವು. ಇದೀಗ ಕೆಎಂಎಫ್'ನಿಂದ ಖರೀದಿ ಮಾಡಲಾಗುತ್ತಿದೆ. ಇತರೆ ಹೋಟೆಲ್ ಗಳಲ್ಲಿ ತೆಗೆದುಕೊಳ್ಳುವ ಮಸಾಲೆ ದೋಸೆಗಿಂತಲೂ ಇಲ್ಲಿನ ದೋಸೆ ದಪ್ಪವಾಗಿರುತ್ತದೆ. ಇಂದಿಗೂ ಅದೇ ರುಚಿಯನ್ನು ಕಾಪಾಡಿಕೊಂಡಿ ಬಂದಿದ್ದೇವೆಂದು ತಿಳಿಸಿದ್ದಾರೆ. 
ವಯಸ್ಸಾದ ಕಾರಣ ರಾಮಕೃಷ್ಣ ಅಡಿಗ ಅವರು ವಿದ್ಯಾರ್ಥಿ ಭವನವನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಭಾವಿಸಿ ವಿದ್ಯಾರ್ಥಿ ಭವನವನ್ನು ಬಂದ್ ಮಾಡಲು ನಿರ್ಧರಿಸಿದ್ದರು. ನನಗೆ ಇಬ್ಬರು ಮಕ್ಕಳಿದ್ದು, ಅರುಣ್ ಚಿಕ್ಕ ಮಗನಾಗಿದ್ದಾರೆ. ಇಬ್ಬರೂ ಇಂಜಿನಿಯರಿಂಗ್ ಮಾಡಿದ್ದಾರೆ. ನನ್ನ ಕಿರಿಯ ಪುತ್ರ ಅಮೆರಿಕದಲ್ಲಿ ನೆಲೆಯೂರಿದ್ದಾನೆ. ಇಬ್ಬರೂ ಅವರ ಭವಿಷ್ಯದಲ್ಲಿ ಮುಂದುವರೆಯುತ್ತಿದ್ದರು. ಹೀಗಾಗಿ ವಿದ್ಯಾರ್ಥಿ ಭವನವನ್ನು ಮುಂದುವರೆಸುತ್ತಾರೋ, ಇಲ್ಲವೋ ಎಂಬ ಸಂದೇಹಗಳು ಮೂಡಿದ್ದವು. ಹೀಗಾಗಿ ವಿದ್ಯಾರ್ಥಿ ಭವನವಿರುವ ಸ್ಥಳವನ್ನು ನೆಲೆಸಮ ಮಾಡಿ, ಆ ಪ್ರದೇಶದಲ್ಲಿ ಕಾಂಪ್ಲೆಕ್ಸ್ ಯಾವುದಾದರೂ ನಿರ್ಮಾಣ ಮಾಡೋಣ, ಅದರಿಂದ ಬರುವ ಬಾಡಿಗೆ ಹಣ ಸಾಕು ಎಂದು ಆಲೋಚಿಸಿದ್ದೆ. ಆದರೆ, ಭವಿಷ್ಯ ಯೋಜನೆಗಳು ವಿಭಿನ್ನವಾಗಿತ್ತು ಎಂದು ರಾಮಕೃಷ್ಣ ಅಡಿಗ ಅವರು ಹೇಳಿದ್ದಾರೆ. 
