ಮತದಾನ ಮುಕ್ತಾಯದ ಬೆನ್ನಲ್ಲೇ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್

ವಿಧಾನಸಭೆ ಚುನಾವಣಾ ಫಲಿತಾಂಶ ನಾಳೆ ಘೋಷಣೆಯಾಗಲಿದ್ದು, ಅದಕ್ಕೂ ಮೊದಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮೇ 12 ರಂದು ನಡೆದ ವಿಧಾನಸಭೆ ಚುನಾವಣಾ ಫಲಿತಾಂಶ ನಾಳೆ ಘೋಷಣೆಯಾಗಲಿದ್ದು, ಅದಕ್ಕೂ ಮೊದಲೇ ರಾಜ್ಯದ ಜನತೆಗೆ ವಿದ್ಯುತ್ ಬೆಲೆ ಏರಿಕೆ ಶಾಕ್ ತಟ್ಟಿದೆ.
ಕರ್ನಾಟಕ ವಿದ್ಯುತ್ ನಿಗಮ ಮಂಡಳಿ ಮಂಡಳಿ ಇಂದು ತನ್ನ ನೂತನ ಪರಿಷ್ಕೃತ ವಿದ್ಯುತ್ ದರವನ್ನು ಘೋಷಣೆ ಮಾಡಿದ್ದು, ಅದರಂತೆ ವಿದ್ಯುತ್ ದರದಲ್ಲಿ ಶೇ.13 ರಿಂದ ಶೇ.26ರವರೆಗೂ ದರ ಏರಿಕೆಯಾಗಿದೆ.  ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ಅಧ್ಯಕ್ಷ ಶಂಕರ ಲಿಂಗೇಗೌಡ ಅವರು ದರ ಏರಿಕೆ ಕುರಿತು ಮಾಹಿತಿ ನೀಡಿದರು.
ಬೆಸ್ಕಾಂ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ದರದಲ್ಲಿ ಶೇ. 13ರಷ್ಚು ಹೆಚ್ಚಳವಾಗಿದ್ದು,  ಪರಿಷ್ಕೃತ ದರ ಪ್ರತೀ ಯೂನಿಟ್ ಗೆ 82 ಪೈಸೆ ಏರಿಕೆಯಾಗಿದೆ. ಅಂತೆಯೇ ಮೆಸ್ಕಾಂ ವ್ಯಾಪ್ತಿಯಲ್ಲಿ ಶೇ. 19ರಷ್ಚು ದರ ಹೆಚ್ಚಳವಾಗಿದ್ದು, ಪರಿಷ್ಕೃತ ದರ ಪ್ರತೀ ಯೂನಿಟ್ ಗೆ 1.23 ರೂ ಏರಿಕೆಯಾಗಿದೆ.
ಉಳಿದಂತೆ ಸೆಸ್ಕಾಂ ವ್ಯಾಪ್ತಿಯಲ್ಲಿ ಶೇ. 18ರಷ್ಟು ದರ ಏರಿಕೆಯಾಗಿದ್ದು, ಪರಿಷ್ಕೃತ ದರ ಪ್ರತೀ ಯೂನಿಟ್ ಗೆ 1.13 ರೂ ಏರಿಕೆಯಾಗದಿದೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಶೇ. 19ರಷ್ಚು ದರ ಹೆಚ್ಚಳವಾಗಿದ್ದು, ಪರಿಷ್ಕೃತ ದರ ಪ್ರತೀ ಯೂನಿಟ್ ಗೆ 1.13 ರೂ ಏರಿಕೆಯಾಗಲಿದೆ. ಜೆಸ್ಕಾಂ ವ್ಯಾಪ್ತಿಯಲ್ಲಿ ಶೇ. 26ರಷ್ಟ ದರ ಹೆಚ್ಚಳವಾಗಿದ್ದು, ಪರಿಷ್ಕೃತ ದರ ಪ್ರತೀ ಯೂನಿಟ್ ಗೆ 1.62 ರೂ ಏರಿಕೆಯಾಗಲಿದೆ. ಇನ್ನು ನೂತನ ದರಗಳು ಏಪ್ರಿಲ್ 1ರಿಂದಲೇ ಜಾರಿಗೆ ಬರಲಿವೆ ಎಂದು ಶಂಕರ ಲಿಂಗೇಗೌಡ ಅವರು ಮಾಹಿತಿ ನೀಡಿದ್ದಾರೆ.
ಪ್ರತೀ ವರ್ಷ ನವಂಬರ್ ನಲ್ಲೇ ವಿದ್ಯುತ್ ದರ ಪರಿಷ್ಕರಣೆಯಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆ ಇದ್ದಿದ್ದರಿಂದ ದರ ಹೆಚ್ಚಳವಾಗಿರಲಿಲ್ಲ. ಆದರೆ ಇದೀಗ ಚುನಾವಣೆ ಮುಗಿದ ಬೆನ್ನಲ್ಲೇ ವಿದ್ಯುತ್ ನಿಯಂತ್ರಣ ಮಂಡಳಿ ದರ ಏರಿಕೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com