ಮರುಕಳಿಸಿದ ಇತಿಹಾಸ; ಶಿವಮೊಗ್ಗಕ್ಕಿಲ್ಲ ಪೂರ್ಣಾವಧಿ ಸಿಎಂ ಭಾಗ್ಯ!

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮೇ.17ರಂದು ಅಧಿಕಾರ ಸ್ವೀಕಾರ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಮೇ,19 (ಶನಿವಾರ)ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆ ಪಾಲಿಗೆ ಪೂರ್ಣಾವಧಿ ಮುಖ್ಯಮಂತ್ರಿ ಭಾಗ್ಯ ಇಲ್ಲ ಎಂಬುದು...
ಮರುಕಳಿಸಿದ ಇತಿಹಾಸ; ಶಿವಮೊಗ್ಗಕ್ಕಿಲ್ಲ ಪೂರ್ಣಾವಧಿ ಸಿಎಂ ಭಾಗ್ಯ!
ಮರುಕಳಿಸಿದ ಇತಿಹಾಸ; ಶಿವಮೊಗ್ಗಕ್ಕಿಲ್ಲ ಪೂರ್ಣಾವಧಿ ಸಿಎಂ ಭಾಗ್ಯ!
ಶಿವಮೊಗ್ಗ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಮೇ.17ರಂದು ಅಧಿಕಾರ ಸ್ವೀಕಾರ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು, ಮೇ,19 (ಶನಿವಾರ)ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಶಿವಮೊಗ್ಗ ಜಿಲ್ಲೆ ಪಾಲಿಗೆ ಪೂರ್ಣಾವಧಿ ಮುಖ್ಯಮಂತ್ರಿ ಭಾಗ್ಯ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುವಂತೆ ಮಾಡಿದೆ. 
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಒಟ್ಟು 4 ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಯಾರೊಬ್ಬರೂ ಈ ವರೆಗೂ ಪೂರ್ಣಾವಧಿ ಅಧಿಕಾರ ಪೂರ್ಣಗೊಳಿಸಿಲ್ಲ. 
1956ರ ಆಗಸ್ಟ್ ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಮುಖಂಡ ಕಡಿದಾಳ್ ಮಂಜಪ್ಪ ಅವರು ರಾಜ್ಯದ ಮೂರನೇ ಹಾಗೂ ಜಿಲ್ಲೆಯ ಪ್ರಥಮ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಆದರೆ, ಕೇವಲ 75 ದಿನಗಳಿಗೆ ಅಕ್ಟೋಬರ್ ನಲ್ಲಿ ಎಸ್.ನಿಜಲಿಂಗಪ್ಪ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗಿತ್ತು. 
ಇದಾದ ಬಳಿಕ 1990ರಲ್ಲಿ ರಾಜ್ಯಕ್ಕೆ ಪ್ರವಾಸ ಬಂದಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ವಾಪಸ್ ತೆರಳುವಾಗ ವಿಮಾನ ನಿಲ್ದಾಣದಲ್ಲಿಯೇ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಪದಚ್ಯುತಗೊಳಿಸಿ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ್ದರು. 
ಬಂಗಾರಪ್ಪ ಅವರು 2 ವರ್ಷ ಅಧಿಕಾರವನ್ನೂ ನಡೆಸಿದರು. ಆದರೆ, ರಾಜೀವ್ ಗಾಂಧಿ ನಿಧನದ ಬಳಿಕ ಎಐಸಿಸಿ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರೊಂದಿಗೆ ತೀವ್ರ ಭಿನ್ನಾಭಿಪ್ರಾಯದಿಂದಾಗಿ ಬಂಗಾರಪ್ಪ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. 
ದೇಶದ ಪ್ರಧಾನಮಂತ್ರಿಯಾಗಲು ಹೊರಟಿದ್ದ ದೇವೇಗೌಡ ಅವರು ರಾಜ್ಯ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಿದ್ದರು. ಈ ವೇಳೆ ಮುಖ್ಯಮಂತ್ರಿಯಾಗುವ ಭಾಗ್ಯ ಜೆ.ಹೆಚ್. ಪಟೇಲ್ ಅವರಿಗೆ ದೊರಕಿತ್ತು. 1996ರಲ್ಲಿ ಜೆ.ಹೆಚ್ ಪಟೇಲ್ ಜಿಲ್ಲೆಯ (ಅವಿಭಜಿತ ಶಿವಮೊಗ್ಗ-ದಾವಣಗೆರೆ ಜಿಲ್ಲೆ)3ನೇ ಮುಖ್ಯಮಂತ್ರಿಯಾಗಿ 3 ವರ್ಷ ಅಧಿಕಾರ ನಡೆಸಿದರು, ಬಳಿಕ ಯಡಿಯೂರಪ್ಪ 3 ಬಾರಿ ಅವಧಿಗೆ ಮುನ್ನವೇ ಅಧಿಕಾರವನ್ನು ತ್ಯಾಗ ಮಾಡಿದ್ದಾರೆ. 
ಶಿವಮೊಗ್ಗ ಜಿಲ್ಲೆಯ ಮುಖ್ಯಮಂತ್ರಿಗಳು
ಕಡಿದಾಳ್ ಮಂಜಪ್ಪ:  19-08-1956 ರಿಂದ 31-10-1956  (75 ದಿನಗಳು)
ಎಸ್.ಬಂಗಾರಪ್ಪ:  17-10-1990 ರಿಂದ 19-11-1992 (756 ದಿನಗಳು)
ಜೆ.ಹೆಚ್.ಪಟೇಲ್: 31-05-1996 ರಿಂದ 17-10-1999 (1,225 ದಿನಗಳು)
ಬಿ.ಎಸ್.ಯಡಿಯೂರಪ್ಪ: 12-11-2007 ರಿಂದ 19-11-2007 (8 ದಿನಗಳು)
ಬಿ.ಎಸ್.ಯಡಿಯೂರಪ್ಪ: 30-05-2008 ರಿಂದ 19-11-2011 (1,269 ದಿನಗಳು)
ಬಿ.ಎಸ್.ಯಡಿಯೂರಪ್ಪ: 17-05-2018 ರಿಂದ 19-05-2018 (3 ದಿನಗಳು)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com