ದೀಪಾವಳಿ: ರಾಜ್ಯದಲ್ಲೂ ಪಟಾಕಿ ನಿರ್ಬಂಧಕ್ಕೆ ಚಿಂತನೆ

ರಾಜ್ಯದಲ್ಲೂ ರಾಜಧಾನಿ ದೆಹಲಿ ಮಾದರಿಯಲ್ಲಿಯೇ ಪಟಾಕಿಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೆ ತರಲು ಚಿಂತನೆಗಳು ನಡೆಯುತ್ತಿದ್ದು, ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯ ನಗದಿಯಾಗುವ ಸಾಧ್ಯತೆಗಳಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಲ್ಲೂ ರಾಜಧಾನಿ ದೆಹಲಿ ಮಾದರಿಯಲ್ಲಿಯೇ ಪಟಾಕಿಗೆ ಕಟ್ಟುನಿಟ್ಟಿನ ನಿಯಂತ್ರಣ ಜಾರಿಗೆ ತರಲು ಚಿಂತನೆಗಳು ನಡೆಯುತ್ತಿದ್ದು, ಪಟಾಕಿ ಸಿಡಿಸಲು ನಿರ್ದಿಷ್ಟ ಸಮಯ ನಗದಿಯಾಗುವ ಸಾಧ್ಯತೆಗಳಿವೆ. 
ಬೆಳಕಿನ ಹಬ್ಬ ದೀಪಾವಳಿಯ 4 ದಿನಗಳ ಕಾಲ ಪ್ರತಿ ದಿನ ಕೇವಲ 2 ಗಂಟೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಬಗ್ಗೆ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಒಪ್ಪಿಗೆ ದೊರೆಯುವುದಷ್ಟೇ ಬಾಕಿಯಿದೆ. 
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಒಪ್ಪಿಗೆ ನೀಡಿದ ಕೂಡಲೇ ಪಟಾಕಿಗೆ ನಿಯಂತ್ರಣ ಹೇರಿ ಸರ್ಾರ ಸುತ್ತೋಲೆ ಹೊರಡಿಸಲಿದ್ದು, ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಬೇಕಿದೆ. ಜೊತೆಗೆ ಸರ್ಕಾರ ನಿರ್ಬಂಧ ವಿಧಿಸಿದ ಸ್ಥಳದಲ್ಲಿ ಪಟಾಕಿ ಹೊಡೆಯಬಾರದು ಎಂದ ನಿಯಮ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. 
ವಾಯುಮಾಲಿನ್ಯ ಹಾಗೂ ಶಬ್ಧಮಾಲಿನ್ಯಕ್ಕೆ ಕಾರಣವಾಗುವ ಪಟಾಕಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಸೂಚಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಈ ಸಂಬಂಧ ನ.5 ರಂದು ಸೋಮವಾರದಿಂದ ನ.8ರ ಗುರುವಾರದವರೆಗೆ ನಾಲ್ಕು ದಿನಗಳ ಕಾಲ ಮಾತ್ರ ಪಟಾಕಿಗೆ ಅನುಮತಿ ನೀಡಲಾಗುವುದು. ಜೊತೆಗ ರಾತ್ರಿ 2 ಗಂಟೆಗಳ ಕಾಲ ಮಾತ್ರ ಅನುಮತಿ ನೀಡಲು ಸರ್ಕಾರ ಮುಂದಾಗಿದೆ. 
ಜೊತೆಗೆ ಸುಪ್ರೀಂ ಸೂಚಿಸಿರುವಂತೆಯೇ ವಾಯುಮಾಲಿನ್ಯ, ಶಬ್ದಮಾಲಿನ್ಯ ಉಂಟು ಮಾಡದ ಪಟಾಕಿಗಳನ್ನು ಮಾತ್ರ ಸಿಡಿಸಲು ಅನುಮತಿ ನೀಡಬೇಕು. ಸೂಕ್ಷ್ಮ ಪ್ರದೇಶ, ಆಸ್ಪತ್ರೆ, ದೇವಸ್ಥಾನ ಮತ್ತಿತರ ನಿರ್ಬಂಧಿತ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ನಿಗಾ ವಹಿಸಬೇಕು ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com