ಬೆಂಗಳೂರು: ಕಾಮರ್ಸ್ ಕೋರ್ಸ್ ಗೆ ವಿದ್ಯಾರ್ಥಿಗಳ ಮೊದಲ ಆದ್ಯತೆ!

ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಕಾಮರ್ಸ್ ಕೋರ್ಸ್ ಗೆ ಹೆಚ್ಚಿನ ಡಿಮ್ಯಾಂಡ್ ಕೇಳಿ ಬರುತ್ತಿದೆ. ಕಲೆ ಮತ್ತು ವಿಜ್ಞಾನ ವಿಭಾಗಗಳಿಗಿಂತ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ .,..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡ ಬಳಿಕ ಪೋಷಕರು ಹಾಗೂ ವಿದ್ಯಾರ್ಥಿಗಳು ಪಿಯುಸಿ ಪ್ರವೇಶಾತಿಗಾಗಿ ಕಾಲೇಜುಗಳಿಗೆ ತೆರಳಿ ಅರ್ಜಿ ಪಡೆದುಕೊಳ್ಳುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೇ ಈ ವರ್ಷ ಕಾಮರ್ಸ್ ಕೋರ್ಸ್ ಗೆ ಹೆಚ್ಚಿನ ಡಿಮ್ಯಾಂಡ್ ಕೇಳಿ ಬರುತ್ತಿದೆ. ಕಲೆ ಮತ್ತು ವಿಜ್ಞಾನ ವಿಭಾಗಗಳಿಗಿಂತ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ. 
ವಿಜ್ಞಾನ ವಿಭಾಗಕ್ಕೆ ಆಫರ್ ನೀಡಿದ್ದರೂ ಹೆಚ್ಚಿನ ವಿದ್ಯಾರ್ಥಿಗಳು ಕಾಮರ್ಸ್  ಮೊರೆ ಹೋಗುತ್ತಿದ್ದಾರೆ, ಕಳೆದ ವರ್ಷ ಶೇ.82 ರಷ್ಟಿದ್ದ ಡಿಮ್ಯಾಂಡ್ ಈ ವರ್ಷ ಶೇ. 88 ಕ್ಕೇರಿದೆ ಎಂದು ರಾಜಾಜಿನಗರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಎಎಸ್ ಸಿ ಪಿಯುಸಿ ಕಾಲೇಜು ಪ್ರಿನ್ಸಿಪಾಲ್ ಬಸವರಾಜ್ ಹೇಳಿದ್ದಾರೆ.
ಕಾಮರ್ಸ್ ತೆಗೆದುಕೊಂಡರೇ ಮುಂದಿನ ವೃತ್ತಿಗೆ ಅನುಕೂಲವಾಗುವುದು ಹಾಗೇಯೆ ಹೆಚ್ಚಿನ ಉದ್ಯೋಗವಕಾಶಗಳು ಇವೆ ಎಂದು ನಂಬಿದ್ದಾರೆ, ಎಂಜಿನೀಯರಿಂಗ್ ಗೆ ಹೆಚ್ಚಿನ ಸ್ಕೋಪ್ ಇಲ್ಲ, ಮೆಡಿಸನ್ ಓದುವುದು ಹೆಚ್ಚಿನ ಸಮಯ ಹಿಡಿಯುತ್ತದೆ. ಹೀಗಾಗಿ ನಾನು ಕಾಮರ್ಸ್ ಆಯ್ಕೆ ಮಾಡಿಕೊಂಡೆ ಎಂದು ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಈ ವರ್ಷ ಕಾಮರ್ಸ್  ಕೋರ್ಸ್ ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಶೇ.90 ರಷ್ಟು ಮಾರ್ಕ್ಸ್ ಕಡ್ಡಾಯ ಮಾಡುವ ಸಾಧ್ಯತೆಯಿದೆ ಎಂದು ಕೆಲ ಕಾಲೇಜಿನ ಪ್ರಾಂಶುಪಾಲರು ಅಭಿಪ್ರಾಯ ಪಟ್ಟಿದ್ದಾರೆ. ಅರ್ಜಿಗಳು ಎಷ್ಟು ಬರುತ್ತವೆ ಎಂಬುದನ್ನು ಪರಿಗಣಿಸಿ ಅದರ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಸೋಮವಾರ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, 1,07,045 ವಿದ್ಯಾರ್ಥಿಗಳು ಎ ಗ್ರೇಡ್ ಪಡೆದುಕೊಂಡಿದ್ದಾರೆ, ನಮ್ಮ ಪ್ರಕಾರ ಲಕ್ಷಾಂತರ ವಿದ್ಯಾರ್ಥಿಗಳು ಸಮಾನಾಂತರ ಅಂಕಗಳನ್ನು ಪಡೆದುಕೊಂಡಿದ್ದಾರೆ, ಹೀಗಾಗಿ ಅರ್ಜಿಗಳನ್ನು ಅಧರಿಸಿ ಕಟ್ ಆಫ್ ಪ್ರಮಾಣ ನಿರ್ಧರಿಸಲಾಗುತ್ತದೆ. ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಮಾರ್ಕ್ ನಿಗದಿ ಪಡಿಸಲಾಗಿದೆ, ಏಕೆಂದರೆ ಬಾಲಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಾಲಕಿಯರು ಉತ್ತೀರ್ಣರಾಗಿದ್ದಾರೆ, ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಹಲವು ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ, ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡಿದೆ, ಪ್ರಿಪರೇಟರಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಈಗಾಗಲೇ ದಾಖಲಾತಿ ಪ್ರಕ್ರಿಯೆ ಮುಗಿದಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. 
ಕಾಲೇಜು ಪ್ರವೇಶಕ್ಕಾಗಿ ಅರ್ಜಿ ಶುಲ್ಕವನ್ನು 500 ರು ಗೆ ನಿಗದಿ ಪಡಿಸಲಾಗಿದೆ ಪಿಯು ಇಲಾಖೆ ಅರ್ಜಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಬಾರದೆಂದು ಸುತ್ತೋಲೆ ಹೊರಡಿಸಿದ್ದರೂ, ಅರ್ಜಿಗಾಗಿ 500 ರು ಪಡೆದುಕೊಳ್ಳಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳು ಅರ್ಜಿ ಫಾರಂ ಅನ್ನು ಇಲಾಖೆಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡಿದ್ದಲ್ಲಿ ಅದನ್ನು ಕಾಲೇಜು ಆಡಳಿತ ಮಂಡಳಿ ಅನುಮತಿಸಬೇಕು ಎಂದು ಸೂಚಿಸಿದೆ.
  • ಕಾಲೇಜುಗಳು ತಮ್ಮಲ್ಲಿರುವ ಕೋರ್ಸ್ ಹಾಗೂ ಸೀಟುಗಳ ವಿವರವನ್ನು ಪ್ರಕಟಿಸಬೇಕು.
  • ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಬಗ್ಗೆ ವೆಬ್ ಸೈಟ್ ಅಥವಾ ನೋಟೀಸ್ ಬೋರ್ಡ್ ನಲ್ಲಿ ಹಾಕಬೇಕು,
  • ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾದ ನಂತರದ ನಾಲ್ಕನೇ ದಿನವೂ ಅರ್ಜಿಗಳನ್ನು ವಿತರಿಸಬೇಕು ಎಂದೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮಾರ್ಗ ಸೂಚಿಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com