ತಂದೆ ತಮ್ಮ ನಿರ್ಧಾರದ ಬಗ್ಗೆ ತಿಳಿಸಿದಾಗ, ಏನು ಮಾಡಬೇಕೆಂಬ ಗೊಂದಲದಲ್ಲಿದ್ದೆ. ಟೆಲಿಕಾಂ ಇಂಜಿನಿಯರಿಂಗ್ ಮಾಡಿದ್ದರಿಂದ ನನಗೆ ರಿಲಯನ್ಸ್ ನಲ್ಲಿ ಉತ್ತಮ ವೇತನ ಬರುತ್ತಿತ್ತು. ವಿದ್ಯಾರ್ಥಿ ಭವನ ನಡೆಸುವುದೋ ಅಥವಾ ರಿಲಯನ್ಸ್ ನಲ್ಲಿಕೆ ಕೆಲಸ ಮಾಡುವುದೋ ಎಂಬುದರ ಬಗ್ಗೆ ನನಗೆ ಆಲೋಚನೆ ಆರಂಭವಾಗಿತ್ತು. ನಂತರ ಇನ್ಫೋಸಿಸ್ ನಾರಾಯಣ  ಮೂರ್ತಿಯವರು ನನಗೆ ಪ್ರೋತ್ಸಾಹ ನೀಡಿದರು. ವಿದ್ಯಾರ್ಥಿ ಭವನದ ಜವಾಬ್ದಾರಿ ಹೊತ್ತುಕೊಂಡಿ ನಡೆಸುವಂತೆ ಸಲಹೆ ನೀಡಿದರು. ನಂತರ ನಾನು ವಿದ್ಯಾರ್ಥಿ ಭವನ ಮುಂದುವರೆಸುವ ನಿರ್ಧಾರ ತೆಗೆದುಕೊಂಡೆ. ಅಂದು ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಕೆಲಸಗಾರರು ಇಂದಿಗೂ ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಅಲ್ಲಿ ನಾನು ಹೇಗೆ ಬಾಸ್ ಆಗಲು ಸಾಧ್ಯ? ಅವರ ಸಹಾಯದೊಂದಿಗೆ ನಾನು ಎಲ್ಲವನ್ನೂ ನಿರ್ವಹಣೆ ಮಾಡಬಹುದು ಎಂದು ಅರುಣ್ ಅವರು ಹೇಳಿದ್ದಾರೆ. 
ವಿದ್ಯಾರ್ಥಿ ಭವನದಲ್ಲಿ ಇಂದು ಒಟ್ಟು 28 ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಹಲವರು 25 ವರ್ಷಗಳಿಂದರೂ ಕೆಲಸ ಮಾಡುತ್ತಿದ್ದಾರೆ. ಕೆಲವು 13 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ಭವನವನ್ನು ನವೀಕರಿಸಲಾಗಿದೆ. ಒಂದು ಬಾರಿ 96 ಮಂದಿ ಕುಳಿತುಕೊಳ್ಳುವ ಜಾಗ ಇಲ್ಲಿದೆ. ಮುಂಭಾಗದಲ್ಲಿ 75 ವರ್ಷದ ಹಿಂದೆ ಯಾವ ರೀತಿಯ ಇತ್ತೋ ಅದೇ ರೀತಿಯಲ್ಲಿದೇ ವಿದ್ಯಾರ್ಥಿ ಭವನ ಇದೆ ಎಂದು ಅರುಣ್ ತಿಳಿಸಿದ್ದಾರೆ. 
ಎಟಿಎಂ ಮಸಾಲೆ ದೋಸೆ
ನಮ್ಮಲ್ಲಿ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿ ಬಾತ್, ಪೂರಿ ಹಾಗೂ ರವೆ ಇಡ್ಲಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ದೊರೆಯುತ್ತವೆ. ಆದರೆ, ವಾರಾಂತ್ಯದಲ್ಲಿ ಮಾತ್ರ ಮಸಾಲೆ ದೋಸೆ ಎಟಿಎಂ (ಎನಿಟೈಮ್ ಮಸಾಲೆ ದೋಸೆ) ಇದ್ದಂತೆ. ವಾರಾಂತ್ಯದ ದಿನಗಳಲ್ಲಿ 1,250 ಮಸಾಲೆ ದೋಸೆಗಳನ್ನು ಮಾಡಲಾಗುತ್ತದೆ. ಕೆಲವೊಮ್ಮೆ 2,000 ಕೂಡ ಆಗುತ್ತದೆ. ಪ್ರತೀನಿತ್ಯ 4 ಕೆಜಿ ದೋಸೆ ಹಿಟ್ಟನ್ನಾದರೂ ಬಳಸಲಾಗುತ್ತದೆ ಎಂದಿದ್ದಾರೆ. 
