ಬಿಬಿಎಂಪಿ ನೂತನ ಆಯುಕ್ತರಾಗಿ ಮಹೇಶ್ವರ್ ರಾವ್ ನೇಮಕ

ಮಂಜುನಾಥ್ ಪ್ರಸಾದ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಬಿಬಿಎಂಪಿ ಆಯುಕ್ತ ಸ್ಥಾನಕ್ಕೆ ಕೃಷಿ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಲಾಗಿದೆ...
ಬಿಬಿಎಂಪಿ
ಬಿಬಿಎಂಪಿ
Updated on
ಬೆಂಗಳೂರು: ಮಂಜುನಾಥ್ ಪ್ರಸಾದ್ ಅವರ ವರ್ಗಾವಣೆಯಿಂದ ತೆರವಾಗಿದ್ದ ಬಿಬಿಎಂಪಿ ಆಯುಕ್ತ ಸ್ಥಾನಕ್ಕೆ ಕೃಷಿ ಇಲಾಖೆ ಕಾರ್ಯದರ್ಶಿ ಎಂ.ಮಹೇಶ್ವರ್ ರಾವ್ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ನೀಡಿದ್ದ ದೂರು ಆಧರಿಸಿ ಚುನಾವಣಾ ಆಯೋಗ ನೀಡಿದ ನಿರ್ದೇಶದನ ಮೇಲೆಗೆ ಬೆಂಗಳೂರು ಚುನಾವಣಾಧಿಕಾರಿಯೂ ಆಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ವರ್ಗಾವಣೆಯಿಂದ ತೆರವಾಗಿದ್ದ ಬಿಬಿಎಂಪಿ ಆಯುಕ್ತ ಸ್ಥಾನಕ್ಕೆ ಮಹೇಶ್ವರ್ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ. 
ಎಂ ಮಹೇಶ್ವರ್ ರಾವ್ ಅವರೇ ಇನ್ನು ಮುಂದೆ ಚುನಾವಣಾಧಿಕಾರಿಯಾಗಿಯೂ ಮುಂದುವರೆಯಲಿದ್ದಾರೆಂದು ತಿಳಿದುಬಂದಿದೆ. 
ಬಿಬಿಎಂಪಿ ಆಯುಕ್ತರಾಗಿದ್ದ ಹಿರಿಯ ಐಎಎಸ್ ಅದಿಕಾರಿ ಎನ್. ಮಂಜುನಾಥ್ ಸೇರಿ ವಿವಿಧ ಜಿಲ್ಲಾಧಿಕಾರಿಗಳ ವಿರುದ್ಧ ಚುನಾವಣಾ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಮತ್ತು ಚುನಾವಣಾ ವಿಚಾರಗಳಲ್ಲಿ ಪಕ್ಷಪಾತ ಅನುಸರಿಸುತ್ತಿದ್ದು, ಹೋಲ್ಡಿಂಗ್ಸ್ ಗಳನ್ನು ಹಾಕಲು ಅನುಮತಿ ಕೋರಿದರೂ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಮೇ.2 ರಂದು ಬಿಜೆಪಿ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನಲೆಯಲ್ಲಿ ಮಂಜುನಾಥ ಪ್ರಸಾದ್ ಅವರ ವರ್ಗಾವಣೆ ನಡೆದಿದೆ ಎಂದು ಹೇಳಲಾಗುತ್ತಿದೆ. 
ನನ್ನ ಮುಂದಿನ ಕರ್ತವ್ಯ ಎಲ್ಲಿ ಎಂಬುದು ಗೊತ್ತಿಲ್ಲ. ವರ್ಗಾವಣೆಗೆ ಕಾರಣಗಳೂ ತಿಳಿಯುತ್ತಿಲ್ಲ ಎಂದು ಮಂಜುನಾಥ್ ಪ್ರಸಾದ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com