ಪಾಕಿಸ್ತಾನಕ್ಕೆ ಹೋಗಿ ಬಂದ ಸಿಎಂ ಸಿದ್ದು, ಜಮೀರ್ ಅಹ್ಮದ್..?: ವೈರಲ್ ಆಯ್ತು ಸುಳ್ಳು ಸುದ್ದಿ

ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಪಾಕಿಸ್ತಾನ ಹೋಗಿ ಬಂದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಸುಳ್ಳುಸುದ್ದಿಗೆ ಕಾರಣವಾದ ನಕಲಿ ಪತ್ರ
ಸುಳ್ಳುಸುದ್ದಿಗೆ ಕಾರಣವಾದ ನಕಲಿ ಪತ್ರ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಗಣನೆ ಆರಂಭವಾಗಿರುಂತೆಯೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಆರ್ಭಟ ಮುಂದುವರೆದಿದ್ದು, ಇದೀಗ ಹೊಸ ಸೇರ್ಪಡೆ ಎಂಬಂತೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಚಾಮರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹ್ಮದ್ ಪಾಕಿಸ್ತಾನ ಹೋಗಿ ಬಂದಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ಹೌದು ಕಳೆದ ಏಪ್ರಿಲ್ 13ರಂದು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಜಮೀರ್ ಅಹ್ಮದ್ ಖಾನ್ ಪಾಕಿಸ್ತಾನಕ್ಕೆ ತೆರಳಿ ಅದೇ ದಿನ ವಾಪಸ್ ಆಗಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಕಳೆದ ಏಪ್ರಿಲ್ 13ರಂದು ಮುಂಬೈನಿಂದ ಕರಾಚಿಗೆ ತೆರಳಿದ್ದರು. ಅಲ್ಲಿ ಒಂದಷ್ಟು ಕಾಲ ಕಳೆದು ಬಳಿಕ ಕರಾಚಿಯಿಂದ ಮುಂಬೈ ವಾಪಸ್ ಆಗಿದ್ದು, ಅದೇ ದಿನ ಮುಂಬೈನಿಂದ ಬೆಂಗಳೂರಿಗೆ ಇಬ್ಬರೂ ನಾಯಕರು ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು. ಈ ಪತ್ರವನ್ನು ಪರಿಶೀಲಿಸಿರುವ ವಿಮಾನಯಾನ ಸಂಸ್ಥೆಗಳು ಇದು ನಕಲಿ ಪತ್ರ ಎಂದು ಸ್ಪಷ್ಟಪಡಿಸಿವೆ. ಅಲ್ಲದೆ ಪತ್ರದಲ್ಲಿರುವ ವಿಎಸ್ ಆರ್ ವೆಂಚರ್ಸ್ ಸಂಸ್ಥೆಯ ಹೆಸರೂ ಕೂಡ ನಕಲಿಯಾಗಿದೆ ಎನ್ನಲಾಗಿದೆ. ಹೀಗಾಗಿ ಇದೊಂದು ಸುಳ್ಳು ಸುದ್ದಿ ಎಂದು ಸಾಬಿತಾಗಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಲ್ಲೀನರಾಗಿರುವ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ಅವರು ಆದ್ಯಾವಾಗ ಸಮಯ ಮಾಡಿಕೊಂಡು ಪಾಕಿಸ್ತಾನಕ್ಕೆ ತೆರಳಿದ್ದರು . ಪಾಕಿಸ್ತಾನಕ್ಕೆ ತೆರಳುವುದಿದ್ದರೂ ಅಲ್ಲಿ ಯಾರಿದ್ದಾರೆ ಎಂದು ಅವರ ಭೇಟಿ ಮಾಡಲು ತೆರಳಿದ್ದರು ಎಂದು ಟ್ವೀಟಿಗರು ಸುಳ್ಳುಸುದ್ದಿ ಹಬ್ಬಿಸಿರುವವರ ವಿರುದ್ಧ ಕಿಡಿಕಾರಿದ್ದಾರೆ.
ಇದೇ ವಿಚಾರವಾಗಿ ಅಲೋಕ್ ತಿವಾರಿ ಎಂಬ ಫೇಸ್ ಬುಕ್ ಖಾತೆದಾರರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದು. ತೀವ್ರ ಪ್ರಚಾರದ ನಡುವೆಯೇ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಅವರಿಗೆ ಪಾಕಿಸ್ತಾನಕ್ಕೆ ಹೋಗಿ ಬರಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com