ಬೆಂಗಳೂರಿನಲ್ಲಿ ಪತ್ತೆಯಾದ ವೋಟರ್ ಐಡಿ ನಕಲಿ ಅಲ್ಲ; ಇಬ್ಬರ ಬಂಧನ: ಚುನಾವಣಾ ಆಯೋಗ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಪತ್ತೆಯಾದ ಸುಮಾರು 10 ಸಾವಿರ ವೋಟರ್...
ಸಂಜೀವ್ ಕುಮಾರ್
ಸಂಜೀವ್ ಕುಮಾರ್
ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಪತ್ತೆಯಾದ ಸುಮಾರು 10 ಸಾವಿರ ವೋಟರ್ ಐಡಿಗಳು ನಕಲಿ ಅಲ್ಲ. ಎಲ್ಲವೂ ಅಸಲಿ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಜೀವ್ ಕುಮಾರ್ ಅವರು, ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಎಲ್ಲಾ ಗುರುತಿನ ಚೀಟಿ ಅಸಲಿಯಾಗಿದ್ದು, ಮತದಾರರ ಮೇಲೆ ಪ್ರಭಾವ ಬೀರಲು ಈ ರೀತಿ ಸಂಗ್ರಹಿಸಲಾಗಿದೆ ಎಂದರು.
ಯಾವುದೇ ಹೆಸರುಗಳನ್ನು ಹೊಸದಾಗಿ ಮತದಾರರ ಪಟ್ಟಿಗೆ ಸೇರಿಸಿಲ್ಲ ಮತ್ತು ಹೊಸ ಗುರುತಿನ ಚೀಟಿಯನ್ನು ಸೃಷ್ಟಿ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಂಜೀವ್ ಕುಮಾರ್ ಅವರು ತಿಳಿಸಿದ್ದಾರೆ. ಆದರೆ ರಾಜರಾಜೇಶ್ವರಿ ನಗರ ಚುನಾವಣೆ ರದ್ದುಗೊಳಿಸುವ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.
ಜಾಲಹಳ್ಳಿಯ ಎಸ್ ಎಲ್ ವಿ ಅಪಾರ್ಟ್​ವೆುಂಟ್ ನಲ್ಲಿ 9746 ಮತದಾರರ ಗುರುತಿನ ಚೀಟಿ, ಐದು ಲ್ಯಾಪ್ ಟಾಪ್, ಒಂದು ಪ್ರಿಂಟರ್ ಅನ್ನು ಚುನಾವಣಾ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com