ರಾಜ್'ಕುಮಾರ್ ರಿಂದ ರಜನಿಕಾಂತ್ ವರೆಗೂ
ರಜನಿಕಾಂತ್ ಅವರು ಅಂದು ಪ್ರತೀನಿತ್ಯ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡುತ್ತಿದ್ದರಂತೆ. ಇದನ್ನು ಸ್ವತಃ ರಜನಿಕಾಂತ್ ಅವರ ಸ್ನೇಹಿತರೇ ಹೇಳಿದ್ದಾರೆ. ಮತ್ತೊಮ್ಮೆ ರಜನಿಕಾಂತ್ ಅವರನ್ನು ವಿದ್ಯಾರ್ಥಿ ಭವನದಲ್ಲಿ ನೋಡಲು ಬಯಸುತ್ತೇನೆಂದು ಅರುಣ್ ತಿಳಿಸಿದ್ದಾರೆ. 
ಕನ್ನಡ ಚಿತ್ರರಂಗ ಮೇರು ನಟ ರಾಜ್ ಕುಮಾರ್ ಅವರೂ ಕೂಡ ಇಲ್ಲಿನ ದೋಸೆಯನ್ನು ಬಹಳ ಇಷ್ಟ ಪಡುತ್ತಿದ್ದರು. ಮಲ್ಲೇಶ್ವರಂ ನಲ್ಲಿ ರಾಜ್ ಕುಮಾರ್ ಹಾಗೂ ರಜನಿಕಾಂತ್ ಅವರು ಭೇಟಿಯಾದ ಸಂದರ್ಭದಲ್ಲಿ ದೋಸೆ ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ರಜನಿಕಾಂತ್ ಅವರು ರಾಜ್ ಕುಮಾರ್ ಅವರಿಗೆ ವಿದ್ಯಾರ್ಥಿ ಭವನದ ದೋಸೆ ಸವಿಯುವಂತೆ ಸಲಹೆ ನೀಡಿದ್ದರು. 
ನಂತರ ರಾಜ್ ಕುಮಾರ್ ಅವರು ಇಲ್ಲಿಂದಲೇ ಪಾರ್ಸೆಲ್ ತೆಗೆಸಿಕೊಂಡು ಹೋಗಿ ದೋಸೆಯನ್ನು ತಿನ್ನುತ್ತಿದ್ದರು. 2005ರಲ್ಲಿ ವೀರಪ್ಪನ್ ಅವರಿಂದ ಬಿಡುಗಡೆಯಾದ ಬಳಿಕವೂ ರಾಜ್ ಕುಮಾರ್ ಅವರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದರು. ಕನ್ನಡ ಸಾಹಿತಿಗಳಾದ ಡಿ.ವಿ. ಗುಂಡಪ್ಪ, ಜಿ.ಪಿ.ರಾಜರತ್ನಂ, ಮಾಸ್ತಿ ವೆಂಕಟೇಶ ಐಯ್ಯಂಗರ್ ಅವರೂ ಕೂಡ ಇಲ್ಲಿಗೆ ಬರುತ್ತಿದ್ದರು ಎಂದು ಅರುಣ್ ತಿಳಿಸಿದ್ದಾರೆ. 
ವಿದ್ಯಾರ್ಥಿ ಭವನದ ಸಮಯ ಇಂತಿದೆ...
ಸೋಮವಾರದಿಂದ ಗುರುವಾರದವರೆಗೂ ಬೆಳಿಗ್ಗೆ 6.30 ರಿಂದ 11.30ರವರೆಗೂ ವಿದ್ಯಾರ್ಥಿ ಭವನ ತೆರೆದಿರುತ್ತದೆ. ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆ ವರೆಗೂ ತೆರೆಯಲಾಗಿರಿತ್ತೆ. ಈ ಹಿಂದೆ ಹೇಳಿದಂತೆಯೇ ವಿದ್ಯಾರ್ಥಿ ಭವನ ಶುಕ್ರವಾರ ಬಂದ್ ಆಗಿರುತ್ತದೆ. ಇನ್ನು ವಾರಾಂತ್ಯದ ದಿನಗಳಾದ ಶನಿವಾರ ಹಾಗೂ ಭಾನುವಾರದ ಸಮಯದಲ್ಲಿ ಬದಲಾವಣೆಗಳಿದ್ದು, ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ಗಂಟೆ ಹಾಗೂ ಮಧ್ಯಾಹ್ನ 1.30ರಿಂದ ರಾತ್ರಿ 8 ಗಂಟೆಗೆ ತೆರೆಯಲಾಗಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com